ಭಾರತದ ವಿರುದ್ಧ ಮೇಲುಗೈ ಸಾಧಿಸಲು ಟಿಬೆಟ್ ನೆರವಿದೆ: ಚೀನಾ ಮಾಧ್ಯಮ
ಉತ್ತಮ ಮೂಲಸೌಕರ್ಯ ಹೊಂದಿರುವ ಟಿಬೆಟ್ ಭಾರತದ ವಿರುದ್ಧ ಮೇಲುಗೈ ಸಾಧಿಸಲು ಚೀನಾಗೆ ನೆರವಾಗಲಿದೆ ಎಂದು ಚೀನಾ ಮಾಧ್ಯಮ ಹೇಳಿದೆ.

ಬೀಜಿಂಗ್: ಉತ್ತಮ ಮೂಲಸೌಕರ್ಯ ಹೊಂದಿರುವ ಟಿಬೆಟ್ ಭಾರತದ ವಿರುದ್ಧ ಮೇಲುಗೈ ಸಾಧಿಸಲು ಚೀನಾಗೆ ನೆರವಾಗಲಿದೆ ಎಂದು ಚೀನಾ ಮಾಧ್ಯಮ ಹೇಳಿದೆ.
ಹೆಚ್ಚಿನ ವ್ಯಾಪಾರ ವಹಿವಾಟು ಹಾಗು ಹೂಡಿಕೆ ದೃಷ್ಟಿಯಿಂದ ಬಾಂಗ್ಲಾ ಹಾಗೂ ನೇಪಾಳಕ್ಕೆ ಟಿಬೆಟ್ ಮಹಾದ್ವಾರವಾಗಿದೆ. ಅಂತೆಯೇ ಟಿಬೆಟ್ ಗೆ ಇದರಿಂದ ಹಲವು ಸವಾಲುಗಳೂ ಎದುರಾಗಲಿವೆ ಎಂದು ಸರ್ಕಾರಿ ಸ್ವಾಮ್ಯದ ಗ್ಲೋಬಲ್ ಟೈಮ್ಸ್ ಮಾಧ್ಯಮ ತಿಳಿಸಿದೆ.
ಇನ್ನು ನೇಪಾಳ ಹಾಗು ಬಾಂಗ್ಲಾದೇಶ ಅಭಿವೃದ್ಧಿ ಬಗ್ಗೆಯೂ ಮಾತನಾಡಿರುವ ಚೀನಾ ಮಾಧ್ಯಮ, ನೇಪಾಳದಲ್ಲಿ ರೈಲ್ವೆ ಮಾರ್ಗ ನಿರ್ಮಾಣ ಮಾಡುವ ವಿಚಾರದಲ್ಲಿ ಚೀನಾ ಹಾಗೂ ಭಾರತದ ನಡುವೆ ಪೈಪೋಟಿ ಏರ್ಪಟ್ಟಿದ್ದು, ಈ ಪೈಪೋಟಿ ನೇಪಾಳ ಹಾಗೂ ಬಾಂಗ್ಲಾದೇಶದ ಅಭಿವೃದ್ಧಿ ಮೇಲೆ ಪರಿಣಾಮ ಬೀರಲಿದೆ ಹಾಗೂ ಟಿಬೆಟ್ ಗೆ ಇದರಿಂದ ಹೆಚ್ಚು ಸವಾಲು ಎದುರಾಗಲಿದೆ ಎಂದು ಹೇಳಿದೆ.
ಮುಂದಿನ ದಶಕದ ವೇಳೆಗೆ ಭಾರತ ತನ್ನ ಗರಿಷ್ಠ ಬೆಳವಣಿಗೆಯನ್ನು ಕಾಯ್ದಿರಿಸಿಕೊಂಡು, ಮೂಲಸೌಕರ್ಯ ಅಭಿವೃದ್ಧಿಯನ್ನು ಕ್ಷಿಪ್ರಗೊಳಿಸಿದರೆ ಚೀನಾ ಮೇಲೆ ವಿವಿಧ ಆಯಾಮಗಳಲ್ಲಿ ಒತ್ತಡ ಬೀಳಲಿದೆ ಆದರೆ ಇದರ ಸಂಕಷ್ಟಗಳನ್ನು ಟಿಬೆಟ್ ಎದುರಿಸಬೇಕಾಗಬಹುದು ಎಂದು ಚೀನಾ ಆತಂಕ ವ್ಯಕ್ತಪಡಿಸಿದೆ. ಚೀನಾ ಮಾತಿಗೆ ಪೂರಕವಾಗಿ ನೇಪಾಳ ಹಾಗೂ ಬಾಂಗ್ಲಾದೇಶಕ್ಕೆ ಭಾರತ ಸರ್ಕಾರ ಈಗಾಗಲೇ ಗಣನೀಯ ಪ್ರಮಾಣದಲ್ಲಿ ಸಹಕಾರ ನೀಡುತ್ತಾ ಬಂದಿದೆ.
"ಮೂಲ ಸೌಕರ್ಯದ ವಿಷಯದಲ್ಲಿ ಟಿಬೆಟ್ ಭಾರತಕ್ಕಿಂತ ಮೇಲುಗೈ ಸಾಧಿಸಿದ್ದು ನೆರೆ ರಾಷ್ಟ್ರಗಳೊಂದಿಗೆ ಬಲವಾದ ಆರ್ಥಿಕ ಸಹಕಾರ ಹೊಂದಿದೆ ಎಂದು ಚೀನಾ ಮಾಧ್ಯಮ ತಿಳಿಸಿದೆ. ಟಿಬೆಟ್ ನ ಮೂಲಸೌಕರ್ಯಗಳನ್ನು ಭಾರತದೆಡೆಗಿನ ಪ್ರತಿತಂತ್ರಕ್ಕಾಗಿ ಬಳಸಿಕೊಳ್ಳುವುದಕ್ಕೆ ನೀತಿಯ ಸಹಕಾರ ಅಗತ್ಯವಿದೆ ಎಂದು ಚೀನಾ ಟಿಬೆಟ್ ನ್ನು ಪರೋಕ್ಷವಾಗಿ ಭಾರತದ ವಿರುದ್ಧ ಬಳಸಿಕೊಳ್ಳುವ ಮಾತನ್ನಾಡಿದೆ.
ನೇಪಾಳ ಹಾಗೂ ಭಾರತದ ನಡುವೆ ಉತ್ತಮ ರಸ್ತೆಗಳಿದ್ದು, ಹಲವು ವರ್ಷಗಳಿಂದ ಭಾರತ ನೇಪಾಳಗೊಂದಿಗೆ ಶೇ.60 ರಿಂದ 70 ರಷ್ಟು ವ್ಯಾಪಾರ ವಹಿವಾಟು ಹೊಂದಿದೆ. ಆದರೆ ಚೀನಾ ಕೇವಲ ಶೇ. 10 ರಷ್ಟು ವಹಿವಾಟು ಹೊಂದಿದೆ. ಇನ್ನು ಇತ್ತೀಚೆಗಷ್ಟೇ ನೇಪಾಳದ ಪ್ರಧಾನಿ ಭಾರತಕ್ಕೆ ಭೇಟಿ ನೀಡಿದ್ದಾಗ ಭಾರತ ನೇಪಾಳಕ್ಕೆ ನೀಡಿದ್ದ ರೈಲು ಮಾರ್ಗ ನಿರ್ಮಾಣ ಭರವಸೆ ಕಾರ್ಯರೂಪಕ್ಕೆ ಬಂದದ್ದೇ ಆದಲ್ಲಿ ಭಾರತ ಮಾತ್ರವಲ್ಲದೆ ಟಿಬೆಟ್ ಬಾಂಗ್ಲಾದೇಶಕ್ಕೂ ರೈಲು ಸಂಪರ್ಕ ದೊರೆಯಲಿದೆ. ಈ ಬೆಳವಣಿಗೆಗಳಲ್ಲಿ ಟಿಬೆಟ್ ಪ್ರಮುಖ ಪಾತ್ರ ವಹಿಸಲಿದ್ದು ಭಾರತದ ಅಭಿವೃದ್ಧಿ ಹಾಗೂ ಚೀನಾ-ಭಾರತ ಆರ್ಥಿಕ ಸಂಬಂಧಗಳನ್ನು ವೃದ್ಧಿಗೊಳಿಸಲಿದೆ ಎಂದು ಚೀನಾ ಪತ್ರಿಕೆ ವಿಶ್ಲೇಷಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


