ವಿದೇಶ

ಪ್ರಧಾನಿ ಮೋದಿ, ದೋವಲ್ ಬಲೂಚಿಸ್ತಾನದಲ್ಲಿ ಪೂರ್ವ ಪಾಕಿಸ್ತಾನ ಮಾದರಿಯ ಸ್ಥಿತಿ ಸೃಷ್ಟಿಸಿದ್ದಾರೆ: ಪಾಕ್ ಮಾಜಿ ಸಚಿವ

ಪ್ರಧಾನಿ ನರೇಂದ್ರ ಮೋದಿ ಹಾಗೂ ಅಜಿತ್ ದೋವೆಲ್ ನೇತೃತ್ವದಲ್ಲಿ ಭಾರತ ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಪೂರ್ವ ಪಾಕಿಸ್ತಾನದ ಮಾದರಿ( ಬಾಂಗ್ಲಾ) ಸ್ಥಿತಿಯನ್ನು ಸೃಷ್ಟಿಸಿದೆ

ಪ್ರಧಾನಿ ಮೋದಿ, ದೋವಲ್ ಬಲೂಚಿಸ್ತಾನದಲ್ಲಿ ಪೂರ್ವ ಪಾಕಿಸ್ತಾನ ಮಾದರಿಯ ಸ್ಥಿತಿ ಸೃಷ್ಟಿಸಿದ್ದಾರೆ: ಪಾಕ್ ಮಾಜಿ ಸಚಿವ
ಪ್ರಧಾನಿ ಮೋದಿ, ದೋವಲ್ ಬಲೂಚಿಸ್ತಾನದಲ್ಲಿ ಪೂರ್ವ ಪಾಕಿಸ್ತಾನ ಮಾದರಿಯ ಸ್ಥಿತಿ ಸೃಷ್ಟಿಸಿದ್ದಾರೆ: ಪಾಕ್ ಮಾಜಿ ಸಚಿವ
Published On :

ಇಸ್ಲಾಮಾಬಾದ್: ಪ್ರಧಾನಿ ನರೇಂದ್ರ ಮೋದಿ ಹಾಗೂ ಅಜಿತ್ ದೋವೆಲ್ ನೇತೃತ್ವದಲ್ಲಿ  ಭಾರತ ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಪೂರ್ವ ಪಾಕಿಸ್ತಾನದ ಮಾದರಿ( ಬಾಂಗ್ಲಾ) ಸ್ಥಿತಿಯನ್ನು ಸೃಷ್ಟಿಸಿದೆ ಎಂದು ಪಾಕಿಸ್ತಾನದ ಮಾಜಿ ಸಚಿವ ರೆಹಮಾನ್ ಮಲಿಕ್ ಆರೋಪಿಸಿದ್ದಾರೆ.

2008-13 ವರೆಗೆ ಅಸಿಫ್ ಅಲಿ ಜರ್ದಾರಿಯ ಪಾಕಿಸ್ತಾನ್ ಪೀಪಲ್ಸ್ ಪಕ್ಷದ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದ ರೆಹಮಾನ್ ಮಲಿಕ್, ಭಾರತ ಅಫ್ಘಾನಿಸ್ತಾನದೊಂದಿಗೆ ಸೇರಿ ಬಲೂಚಿಸ್ತಾನದ ಪ್ರತ್ಯೇಕತಾವಾದಿಗಳಿಗೆ ಬೆಂಬಲಿಸುತ್ತಿದೆ. ಇದಕ್ಕೆ ಪಶ್ಚಿಮ ದೇಶಗಳ ಬೆಂಬಲವು ಇದೆ ಎಂದು ರೆಹಮಾನ್ ಮಲಿಕ್ ಆರೋಪಿಸಿದ್ದಾರೆ.

ಬಲೂಚಿಸ್ತಾನದಲ್ಲಿ ಭಾರತ ಪ್ರತ್ಯೇಕತಾವಾದಿಗಳ ಹೋರಾಟಕ್ಕೆ ಬೆಂಬಲ ನೀಡುತ್ತಿದ್ದು ಬಾಂಗ್ಲಾ ವಿಮೋಚನೆ ಪರಿಸ್ಥಿತಿಯನ್ನು ಸೃಷ್ಟಿಸಿದೆ ಎಂಬುದು ಗುಟ್ಟಾಗಿ ಉಳಿದಿಲ್ಲ ಎಂದು ರೆಹಮಾನ್ ಕಿಡಿ ಕಾರಿದ್ದಾರೆ.
 
ಪಿ ಚಿದಂಬರಂ ಅವರು ಗೃಹ ಸಚಿವರಾಗಿದ್ದಾಗ ಅವರೊದಿಗೆ ಭಾರತ ಬಲೂಚಿಸ್ತಾನದಲ್ಲಿ ಅಸ್ಥಿರತೆ ಉಂಟು ಮಾಡುತ್ತಿರುವ ವಿಚಾರವಾಗಿ ಚರ್ಚಿಸಲಾಗಿತ್ತು.ಈ ಬಗ್ಗೆ ಗಮನ ಹರಿಸುವುದಾಗಿ ಅವರು ಸಹ ಭರವಸೆ ನೀಡಿದ್ದರು. ಆದರೆ ನಮ್ಮ ಸರ್ಕಾರದ ಅವಧಿ ಮುಕ್ತಾಯಗೊಂಡ ನಂತರ ಅಸ್ತಿತ್ವಕ್ಕೆ ಬಂದ ಹೊಸ ಸರ್ಕಾರ ಈ ವಿಷಯವನ್ನು ಭಾರತದೊಂದಿಗೆ ಚರ್ಚೆ ನಡೆಸಲಿಲ್ಲ ಎಂದು ರೆಹಮಾನ್ ಮಲಿಕ್ ಹೇಳಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.