ವಿದೇಶ

ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನಕ್ಕೆ ಬೆಂಬಲ ನೀಡಲು ಸಿದ್ಧ: ಚೀನಾ

ಭಯೋತ್ಪಾದನೆ ಹಾಗೂ ಗಡಿಯಲ್ಲಿ ಅತಿಕ್ರಮಣಗಳಂತಹ ಘಟನೆಗಳು ಪಾಕಿಸ್ತಾನ ಮತ್ತು ಭಾರತದ ನಡುವಿನ ಸಂಬಂಧವನ್ನು ಈಗಾಗಲೇ ಹದಗೆಡುವಂತೆ ಮಾಡಿದ್ದು, ಕಾಶ್ಮೀರ ವಿಚಾರವಿಡಿದು...

ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನಕ್ಕೆ ಬೆಂಬಲ ನೀಡಲು ಸಿದ್ಧ: ಚೀನಾ
ಸಂಗ್ರಹ ಚಿತ್ರ
Published On :

ಲಾಹೋರ್: ಭಯೋತ್ಪಾದನೆ ಹಾಗೂ ಗಡಿಯಲ್ಲಿ ಅತಿಕ್ರಮಣಗಳಂತಹ ಘಟನೆಗಳು ಪಾಕಿಸ್ತಾನ ಮತ್ತು ಭಾರತದ ನಡುವಿನ ಸಂಬಂಧವನ್ನು ಈಗಾಗಲೇ ಹದಗೆಡುವಂತೆ ಮಾಡಿದ್ದು, ಕಾಶ್ಮೀರ ವಿಚಾರವಿಡಿದು ಇದಕ್ಕೆ ಮತ್ತಷ್ಟು ಹುಳಿ ಹಿಂಡುವಂತಹ ಪ್ರಯತ್ನಗಳನ್ನು ಚೀನಾ ಮಾಡಲು ಹೊರಟಿದೆ.

ಕಾಶ್ಮೀರ ಸೇರಿದಂತೆ ಇನ್ನಿತರೆ ವಿಚಾರಗಳ ಕುರಿತು ಪಾಕಿಸ್ತಾನಕ್ಕೆ ಬೆಂಬಲ ನೀಡಲು ಸಿದ್ಧರಿದ್ದೇವೆಂದು ಚೀನಾ ಹೇಳಿಕೊಂಡಿದೆ.

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಶಹ್ಬಾಜ್ ಶರೀಫ್ ಅವರ ಕಚೇರಿ ಈ ಬಗ್ಗೆ ಪತ್ರಿಕಾ ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿದ್ದು, ಚೀನಾ ಬೆಂಬಲ ನೀಡುತ್ತಿರುವ ಕುರಿತಂತೆ ಸ್ಪಷ್ಟಪಡಿಸಿದೆ ಎಂದು ಡಾನ್ ವರದಿ ಮಾಡಿದೆ.

ಚೀನಾದ ಉನ್ನತಾಧಿಕಾರಿಗಳು ಲಾಹೋರ್ ಗೆ ಭೇಟಿ ನೀಡಿದ್ದು, ಮಾತುಕತೆ ವೇಳೆ ಪಾಕಿಸ್ತಾನದ ಮೇಲೆ ಯಾವುದೇ ರೀತಿಯ ಆಕ್ರಮಣ ನಡೆದರೂ ಪಾಕಿಸ್ತಾನಕ್ಕೆ ಸಂಪೂರ್ಣ ರೀತಿಯಲ್ಲಿ ಚೀನಾ ಬೆಂಬಲ ನೀಡಲಿದೆ ಎಂದು ಹೇಳಿದ್ದಾರೆನ್ನಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.