ವಿದೇಶ

ಪಾಕ್ ನೊಂದಿಗಿನ ಗಡಿಯನ್ನು ಮುಚ್ಚುವ ವಿಷಯದಲ್ಲಿ ಭಾರತದ್ದು ಅವಿವೇಕಿತನದ ನಿರ್ಧಾರ: ಚೀನಾ

ಭಾರತ ಪಾಕಿಸ್ತಾನದೊಂದಿಗಿನ ಗಡಿ ಪ್ರದೇಶವನ್ನು ಸಂಪೂರ್ಣವಾಗಿ ಮುಚ್ಚಲು ಕೈಗೊಂಡಿರುವ ನಿರ್ಧಾರವನ್ನು ಚೀನಾ ಟೀಕಿಸಿದ್ದು, ಭಾರತ ಸರ್ಕಾರ ಅವಿವೇಕಿ ನಿರ್ಧಾರ ಎಂದು ಹೇಳಿದೆ.

ಪಾಕ್ ನೊಂದಿಗಿನ ಗಡಿಯನ್ನು ಮುಚ್ಚುವ ವಿಷಯದಲ್ಲಿ ಭಾರತದ್ದು ಅವಿವೇಕಿತನದ ನಿರ್ಧಾರ: ಚೀನಾ
Published On :

ಬೀಜಿಂಗ್: ಭಾರತ ಪಾಕಿಸ್ತಾನದೊಂದಿಗಿನ ಗಡಿ ಪ್ರದೇಶವನ್ನು ಸಂಪೂರ್ಣವಾಗಿ ಮುಚ್ಚಲು ಕೈಗೊಂಡಿರುವ ನಿರ್ಧಾರವನ್ನು ಚೀನಾ ಟೀಕಿಸಿದ್ದು, ಭಾರತ ಸರ್ಕಾರ ಅವಿವೇಕಿ ನಿರ್ಧಾರ ಎಂದು ಹೇಳಿದೆ.

ಗಡಿ ಪ್ರದೇಶವನ್ನು ಮುಚ್ಚುವ ಭಾರತ ಸರ್ಕಾರದ ನಿರ್ಧಾರದಿಂದ ಚೀನಾ- ಭಾರತ ನಡುವಿನ ದ್ವಿಪಕ್ಷೀಯ ಸಂಬಂಧದ ಮೇಲೆ ಪರಿಣಾಮ ಬೀರಲಿದೆ ಎಂದು ಚೀನಾ ಎಚ್ಚರಿಕೆ ನೀಡಿದೆ. ಪಾಕಿಸ್ತಾನದೊಂದಿಗಿನ ಗಡಿ ವಿಚಾರದಲ್ಲಿ ಭಾರತ ಅವಿವೇಕಿ ನಿರ್ಧಾರ ಕೈಗೊಳ್ಳುತ್ತಿದೆ ಎಂದು ಅಭಿಪ್ರಾಯಪಟ್ಟಿರುವ ಚೀನಾ, ಉರಿ ದಾಳಿ ನಡೆದ ಬಳಿಕ ಯಾವುದೇ ಸ್ಪಷ್ಟ ತನಿಖೆ ನಡೆದಿಲ್ಲ. ಉರಿ ಭಯೋತ್ಪಾದಕ ದಾಳಿಯಲ್ಲಿ ಪಾಕ್ ನ ಪಾತ್ರ ಇರುವುದರ ಬಗ್ಗೆಯೂ ಸಾಕ್ಷ್ಯಗಳು ರುಜುವಾತಾಗಿಲ್ಲ ಎಂದು ಚೀನಾದ ಸರ್ಕಾರಿ ಸ್ವಾಮ್ಯದ ಮಾಧ್ಯಮ ಗ್ಲೋಬಲ್ ಟೈಮ್ಸ್ ತಜ್ಞರ ಅಭಿಪ್ರಾಯವನ್ನು ವರದಿ ಮಾಡಿದೆ.

ಗಡಿ ಭಾಗವನ್ನು ಸಂಪೂರ್ಣ ಮುಚ್ಚುವುದರಿಂದ ಭಾರತ- ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸಂಬಂಧ ಮತ್ತಷ್ಟು ಹಾಳಾಗುತ್ತದೆ. ಗಡಿ ಭಾಗದ ವ್ಯಾಪಾರ ವಹಿವಾಟುಗಳಲ್ಲಿ ಮತ್ತಷ್ಟು ಆತಂಕ ಮೂಡುತ್ತದೆ ಎಂದು ಚೀನಾದ ಶಾಂಘೈ ಅಕಾಡೆಮಿಯ ಅಂತರಾಷ್ಟ್ರೀಯ ಸಂಬಂಧಗಳ ವಿಭಾಗದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಭಾರತ ಸರ್ಕಾರ ಕೈಗೊಂಡಿರುವ ನಿರ್ಧಾರ ಶೀಥಲ ಸಮರದ ಮನಸ್ಥಿತಿಯನ್ನು, ಅವಿವೇಕತನವನ್ನು ಬಿಂಬಿಸುತ್ತದೆ ಎಂದು ಚೀನಾ ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.