ಪರಮಾಣು ಸುರಕ್ಷತೆ: ಭಾರತದೊಂದಿಗಿನ ಪಾಲುದಾರಿಕೆಗೆ ಪಾಕಿಸ್ತಾನದ ಪ್ರಸ್ತಾಪ
ಪರಮಾಣು ಸುರಕ್ಷತೆ ಹಾಗೂ ಭದ್ರತೆಗಾಗಿ ಪಾಕಿಸ್ತಾನ ಭಾರತದೊಂದಿಗೆ ಪಾಲುದಾರಿಕೆಯ ಪ್ರಸ್ತಾಪವನ್ನು ಮುಂದಿಟ್ಟಿದೆ.

ಇಸ್ಲಾಮಾಬಾದ್: ಪರಮಾಣು ಸುರಕ್ಷತೆ ಹಾಗೂ ಭದ್ರತೆಗಾಗಿ ಪಾಕಿಸ್ತಾನ ಭಾರತದೊಂದಿಗೆ ಪಾಲುದಾರಿಕೆಯ ಪ್ರಸ್ತಾಪವನ್ನು ಮುಂದಿಟ್ಟಿದೆ.
ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿ ಅಜೀಜ್ ಚೌದರಿ ಪರಮಾಣು ಭದ್ರತೆ ವಿಷಯಕ್ಕೆ ಸಂಬಂಧಿಸಿದಂತೆ ಭಾರತದೊಂದಿಗೆ ಪಾಲುದಾರಿಕೆ ಮಾಡಿಕೊಳ್ಳುವ ಪ್ರಸ್ತಾಪವನ್ನು ಮುಂದಿಟ್ಟಿದ್ದಾರೆ ಎಂದು ಪಾಕಿಸ್ತಾನದ ಪತ್ರಿಕೆ ಡಾನ್ ವರದಿ ಮಾಡಿದೆ.
ಪಾಕಿಸ್ತಾನ- ಭಾರತದ ನಡುವೆ ಈಗಾಗಲೇ ಪರಮಾಣು ಸುರಕ್ಷತೆ, ಭದ್ರತೆಗೆ ಸಂಬಂಧಿಸಿದಂತೆ ಒಪ್ಪಂದವಿದೆ. ಆದರೆ ಉಭಯ ರಾಷ್ಟ್ರಗಳ ದ್ವಿಪಕ್ಷೀಯ ಸಂಬಂಧ ಹದಗೆಟ್ಟಿರುವುದರಿಂದ ಸಮಗ್ರವಾಗಿ ಒಪ್ಪಂದ ಜಾರಿಯಾಗಿಲ್ಲ. ಪರಮಾಣು ಅಪಘಾತ ಸಂಭವಿಸಿದಾಗ ಪರಸ್ಪರ ನೆರವು ನೀಡುವುದು ಅಥವಾ ಪರಮಾಣು ವಸ್ತುಗಳ ರಕ್ಷಣೆ ವಿಚಾರದಲ್ಲಿ ನೆರವು ನೀಡುವುದಕ್ಕೆ ಎರಡು ರಾಷ್ಟ್ರಗಳು ಒಪ್ಪಂದಕ್ಕೆ ಸಹಿ ಹಾಕಿವೆ ಆದರೆ ಅದು ಸಮಪರ್ಪಕವಾಗಿ ಜಾರಿಯಾಗಬೇಕಿದೆ.
ಒಪ್ಪಂದದ ಪ್ರಕಾರ ಉಭಯ ದೇಶಗಳು ಸಹ ಪರಸ್ಪರ ನೆರವು ನೀಡಬೇಕು ಎಂದು ಚೌಧರಿ ಅಭಿಪ್ರಾಯಪಟ್ಟಿದ್ದು ದ್ವಿಪಕ್ಷೀಯ ಮಾತುಕತೆ ಹದಗೆಟ್ಟಿರುವ ನಡುವೆಯೂ ಸಹ ಪಾಕಿಸ್ತಾನ ಭಾರತದೊಂದಿಗಿನ ಪಾಲುದಾರಿಕೆಯ ವಿಚಾರವನ್ನು ಪ್ರಸ್ತಾಪಿಸಿರುವುದು ಅಚ್ಚರಿ ಮೂಡಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


