ವಿದೇಶ

ಭಾರತಕ್ಕೆ ಪಾಕಿಸ್ತಾನವನ್ನು ಆಂತರಿಕ ಸ್ಫೋಟದಿಂದ ನಾಶ ಮಾಡುವ ಬಯಕೆ: ಇಮ್ರಾನ್ ಖಾನ್

ಭಾರತ ಆಂತರಿಕ ಸ್ಫೋಟದಿಂದ ಪಾಕಿಸ್ತಾನವನ್ನು ನಾಶ ಮಾಡಲು ಬಯಸುತ್ತಿದೆ ಎಂದು ಮಾಜಿ ಕ್ರಿಕೆಟಿಗ ಹಾಗೂ ತೆಹರೀಕ್ ಇ ಪಾಕಿಸ್ತಾನ್ ಪಕ್ಷದ...

ಭಾರತಕ್ಕೆ ಪಾಕಿಸ್ತಾನವನ್ನು ಆಂತರಿಕ ಸ್ಫೋಟದಿಂದ ನಾಶ ಮಾಡುವ ಬಯಕೆ: ಇಮ್ರಾನ್ ಖಾನ್
ಇಮ್ರಾನ್ ಖಾನ್
Published On :
ಇಸ್ಲಾಮಾಬಾದ್: ಭಾರತ ಆಂತರಿಕ ಸ್ಫೋಟದಿಂದ ಪಾಕಿಸ್ತಾನವನ್ನು ನಾಶ ಮಾಡಲು ಬಯಸುತ್ತಿದೆ ಎಂದು ಮಾಜಿ ಕ್ರಿಕೆಟಿಗ ಹಾಗೂ ತೆಹರೀಕ್ ಇ ಪಾಕಿಸ್ತಾನ್ ಪಕ್ಷದ ಅಧ್ಯಕ್ಷರಾಗಿರುವ ಇಮ್ರಾನ್ ಖಾನ್ ಆರೋಪಿಸಿದ್ದಾರೆ. 
ಪಾಕಿಸ್ತಾನ ಸೇನೆಯ ವಿರುದ್ಧ ಜಯ ಸಾಧಿಸುವುದು ಅಸಾಧ್ಯ ಎಂಬುದನ್ನು ಭಾರತ ಅರಿತಿದೆ. ಹೀಗಾಗಿ ಆಂತರಿಕ ಸ್ಫೋಟದಿಂದ ಪಾಕಿಸ್ತಾನವನ್ನು ಒಡೆಯಲು ಬಯಸುತ್ತಿದೆ. ಇನ್ನು ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಪಾಕಿಸ್ತಾನಕ್ಕೆ ಭದ್ರತಾ ಬೆದರಿಕೆಯಾಗಿ ಪರಿಣಮಿಸಿದ್ದಾರೆ. ಪನಾಮ್ ಪೇಪರ್ ಲೀಕ್ ಸಂಬಂಧಿತ ಭ್ರಷ್ಟಾಚಾರದಲ್ಲಿ ತನ್ನನ್ನು ರಕ್ಷಿಸಿಕೊಳ್ಳುವುದರಲ್ಲಿ ಮಾತ್ರ ತಲ್ಲಿನರಾಗಿದ್ದಾರೆ ಎಂದು ಇಮ್ರಾನ್ ಖಾನ್ ಆರೋಪಿಸಿದ್ದಾರೆ. 
ನವಾಜ್ ಷರೀಫ್ ಅವರಿಗೆ ದೇಶವನ್ನು ರಕ್ಷಿಸುವುದರಲ್ಲಿ ಆಸಕ್ತಿ ಇಲ್ಲ. ಹೀಗಾಗಿ ಭ್ರಷ್ಟಾಚಾರ ಮತ್ತು ಭಯೋತ್ಪಾದನೆಯಿಂದ ಪಾಕಿಸ್ಥಾನವು ತೀವ್ರವಾಗಿ ನಲುಗುವಂತಾಗಿದೆ. ಇಸ್ಲಾಮಿಕ್ ಸ್ಟೇಟ್ ಉಗ್ರರ ಭಯೋತ್ಪಾದಕ ಕೃತ್ಯಕ್ಕೆ ಕ್ವೆಟ್ಟಾದಲ್ಲಿ 60ಕ್ಕೂ ಹೆಚ್ಚು ಪೊಲೀಸ್ ಕೆಡೆಟ್ ಗಳು ಬಲಿಯಾಗಿರುವ ಹಿನ್ನಲೆಯಲ್ಲಿ ಇಮ್ರಾನ್ ಖಾನ್ ಈ ರೀತಿ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.