ಸೀಮಿತ ದಾಳಿ ಸಾಬೀತಿಗೆ ಅಧಿಕಾರಿಯ ನಕಲಿ ಸಂದರ್ಶನ: ಪಾಕಿಸ್ತಾನ ಆರೋಪ
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನಾ ಪಡೆಗಳು ನಡೆಸಿದ್ದ ಸೀಮಿತ ದಾಳಿ ಸಂಬಂಧ ಭಾರತೀಯ ಸುದ್ದಿವಾಹಿನಿ ಪ್ರಸಾರ ಮಾಡಿದ್ದ ಪಾಕ್ ಆಧಿಕಾರಿಯ ಸಂದರ್ಶನವೇ ನಕಲಿ ಎಂದು ಪಾಕಿಸ್ತಾನ ಹೊಸ ಆರೋಪ ಮಾಡಿದೆ.

ಇಸ್ಲಾಮಾಬಾದ್: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನಾ ಪಡೆಗಳು ನಡೆಸಿದ್ದ ಸೀಮಿತ ದಾಳಿ ಸಂಬಂಧ ಭಾರತೀಯ ಸುದ್ದಿವಾಹಿನಿ ಪ್ರಸಾರ ಮಾಡಿದ್ದ ಪಾಕ್ ಆಧಿಕಾರಿಯ ಸಂದರ್ಶನವೇ ನಕಲಿ ಎಂದು ಪಾಕಿಸ್ತಾನ ಹೊಸ ಆರೋಪ ಮಾಡಿದೆ.
ನಡೆಯದ ದಾಳಿಯನ್ನು ನಡೆದಿದೆ ಎಂದು ತೋರಿಸಲು ಭಾರತ ಹರಸಾಹಸ ಪಡುತ್ತಿದ್ದು, ಇದಕ್ಕಾಗಿ ಪಾಕಿಸ್ತಾನ ಮೂಲದ ಅಧಿಕಾರಿಯ ನಕಲಿ ಸಂದರ್ಶನವನ್ನೇ ಸೃಷ್ಟಿಸಿದೆ ಎಂದು ಪಾಕಿಸ್ತಾನ ಸರ್ಕಾರ ಆರೋಪಿಸಿದೆ. ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಪಾಕಿಸ್ತಾನ ವಿದೇಶಾಂಗ ಸಚಿವಾಲಯ, ಸೂಕ್ತ ಸಂದರ್ಭದಲ್ಲಿ ವಾಹಿನಿಯ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ ಎಂದು ಹೇಳಿಕೆ ಬಿಡುಗಡೆ ಮಾಡಿದೆ.
"ಸೀಮಿತ ದಾಳಿ ಕುರಿತಂತೆ ಜಗತ್ತಿನ ನಂಬಿಕೆ ಗಳಿಸಲು ಖಾಸಗಿ ಸುದ್ದಿ ವಾಹಿನಿ ಈ ಕುರಿತು ನಕಲಿ ವರದಿ ಮತ್ತು ಸಂದರ್ಶನ ಸಿದ್ಧಪಡಿಸಿ ಪ್ರಸಾರ ಮಾಡಿದೆ. ಇದು ಭಾರತ ಸೀಮಿತ ದಾಳಿ ನಡೆದಿದೆ ಎಂದು ಸಾಬೀತು ಪಡಿಸಲು ವಾಮ ಮಾರ್ಗಗಳ ಮೂಲಕ ಪ್ರಯತ್ನಿಸುತ್ತಿದೆ ಎಂಬುದನ್ನು ಸಾಬೀತು ಪಡಿಸುತ್ತದೆ. ನಕಲಿ ಸುದ್ದಿಯನ್ನು ಪ್ರಸಾರ ಮಾಡಿದ ಖಾಸಗಿ ವಾಹಿನಿ ವಿರುದ್ಧ ಭಾರತ ಕ್ರಮ ತೆಗೆದುಕೊಳ್ಳುತ್ತದೆ ಎಂಬ ವಿಶ್ವಾಸವಿದೆ. ಸೂಕ್ತ ಸಂದರ್ಭದಲ್ಲಿ ಪಾಕಿಸ್ತಾನ ಸಹ ವಾಹಿನಿ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬಹುದು ಎಂದು ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಪಾಕ್ ಅಧಿಕಾರಿಯ ದಿಢೀರ್ ಯೂಟರ್ನ್
ಅತ್ತ ಸೀಮಿತ ದಾಳಿ ಕುರಿತಂತೆ ಪಾಕಿಸ್ತಾನ ಅಧಿಕಾರಿಯ ಸಂದರ್ಶನ ಪ್ರಸಾರವಾಗುತ್ತಿದ್ದಂತೆಯೇ ಇತ್ತ ಪಾಕಿಸ್ತಾನ ಅಧಿಕಾರಿಯ ವಿರುದ್ಧ ಕೆಂಗಣ್ಣು ಬೀರಿದೆ. ಅಲ್ಲದೆ ಆತನ ಮೇಲೆ ಒತ್ತಡ ಹೇರಿ, ತನ್ನ ಹೇಳಿಕೆಯನ್ನೇ ಸುಳ್ಳು ಎಂದು ಸಾಬೀತು ಪಡಿಸಲು ಹೊರಟಿದೆ. ಇದಕ್ಕೆ ಪೂರಕ ಎಂಬಂತೆ ನಿನ್ನೆ ಹೇಳಿಕೆ ನೀಡಿದ್ದ ಅಧಿಕಾರಿ ಪಾಕಿಸ್ತಾನ ಮೂಲದ ಅಧಿಕಾರಿ ಎಸ್ಪಿ ಗುಲಾಮ್ ಅಕ್ಬರ್ ಇಂದು ದಿಢೀರ್ ಯೂಟರ್ನ್ ಹೊಡೆದಿದ್ದು. ವಾಹಿನಿಯ ಸಂದರ್ಶನದಲ್ಲಿರುವುದು ತಾವಲ್ಲ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


