ಜಫ್ನಾ ವಿವಿಯ ಇಬ್ಬರು ತಮಿಳು ವಿದ್ಯಾರ್ಥಿಗಳನ್ನು ಗುಂಡಿಕ್ಕಿ ಹತ್ಯೆ ಮಾಡಿದ ಲಂಕಾ ಪೊಲೀಸರು
ತಮಿಳು ಪ್ರಾಬಲ್ಯವಿರುವ ಉತ್ತರ ಪ್ರಾಂತ್ಯದ ಜಫ್ನಾ ನಗರದಲ್ಲಿ ಶ್ರೀಲಂಕಾ ಪೊಲೀಸರು ಇಬ್ಬರು ತಮಿಳು ವಿದ್ಯಾರ್ಥಿಗಳನ್ನು ಗುಂಡಿಕ್ಕಿ...

Published On :
ಕೊಲಂಬೊ: ತಮಿಳು ಪ್ರಾಬಲ್ಯವಿರುವ ಉತ್ತರ ಪ್ರಾಂತ್ಯದ ಜಫ್ನಾ ನಗರದಲ್ಲಿ ಶ್ರೀಲಂಕಾ ಪೊಲೀಸರು ಇಬ್ಬರು ತಮಿಳು ವಿದ್ಯಾರ್ಥಿಗಳನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಇಂದು ಬೆಳಗಿನ ಜಾವ ಜಫ್ನಾದ ಕುಲಪ್ಪಿಡಿಯ ಕೊಕುವಿಲ್ ಪೊಲೀಸ್ ಚೆಕ್ ಪಾಯಿಂಟ್ ನಲ್ಲಿ ಜಫ್ನಾ ವಿಶ್ವವಿದ್ಯಾಲಯದ ಇಬ್ಬರು ತಮಿಳು ವಿದ್ಯಾರ್ಥಿಗಳನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಈ ಮಧ್ಯೆ, ತಮಿಳು ವಿದ್ಯಾರ್ಥಿಗಳ ಹತ್ಯೆ ಆರೋಪವನ್ನು ಸ್ಪಷ್ಟವಾಗಿ ನಿರಾಕರಿಸಿರುವ ಪೊಲೀಸರು, ಅವರು ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ. ಆದರೆ ಮರಣೋತ್ತರ ಪರೀಕ್ಷೆ ವೇಳೆ ಓರ್ವ ವಿದ್ಯಾರ್ಥಿಯ ದೇಹದಲ್ಲಿ ಬುಲೆಟ್ ಗಳು ಪತ್ತೆಯಾಗಿವೆ.
ಈ ಸಂಬಂಧ ಚೆಕ್ ಪಾಯಿಂಟ್ ನಲ್ಲಿ ನಿಯೋಜನೆಗೊಂಡಿದ್ದ ಐವರು ಪೊಲೀಸರು ಬಂಧಿಸಲಾಗಿದೆ ಮತ್ತು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


