ಅಣ್ವಸ್ತ್ರ ನಿಷೇಧ ಪ್ರಸ್ತಾವನೆ ಬಗ್ಗೆ ಚರ್ಚೆಗೆ ವಿಶ್ವಸಂಸ್ಥೆ ನಿರ್ಣಯ, ಮತದಾನದಿಂದ ದೂರ ಉಳಿದ ಭಾರತ
ಅಣ್ವಸ್ತ್ರಗಳನ್ನು ಸಂಪೂರ್ಣವಾಗಿ ನಿಷೇಧಿಸುವ ವಿಷಯದ ಬಗ್ಗೆ ಸದಸ್ಯ ರಾಷ್ಟ್ರಗಳ ನಡುವೆ ಮಾತುಕತೆ ಪ್ರಾರಂಭಿಸಲು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಸಮಿತಿ ನಿರ್ಣಯ ಅಂಗೀಕರಿಸಿದೆ.

ವಿಶ್ವಸಂಸ್ಥೆ: ಅಣ್ವಸ್ತ್ರಗಳನ್ನು ಸಂಪೂರ್ಣವಾಗಿ ನಿಷೇಧಿಸುವ ವಿಷಯದ ಬಗ್ಗೆ ಸದಸ್ಯ ರಾಷ್ಟ್ರಗಳ ನಡುವೆ ಮಾತುಕತೆ ಪ್ರಾರಂಭಿಸಲು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಸಮಿತಿ ನಿರ್ಣಯ ಅಂಗೀಕರಿಸಿದೆ.
ವಿಶ್ವಸಂಸ್ಥೆಯ ನಡೆ ವ್ಯಾಪಕವಾದ ಅಣ್ವಸ್ತ್ರ ನಿಶಸ್ತ್ರೀಕರಣಕ್ಕೆ ಪೂರಕವಾಗುವ ಬಗ್ಗೆ ಭಾರತ ಸಂದೇಹ ವ್ಯಕ್ತಪಡಿಸಿದ್ದು, ವಿಶ್ವಸಂಸ್ಥೆಯ ಪ್ರಸ್ತಾವನೆಯಿಂದ ಸದ್ಯಕ್ಕೆ ಅಂತರ ಕಾಯ್ದುಕೊಂಡಿದೆ. ಅ.28 ರಂದು ವಿಶ್ವಸಂಸ್ಥೆಯ ಸಮಿತಿ ಅಣ್ವಸ್ತ್ರ ನಿಷೇಧದ ಬಗ್ಗೆ ವಿಶ್ವಸಂಸ್ಥೆ ಸದಸ್ಯ ರಾಷ್ಟ್ರಗಳ ನಡುವೆ ಚರ್ಚೆಯನ್ನು ಪ್ರಾರಂಭಿಸಲು ನಿರ್ಣಯ ಕೈಗೊಂಡಿದ್ದು, ವಿಶ್ವವನ್ನು ಸಂಪೂರ್ಣ ಅಣ್ವಸ್ತ್ರ ಮುಕ್ತವನ್ನಾಗಿಸಬೇಕೆಂಬ ಉದ್ದೇಶ ಹೊಂದಿದೆ.
2017 ರಲ್ಲಿ ವಿಶ್ವಸಂಸ್ಥೆ ಈ ಕುರಿತು ಸದಸ್ಯ ರಾಷ್ಟ್ರಗಳ ಸಮ್ಮೇಳನವನ್ನು ಆಯೋಜಿಸಲು ಉದ್ದೇಶಿಸಿದ್ದು, ವಿಶ್ವಸಂಸ್ಥೆಯ ಪ್ರಸ್ತಾವನೆ ಪರವಾಗಿ 123 ರಾಷ್ಟ್ರಗಳು ಮತ ಹಾಕಿದ್ದರೆ, 38 ರಾಷ್ಟ್ರಗಳು ವಿರುದ್ಧವಾಗಿ ಮತಚಲಾವಣೆ ಮಾಡಿದ್ದು 16 ರಾಷ್ಟ್ರಗಳ ಸದಸ್ಯರು ಗೈರು ಹಾಜರಾಗಿದ್ದರು. ವಿಶ್ವಸಂಸ್ಥೆಯ ನಿರ್ಣಯದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭಾರತದ ಕಾಯಂ ಪ್ರತಿನಿಧಿ ಡಿಬಿ ವೆಂಕಟೇಶ್ ವರ್ಮಾ, ನಿರ್ಣಯದ ಬಗ್ಗೆ ದೂರ ಉಳಿರುವುದನ್ನು ಭಾರತ ಪರಿಶೀಲನೆ ನಡೆಸಲಿದ್ದು, ಸಮ್ಮೇಳನ ಅಣ್ವಸ್ತ್ರ ನಿಶಸ್ತ್ರೀಕರಣಕ್ಕೆ ಪೂರಕವಾಗಲಿದೆ ಎಂಬುದು ಸ್ಪಷ್ಟವಾಗಿಲ್ಲ, ಆದರೂ ಸಹ ಈ ನಿಟ್ಟಿನಲ್ಲಿ ಮಾತುಕತೆ ನಡೆಸುವುದು ಅಗತ್ಯ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


