ವಿದೇಶ

ಶೀಘ್ರ ಪಾಕ್ ಐಎಸ್ಐ ಮುಖ್ಯಸ್ಥರ ಬದಲಾವಣೆ: ವರದಿ

ಪಾಕಿಸ್ತಾನದ ಪ್ರಮುಖ ಗುಪ್ತಚರ ಸಂಸ್ಥೆ ಐಎಸ್ಐ ಮುಖ್ಯಸ್ಥ ಲೆ.ಜನರಲ್ ರಿಜ್ವಾನ್ ಅಖ್ತರ್ ಅವರನ್ನು ಕೆಲವೇ ವಾರಗಳಲ್ಲಿ ಬದಲಾವಣೆ...

ಶೀಘ್ರ ಪಾಕ್ ಐಎಸ್ಐ ಮುಖ್ಯಸ್ಥರ ಬದಲಾವಣೆ: ವರದಿ
ರಿಜ್ವಾನ್ ಅಖ್ತರ್
Published On :
ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಮುಖ ಗುಪ್ತಚರ ಸಂಸ್ಥೆ ಐಎಸ್ಐ ಮುಖ್ಯಸ್ಥ ಲೆ.ಜನರಲ್ ರಿಜ್ವಾನ್ ಅಖ್ತರ್ ಅವರನ್ನು ಕೆಲವೇ ವಾರಗಳಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಇದೆ ಎಂದು ಶನಿವಾರ ಮಾಧ್ಯಮ ವರದಿ ತಿಳಿಸಿದೆ.
ರಿಜ್ವಾನ್ ಅಖ್ತರ್ ಅವರನ್ನು 2014ರ ಸೆಪ್ಟೆಂಬರ್ ನಲ್ಲಿ ಮೂರು ವರ್ಷದ ಅವಧಿಗೆ ಇಂಟರ್ ಸರ್ವೀಸಸ್ ಇಂಟಲಿಜೆನ್ಸ್ (ಐಎಸ್​ಐ)ನ ಮಹಾನಿರ್ದೇಶಕರಾಗಿ ನೇಮಕ ಮಾಡಲಾಗಿದ್ದು, ಇದೀಗ ಅವಧಿಗೆ ಮುಂಚೆಯೇ ಅವರನ್ನು ಬದಲಾವಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ರಿಜ್ವಾನ್ ಅಖ್ತರ್ ಅವರ ಸ್ಥಾನಕ್ಕೆ ಕರಾಚಿ ಸೇನಾ ಕಮಾಂಡರ್ ಲೆ.ಜನರಲ್ ನವೀದ್ ಮುಖ್ತರ್ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ ಎಂದು ಅಧಿಕಾರಿಯೊಬ್ಬರು ಹೇಳಿರುವುದಾಗಿ ವರದಿ ಮಾಡಲಾಗಿದೆ.
ಅಖ್ತರ್ ಅವರು ನೇಮಕವಾಗಿ ಕೇವಲ 2 ವರ್ಷಗಳಾಗಿದೆ. ಅವರು ಅವಧಿಗೂ ಮುನ್ನವೇ ಅಧಿಕಾರದಿಂದ ಕೆಳಗಿಳಿಯುವ ಸಾಧ್ಯತೆ ಇದೆ. ಆದರೆ ಐಎಸ್​ಐ ಮುಖ್ಯಸ್ಥರನ್ನು ಬದಲಾಯಿಸಲು ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಪಾಕ್ ಮಾಧ್ಯಮ ತನ್ನ ವರದಿಯಲ್ಲಿ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.