ಹಿಲರಿ ಕ್ಲಿಂಟನ್ ಇಮೇಲ್ ಸೋರಿಕೆ ಹಗರಣ: ವಾರಗಳ ಹಿಂದೆ ಮಾಹಿತಿ ಹೊಂದಿದ್ದ ಅಮೆರಿಕಾ ತನಿಖಾ ಸಂಸ್ಥೆ
ಅಮೆರಿಕ ಕಾರ್ಯದರ್ಶಿಯಾಗಿದ್ದಾಗ ಹಿಲರಿ ಕ್ಲಿಂಟನ್ ಅವರು ಆಡಳಿತಕ್ಕೆ ಸಂಬಂಧಿಸಿದ ಮಹತ್ವದ ಸಂವಹನಗಳಿಗಾಗಿ...

Published On :
ವಾಷಿಂಗ್ಟನ್: ಅಮೆರಿಕ ಕಾರ್ಯದರ್ಶಿಯಾಗಿದ್ದಾಗ ಹಿಲರಿ ಕ್ಲಿಂಟನ್ ಅವರು ಆಡಳಿತಕ್ಕೆ ಸಂಬಂಧಿಸಿದ ಮಹತ್ವದ ಸಂವಹನಗಳಿಗಾಗಿ ಖಾಸಗಿ ಸರ್ವರ್ ಬಳಸಿದ್ದರು ಎಂಬ ಆರೋಪಗಳ ಬಗ್ಗೆ ತನಿಖೆ ನಡೆಸುತ್ತಿರುವ ಅಮೆರಿಕಾ ತನಿಖಾ ಸಂಸ್ಥೆ ಎಫ್ ಬಿಐಗೆ ಈ ತಿಂಗಳ ಆರಂಭದಲ್ಲಿಯೇ ಇಮೇಲ್ ಗಳು ದೊರಕಿದ್ದವು ಎಂದೂ ಮತ್ತು ಅದನ್ನು ಸಂಸ್ಥೆಯ ನಿರ್ದೇಶಕರಿಗೆ ವಿವರಿಸಲು ವಾರಗಳ ಕಾಲ ತೆಗೆದುಕೊಂಡರು ಎಂದು ಇತ್ತೀಚೆಗೆ ಗೊತ್ತಾಗಿದೆ.
ತನಗೆ ಗುರುವಾರ ಈ ಬೆಳವಣಿಗೆ ಬಗ್ಗೆ ಗೊತ್ತಾಗಿದ್ದು, ಅದರ ಮರುದಿನ ಶಾಸಕರಿಗೆ ಪತ್ರ ಬರೆದು ಇಮೇಲ್ ಸೋರಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸರಿಯಾದ ತನಿಖೆ ಕ್ರಮ ಕೈಗೊಳ್ಳಬೇಕೆಂದು ಭಾವಿಸಿದ್ದೆನು ಎಂದು ತನಿಖಾ ಸಂಸ್ಥೆಯ ನಿರ್ದೇಶಕ ಜೇಮ್ಸ್ ಬಿ.ಕಾಮಿ ಹೇಳಿದ್ದಾರೆ.
ಚುನಾವಣೆ ಸಮಯದಲ್ಲಿಯೇ ಇಮೇಲ್ ಸೋರಿಕೆ ಹಗರಣ ಕುರಿತು ತನಿಖೆ ನಡೆಸಲು ಮುಂದಾಗಿರುವುದಕ್ಕೆ ಡೆಮಾಕ್ರಟಿಕ್ ಪಕ್ಷದಿಂದ ಭಾರೀ ಟೀಕೆ, ಆರೋಪಗಳು ಕೇಳಿಬರುತ್ತಿದ್ದು ಇದು ಚುನಾವಣೆಯಲ್ಲಿ ಹಿಲರಿ ಕ್ಲಿಂಟನ್ ಅವರನ್ನು ಸೋಲಿಸಲು ಮಾಡುತ್ತಿರುವ ಕುತಂತ್ರ ಎನ್ನಲಾಗುತ್ತಿದೆ.
ಕಾಂಗ್ರೆಸ್ ನ ಮಾಜಿ ಸದಸ್ಯ ಅಂಥೋನಿ ವಿನ್ನರ್ ಬಳಸಿದ್ದರು ಎನ್ನಲಾದ ಕಂಪ್ಯೂಟರ್ ನ ಲ್ಲಿ ಇಮೇಲ್ ಗೆ ಹುಡುಕಾಟ ನಡೆಸುವಂತೆ ತನಿಖಾ ಸಂಸ್ಥೆಗೆ ವಾರಂಟ್ ಹೊರಡಿಸಲಾಗಿತ್ತು. ತನಿಖಾ ಸಂಸ್ಥೆ ಬಳಿ ಲ್ಯಾಪ್ ಟಾಪ್ ಇರುವುದರಿಂದ ನ್ಯೂಯಾರ್ಕ್ ನಲ್ಲಿ ವಾರಂಟ್ ಹೊರಡಿಸಲಾಗಿದೆ.
ಹಿಲರಿ ಕ್ಲಿಂಟನ್ ವಿದೇಶಾಂಗ ಸಚಿವೆಯಾಗಿದ್ದಾಗ ನಡೆದಿದೆ ಎನ್ನಲಾಗುತ್ತಿರುವ ಇಮೇಲ್ ಸೋರಿಕೆ ಹಗರಣ ಕುರಿತು ಎಫ್ ಬಿಐ ತನಿಖೆಗೆ ಮುಂದಾಗಿರುವುದು ಅಮೆರಿಕ ರಾಜಕೀಯ ವಿದ್ಯಮಾನದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಅಮೆರಿಕ ಅಧ್ಯಕ್ಷ ಚುನಾವಣೆ ನವೆಂಬರ್ 8ರಂದು ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


