'ಪಾಕ್, ಸೌದಿ, ಇರಾನ್ ನಂತಹ ಇಸ್ಲಾಮಿಕ್ ರಾಷ್ಟ್ರಗಳಿಂದ ಭಯೋತ್ಪಾದನೆಗೆ ಬೆಂಬಲ'
ಇಸ್ಲಾಂ ಗುರುತನ್ನು ಹೊಂದಿರುವ ರಾಷ್ಟ್ರಗಳಾದ ಇರಾನ್, ಪಾಕಿಸ್ತಾನ, ಸೌದಿ ಅರೇಬಿಯಾ ಆಂತರಿಕವಾಗಿ ಭಯೋತ್ಪಾದಕ ಸಂಘಟನೆಗಳಾದ ಇಸೀಸ್, ಹಮಾಸ್, ಅಲ್- ಖೈದಾ ಸೇರಿದಂತೆ ಹಲವು ಭಯೋತ್ಪಾದಕ ಸಂಘಟನೆಗಳಿಗೆ ಬೆಂಬಲ ನೀಡುತ್ತಿವೆ

ವಾಷಿಂಗ್ ಟನ್: ಇಸ್ಲಾಂ ಗುರುತನ್ನು ಹೊಂದಿರುವ ರಾಷ್ಟ್ರಗಳಾದ ಇರಾನ್, ಪಾಕಿಸ್ತಾನ, ಸೌದಿ ಅರೇಬಿಯಾ ಆಂತರಿಕವಾಗಿ ಭಯೋತ್ಪಾದಕ ಸಂಘಟನೆಗಳಾದ ಇಸೀಸ್, ಹಮಾಸ್, ಅಲ್- ಖೈದಾ ಸೇರಿದಂತೆ ಹಲವು ಭಯೋತ್ಪಾದಕ ಸಂಘಟನೆಗಳಿಗೆ ಬೆಂಬಲ ನೀಡುತ್ತಿವೆ ಎಂದು ಅಮೆರಿಕದ ಇಸ್ಲಾಮಿಕ್ ವೇದಿಕೆಯ ನಾಯಕ ಝುಹ್ಡಿ ಜೆಸ್ಸೆರ್ ಅಮೆರಿಕ ಸಂಸದರಿಗೆ ತಿಳಿಸಿದ್ದಾರೆ.
ಇರಾನ್, ಪಾಕಿಸ್ತಾನ, ಸೌದಿ ಅರೇಬಿಯಾದ ರಾಜಕೀಯ ಚಳುವಳಿಗಳು ಹಾಗೂ ಇಸ್ಲಾಮಿಕ್ ಅಸ್ತಿತ್ವ ಭಯೋತ್ಪಾದನೆಗೆ ಒಳಗಿನಿಂದಲೇ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿದ್ದು, ಇಸ್ಲಾಮ್ ಧರ್ಮದ ರಾಜಕೀಯದಿಂದ ಉಂಟಾಗುವ ಅಪಾಯವನ್ನು ನಿರ್ಲಕ್ಷಿಸುವುದು ಎಷ್ಟು ಅವಿವೇಕವೋ, ಇಡೀ ಮುಸ್ಲಿಂ ಸಮುದಾಯವನ್ನು ಒಬ್ಬಂಟಿಯಾಗಿಸುವುದು ಸಹ ಅಷ್ಟೇ ಅವಿವೇಕ ಎಂದು ಹೇಳಿದ್ದಾರೆ.
ಸೌದಿ, ಪಾಕಿಸ್ತಾನ, ಇರಾನ್ ದೇಶಗಳು ಇಸ್ಲಾಮ್ ನ ಆಡಳಿತ ನಡೆಸುವುದಕ್ಕಾಗಿ ಭಯೋತ್ಪಾದನೆಯನ್ನು ಬಳಸಿಕೊಳ್ಳುತ್ತಿದೆ ಎಂದು ಅಮೆರಿಕ ಸಂಸದರಿಗೆ ಅಲ್ಲಿನ ಇಸ್ಲಾಮಿಕ್ ವೇದಿಕೆಯ ನಾಯಕ ಝುಹ್ಡಿ ಜೆಸ್ಸೆರ್ ತಿಳಿಸಿದ್ದಾರೆ. ಇನ್ನು ಭಯೋತ್ಪಾದಕ ಸಂಘಟನೆಗಳು ಹೆಚ್ಚುತ್ತಿರುವುದರ ಬಗ್ಗೆ ಅಮೆರಿಕ ಸಂಸದರೂ ಸಹ ಆತಂಕ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


