ಅಮೆರಿಕಾ ನಮ್ಮನ್ನು ಅಧಿಕೃತ ಪರಮಾಣು ಶಸ್ತ್ರಾಸ್ತ್ರ ರಾಷ್ಟ್ರ ಎಂದು ಗುರುತಿಸಬೇಕು: ಉತ್ತರ ಕೊರಿಯಾ
ಐದನೇ ಮತ್ತು ಅತಿ ದೊಡ್ಡ ಪರಮಾಣು ಪರೀಕ್ಷೆ ನಡೆಸಿರುವ ಉತ್ತರ ಕೊರಿಯಾ, ಅಮೆರಿಕಾ ದೇಶ ನಮ್ಮನ್ನು 'ಅಧಿಕೃತ ಪರಮಾಣು ಶಸ್ತ್ರಾಸ್ತ್ರ ರಾಷ್ಟ್ರ' ಎಂದು ಗುರುತಿಸಬೇಕೆಂದು ಭಾನುವಾರ ಆಗ್ರಹಿಸಿದೆ.

Published On :
ಸಿಯೋಲ್: ಐದನೇ ಮತ್ತು ಅತಿ ದೊಡ್ಡ ಪರಮಾಣು ಪರೀಕ್ಷೆ ನಡೆಸಿರುವ ಉತ್ತರ ಕೊರಿಯಾ, ಅಮೆರಿಕಾ ದೇಶ ನಮ್ಮನ್ನು 'ಅಧಿಕೃತ ಪರಮಾಣು ಶಸ್ತ್ರಾಸ್ತ್ರ ರಾಷ್ಟ್ರ' ಎಂದು ಗುರುತಿಸಬೇಕೆಂದು ಭಾನುವಾರ ಆಗ್ರಹಿಸಿದೆ.
"(ಅಮೇರಿಕ ಅಧ್ಯಕ್ಷ ಬರಾಕ್) ಒಬಾಮಾ, ಡಿ ಪಿ ಆರ್ ಕೆ (ಉತ್ತರ ಕೊರಿಯಾ) ಅಧಿಕೃತ ಪರಮಾಣು ಶಸ್ತ್ರಾಸ್ತ್ರ ರಾಷ್ಟ್ರವಾಗಿ, ಕುಶಲತೆಯಲ್ಲಿ ಉತ್ತಮ ಸ್ಥಾನದಲ್ಲಿದೆ ಎಂಬುದನ್ನು ಅಲ್ಲಗೆಳೆಯಲು ಕಷ್ಟ ಪಡುತ್ತಿದ್ದಾರೆ ಆದರೆ ಇದು ಅಂಗೈ ಅಡ್ಡ ಹಿಡಿದು ಸೂರ್ಯ ಇಲ್ಲ ಎಂದು ಹೇಳುವಷ್ಟು ಮೂರ್ಖತನ" ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಹೇಳಿರುವುದಾಗಿ ಕೆ ಎನ್ ಸಿ ಎ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ವಿಶ್ವದಾದ್ಯಂತ ವ್ಯಾಪಕ ಟೀಕೆಗೆ ಒಳಗಾಗಿರುವ ಪರಮಾಣು ಪರೀಕ್ಷೆಯನ್ನು ಸಮರ್ಥಿಸಿಕೊಂಡಿರುವ ವಕ್ತಾರ, ಅಮೆರಿಕಾ ಪರಮಾಣು ಬೆದರಿಕೆಗೆ ಇದು ನಮ್ಮ ಪ್ರತಿಕ್ರಿಯೆ ಎಂದು ಹೇಳಿರುವುದಾಗಿ ಮಾಧ್ಯಮ ವರದಿ ಮಾಡಿದೆ.
'ಗುಣಮಟ್ಟ ಮತ್ತು ಸಂಖ್ಯೆಯಲ್ಲಿ' ಉತ್ತರ ಕೊರಿಯಾ ಪರಮಾಣು ಶಸ್ತ್ರಾಸ್ತ್ರಗಳನ್ನು ವೃದ್ಧಿಸಿಕೊಳ್ಳಲಿದೆ ಎಂದು ಹೇಳಿಕೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


