ವಿದೇಶ

ಕೊಲಂಬಿಯಾ ಅಧ್ಯಕ್ಷ ಜುವಾನ್ ಮ್ಯಾನುಯೆಲ್ ಸ್ಯಾನಟೋಸ್ ಗೆ ನೊಬೆಲ್ ಶಾಂತಿ ಪ್ರಶಸ್ತಿ

ಕೊಲಂಬಿಯಾದ ಸರ್ಕಾರ ಮತ್ತು ಎಫ್ಎಆರ್ ಸಿ ಬಂಡಾಯ ಗುಂಪಿನ ನಡುವೆ ಶಾಂತಿ ನೆಲೆಸಲು ಪ್ರಮುಖ ಕಾರಣವಾಗಿದ್ದ ಕೊಲಂಬಿಯಾ ಅಧ್ಯಕ್ಷ ಜುವಾನ್ ಮ್ಯಾನುಯೆಲ್ ಸ್ಯಾಂಟೋಸ್ ನೊಬೆಲ್ ಶಾಂತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕೊಲಂಬಿಯಾ ಅಧ್ಯಕ್ಷ ಜುವಾನ್ ಮ್ಯಾನುಯೆಲ್ ಸ್ಯಾನಟೋಸ್ ಗೆ ನೊಬೆಲ್ ಶಾಂತಿ ಪ್ರಶಸ್ತಿ
ಕೊಲಂಬಿಯಾ ಅಧ್ಯಕ್ಷ ಜುವಾನ್ ಮ್ಯಾನುಯೆಲ್ ಸ್ಯಾನಟೋಸ್
Published On :

ಓಸ್ಲೋ: ಕೊಲಂಬಿಯಾದ ಸರ್ಕಾರ ಮತ್ತು ಎಫ್ಎಆರ್ ಸಿ ಬಂಡಾಯ ಗುಂಪಿನ ನಡುವೆ ಶಾಂತಿ ನೆಲೆಸಲು ಪ್ರಮುಖ ಕಾರಣವಾಗಿದ್ದ ಕೊಲಂಬಿಯಾ ಅಧ್ಯಕ್ಷ ಜುವಾನ್ ಮ್ಯಾನುಯೆಲ್ ಸ್ಯಾಂಟೋಸ್ ನೊಬೆಲ್ ಶಾಂತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ನಾರ್ವೆಯ ನೊಬೆಲ್ ಶಾಂತಿ ಪ್ರಶಸ್ತಿ ಆಯ್ಕೆ ಸಮಿತಿ 2016 ನೇ ಸಾಲಿನ ನೊಬೆಲ್ ಪ್ರಶಸ್ತಿಯನ್ನು ಅಂತಿಮಗೊಳಿಸಿದ್ದು, ಕಳೆದ 50 ವರ್ಷಗಳಿಂದ ಕೊಲಂಬಿಯಾ ಸರ್ಕಾರ ಮತ್ತು ಎಫ್ಎಆರ್ ಸಿ ನಡುವೆ ನಡೆಯುತ್ತಿದ್ದ ನಾಗರಿಕ ಯುದ್ಧವನ್ನು ಅಂತ್ಯಗೊಳಿಸುವಲ್ಲಿ ಯಶಸ್ವಿಯಾಗಿದ್ದ  ಅಧ್ಯಕ್ಷ ಜುವಾನ್ ಮ್ಯಾನುಯೆಲ್ ಸ್ಯಾಂಟೋಸ್ ಗೆ ಪ್ರಶಸ್ತಿಯನ್ನು ಘೋಷಿಸಿದೆ. ಕಳೆದ 50 ವರ್ಷ ನಡೆದ ಯುದ್ಧದಲ್ಲಿ 220,000 ಕೊಲಂಬಿಯನ್ನರು ಮೃತಪಟ್ಟಿದ್ದರು. ಅಷ್ಟೇ ಅಲ್ಲದೆ 6 ಮಿಲಿಯನ್ ಕೊಲಂಬಿಯನ್ನರು ಮೂಲ ಪ್ರದೇಶದಿಂದ ಸ್ಥಳಾಂತರಗೊಂಡಿದ್ದರು.  ಕ್ಯೂಬಾದಲ್ಲಿ 2012 ರಲ್ಲಿ ಪ್ರಾರಂಭವಾಗಿದ್ದ ಮಾತುಕತೆಯ ಭಾಗವಾಗಿ ಶಾಂತಿಯುತ ಒಪ್ಪಂದಕ್ಕೆ ಸಹಿಹಾಕುವ ಪ್ರಸ್ತಾವನೆಗೆ ಶೇ.52 ರಷ್ಟು ಜನರು ವಿರೋಧ ವ್ಯಕ್ತಪಡಿಸಿದ್ದರು.

ಸೆ.26 ರಂದು ಕೊಲಂಬಿಯಾ ಹಾಗೂ ಎಫ್ಎಆರ್ ಸಿ ನಡುವೆ ಐತಿಹಾಸಿಕ ಶಾಂತಿಯುತ ಒಪ್ಪಂದ ನಡೆದಿತ್ತು. ಈ ವರ್ಷದ ನೊಬೆಲ್ ಶಾಂತಿ ಪ್ರಶಸ್ತಿ 376 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದರು. ಈ ಪೈಕಿ 228 ವ್ಯಕ್ತಿಗಳು ಹಾಗೂ 148 ಸಂಸ್ಥೆಗಳಿದ್ದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.