ಇಟಲಿಯಲ್ಲಿ ಮೊತ್ತ ಮೊದಲ 24 ಘಂಟೆಯ ಉಚಿತ ವೈನ್ ಕಾರಂಜಿ
ವಿಶ್ವದಾದ್ಯಂತ ಹಲವು ಭಾಗಗಳಲ್ಲಿ ನಲ್ಲಿಯಿಂದ ಮೇಲಕ್ಕೆ ಚಿಮ್ಮುವ ಕುಡಿಯುವ ನೀರಿನ ಕಾರಂಜಿಗಳು ಸಾಮಾನ್ಯ ಆದರೆ ಇಲ್ಲೊಂದು ವಿನೂತನ ಪ್ರಯೋಗದಲ್ಲಿ, ಇಟಲಿಯಲ್ಲಿ ಈ ಕಾರಂಜಿ ಕೆಂಪು ವೈನ್

Published On :
ರೋಮ್: ವಿಶ್ವದಾದ್ಯಂತ ಹಲವು ಭಾಗಗಳಲ್ಲಿ ನಲ್ಲಿಯಿಂದ ಮೇಲಕ್ಕೆ ಚಿಮ್ಮುವ ಕುಡಿಯುವ ನೀರಿನ ಕಾರಂಜಿಗಳು ಸಾಮಾನ್ಯ ಆದರೆ ಇಲ್ಲೊಂದು ವಿನೂತನ ಪ್ರಯೋಗದಲ್ಲಿ, ಇಟಲಿಯಲ್ಲಿ ಈ ಕಾರಂಜಿ ಕೆಂಪು ವೈನ್ ಚಿಮ್ಮುತ್ತದಂತೆ ಮತ್ತು ಅದು ಸಾರ್ವಜನಿಕರಿಗೆ ಉಚಿತ!
ವಾರದ ಪ್ರತಿ ದಿನಗಳಲ್ಲೂ ದಿನದ 24 ಘಂಟೆಗಳವರೆಗೂ ಚಿಮ್ಮುವ 'ಫಾಂಟನ ಡೆಲ್ ವಿನೋ' ಕಾರಂಜಿಯನ್ನು, ಡೋರಾ ಸಾರ್ಚೆಸ್ ವೈನ್ಯಾರ್ಡ್ ವೈನರಿ, ಕಾಲಾದ್ರಿ ಡಿ ಒರಟೊನ ದಲ್ಲಿ ಸ್ಥಾಪಿಸಿದೆ.
ಇದರಲ್ಲಿ ಯಾವುದೇ ಗಿಮಿಕ್ ಇಲ್ಲ ಎಂದು ವಿವರಿಸುವ ವೈನ್ಯಾರ್ಡ್ ಮಾಲೀಕರು, ಈ ಕಾರಂಜಿ ಕುಡುಕರಿಗೂ ಅಲ್ಲ ಎಂದು ತಿಳಿಸಿದೆ.
ಈ ಹಿಂದೆ ಇಟಲಿಯ ಇತಿಹಾಸದಲ್ಲಿ ಕೇಳರಿಯದ ಸೇವೆಯನ್ನು ಒದಗಿಸಬೇಕೆನ್ನುವ ಹಂಬಲದಲ್ಲಿ ಹೀಗೆ ಮಾಡಿರುವುದಾಗಿ ಅವರು ತಿಳಿಸಿದ್ದಾರೆ.
"ಈ ವೈನ್ ಕಾರಂಜಿಗೆ ಸ್ವಾಗತ, ಈ ವೈನ್ ಕಾರಂಜಿ ಕವನ" ಎಂದು ಡೋರಾ ಸಾರ್ಚೆಸ್ ತಮ್ಮ ಫೇಸ್ಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ.
ವೈನ್ ಅನ್ನು ಉಚಿತವಾಗಿ ನೀಡುವ ಮೊದಲ ಕಾರಂಜಿ ಇದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


