ಆಸ್ಟ್ರೇಲಿಯಾ ಥೀಮ್ ಪಾರ್ಕ್ ನಲ್ಲಿ ಅವಘಡ; ನಾಲ್ವರ ಸಾವು
ಆಸ್ಟ್ರೇಲಿಯಾದ ಈಸ್ಟ್ ಕೋಸ್ಟ್ ನಲ್ಲಿರುವ ಜನಪ್ರಿಯ ಥೀಮ್ ಪಾರ್ಕ್ ನಲ್ಲಿ ಸಂಭವಿಸಿದ ಅವಘಡದಿಂದ ನಾಲ್ಕು ಜನ ಮೃತಪಟ್ಟಿದ್ದಾರೆ.

Published On :
ಸಿಡ್ನಿ: ಆಸ್ಟ್ರೇಲಿಯಾದ ಈಸ್ಟ್ ಕೋಸ್ಟ್ ನಲ್ಲಿರುವ ಜನಪ್ರಿಯ ಥೀಮ್ ಪಾರ್ಕ್ ನಲ್ಲಿ ಸಂಭವಿಸಿದ ಅವಘಡದಿಂದ ನಾಲ್ಕು ಜನ ಮೃತಪಟ್ಟಿದ್ದಾರೆ.
ಡ್ರೀಮ್ ವರ್ಲ್ಡ್ ಥೀಮ್ ಪಾರ್ಕ್ ನ ವಕ್ತಾರ ಮೈಕ್ ಪೀಟರ್ಸನ್ ಈ ವಿಷಯವನ್ನು ಧೃಢೀಕರಿಸಿದ್ದು, ರಿವರ್ ರ್ಯಾಪಿಡ್ ಆಟದ ಸಮಯದಲ್ಲಿ ಇಬ್ಬರು ಪುರುಷರು ಮತ್ತು ಇಬ್ಬರು ಮಹಿಳೆಯರು ಮಂಗಳವಾರ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಕ್ವೀನ್ಸ್ ಲ್ಯಾಂಡ್ ನ ಗೋಲ್ಡ್ ಕೋಸ್ಟ್ ನಲ್ಲಿರುವ ಈ ಥೀಮ್ ಪಾರ್ಕ್ ನಲ್ಲಿ ನಡೆದಿರುವ ಅವಘಡದ ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ.
ಈ ಅವಘಡಯಿಂದಾಗಿ ಥೀಮ್ ಪಾರ್ಕ್ ಅನ್ನು ಮುಚ್ಚಲಾಗಿದೆ ಎಂದು ಪೀಟರ್ಸನ್ ಹೇಳಿದ್ದಾರೆ.
ಈ ಅವಘಡದ ಮಾಹಿತಿ ಇನ್ನು ಪೊಲೀಸರಿಗೆ ಸಿಕ್ಕಿಲ್ಲ ಎಂದು ಕ್ವೀನ್ಸ್ ಲ್ಯಾಂಡ್ ಪೊಲೀಸ್ ವಕ್ತಾರ ಕಿರೇನ್ ಸೆಲ್ಫ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


