ವಿದೇಶ

ನೇಪಾಳ ಪ್ರಧಾನಿ ಪ್ರಚಂಡರಿಂದ ಮೋದಿ, ಜಿನ್‌ಪಿಂಗ್‌ ರೊಂದಿಗ ತ್ರಿಪಕ್ಷೀಯ ಮಾತುಕತೆ

ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಲ್ 'ಪ್ರಚಂಡ' ಅವರು ಪ್ರಧಾನಿ ನರೇಂದ್ರ ಮೋದಿ, ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರೊಂದಿಗೆ...

ನೇಪಾಳ ಪ್ರಧಾನಿ ಪ್ರಚಂಡರಿಂದ ಮೋದಿ, ಜಿನ್‌ಪಿಂಗ್‌ ರೊಂದಿಗ ತ್ರಿಪಕ್ಷೀಯ ಮಾತುಕತೆ
ಪ್ರಚಂಡ, ನರೇಂದ್ರ ಮೋದಿ, ಕ್ಸಿ ಜಿನ್
Published On :
ಕಠ್ಮಂಡು: ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಲ್ 'ಪ್ರಚಂಡ' ಅವರು ಪ್ರಧಾನಿ ನರೇಂದ್ರ ಮೋದಿ, ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರೊಂದಿಗೆ ತ್ರಿಪಕ್ಷೀಯ ಮಾತುಕತೆ ನಡೆಸಿದ್ದಾರೆ ಎಂದು ಭಾನುವಾರ ಮಾಧ್ಯಮ ವರದಿ ತಿಳಿಸಿದೆ.
ಬ್ರಿಕ್ಸ್ ಶೃಂಗಸಭೆಯ ಹಿನ್ನೆಲೆಯಲ್ಲಿ ಗೋವಾದ ಪಣಿಜಿಗೆ ನಿನ್ನೆ ಆಗಮಿಸಿದ್ದ ಪ್ರಚಂಡ ಅವರು, ಭಾರತ ಮತ್ತು ಚೀನಾ ಮುಖ್ಯಸ್ಥರೊಂದಿಗೆ ತ್ರಿಪಕ್ಷೀಯ ಮಾತುಕತೆ ನಡೆಸುವ ಮೂಲಕ, ನೇಪಾಳ ಏಷ್ಯಾದ ಎರಡು ರಾಷ್ಟ್ರಗಳಿಗೆ ಪ್ರಮುಖ ಸೇತುವೆ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ.
ಪ್ರಚಂಡ ಅವರು ಮೊದಲು ಚೀನಾ ಅಧ್ಯಕ್ಷರೊಂದಿಗೆ ಮುಖಾಮುಖಿ ಚರ್ಚೆ ನಡೆಸಿದರು. 20 ನಿಮಿಷಗಳ ನಂತರ ನರೇಂದ್ರ ಮೋದಿ ಅವರು ಆಗಮಿಸದರು ಎಂದು ಹಿಮಾಲಯನ್ ಟೈಮ್ಸ್ ವರದಿ ಮಾಡಿದೆ.
ಈ ಮೂವರು ನಾಯಕರು ಸಾಮಾನ್ಯ ಹಿತಾಸಕ್ತಿಗಳ ಬಗ್ಗೆ ಚರ್ಚೆ ನಡೆಸಿದರು ಎಂದು ಪ್ರಚಂಡ ಅವರ ಆಪ್ತ ಕಾರ್ಯದರ್ಶಿ ಪ್ರಕಾಶ್ ದಹಲ್ ಅವರು ಹೇಳಿರುವುದಾಗಿ ವರದಿ ಮಾಡಲಾಗಿದೆ.
ನೇಪಾಳ ಒಂದು ಸಣ್ಣ ರಾಷ್ಟ್ರ. ಆದರೆ ಸಾಂಸ್ಕೃತಿಕವಾಗಿ ಮತ್ತು ಧಾರ್ಮಿಕವಾಗಿ ತುಂಬಾ ಶ್ರೀಮಂತಿಕೆಯಿಂದ ಕೂಡಿದೆ. ಪಶುಪತಿನಾಥ, ಗೌತಮಬುದ್ಧ ಮತ್ತು ಜಾನಕಿ ಮೂರು ದೇಶಗಳೊಂದಿಗೆ ಸಂಬಂಧ ಹೊಂದಿದ್ದಾರೆ. ಏಷ್ಯಾದ ಎರಡು ಪ್ರಬಲ ಶಕ್ತಿಗಳಾದ ಭಾರತ-ಚೀನಾ ಮಧ್ಯ ನೇಪಾಳ ಇದ್ದು, ಈ ಎರಡೂ ದೇಶಗಳ ಸಹಕಾರ ಮತ್ತು ಸಹಾಯದ ಅಗತ್ಯ ನಮಗೆ ಇದೆ ಎಂದು ಪ್ರಚಂಡ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.