ವಿದೇಶ

ಬುಲೆಟ್ ರೈಲು ನಿರ್ವಹಿಸುವ ಸಾಮರ್ಥ್ಯ ನಮಗೆ ಇಲ್ಲ: ಪಾಕ್ ಸಚಿವ

ವಿದೇಶಗಳಿಗೆ ಸರಿಸಮನಾಗಿ ಬುಲೆಟ್ ರೈಲುಗಳನ್ನು ನಿರ್ವಹಿಸುವ ಸಾಮರ್ಥ್ಯ ನಮಗೆ ಇಲ್ಲ ಎಂದು ಪಾಕಿಸ್ತಾನದ ರೈಲ್ವೆ ಸಚಿವರು ಹೇಳಿದ್ದಾರೆ.

ಬುಲೆಟ್ ರೈಲು ನಿರ್ವಹಿಸುವ ಸಾಮರ್ಥ್ಯ ನಮಗೆ ಇಲ್ಲ: ಪಾಕ್ ಸಚಿವ
ಬುಲೆಟ್ ರೈಲು( ಸಂಗ್ರಹ ಚಿತ್ರ)
Published On :
ಇಸ್ಲಾಮಾಬಾದ್: ವಿದೇಶಗಳಿಗೆ ಸರಿಸಮನಾಗಿ ಬುಲೆಟ್ ರೈಲುಗಳನ್ನು ನಿರ್ವಹಿಸುವ ಸಾಮರ್ಥ್ಯ ನಮಗೆ ಇಲ್ಲ ಎಂದು ಪಾಕಿಸ್ತಾನದ ರೈಲ್ವೆ ಸಚಿವರು ಹೇಳಿದ್ದಾರೆ. 
ಪಾಕಿಸ್ತಾನದಲ್ಲಿ ಹೈ-ಸ್ಪೀಡ್ ರೈಲು ಮಾರುಕಟ್ಟೆಗೆ ಬೆಲೆ ಇಲ್ಲದೇ ಇರುವುದರಿಂದ ಬುಲೆಟ್ ರೈಲುಗಳನ್ನು ನಿರ್ವಹಿಸುವ ಸಾಮರ್ಥ್ಯ ನಮಗೆ ಇಲ್ಲ ಎಂದು ಅಲ್ಲಿನ ರೈಲ್ವೆ ಖಾತೆ ಸಚಿವ ಖಾವಾಜಾ ಸಾದ್ ರಫೀಕ್ ರಾಷ್ಟ್ರೀಯ ಸಂಸತ್ ಗೆ  ತಿಳಿಸಿದ್ದಾರೆ.
ಚೀನಾ-ಪಾಕಿಸ್ತಾನ ಎಕನಾಮಿಕ್ ಕಾರಿಡಾರ್ ಯೋಜನೆಯಡಿಯಲ್ಲಿ 160 ಕಿಮಿ ಗರಿಷ್ಠ ವೇಗವನ್ನು ಹೊಂದಿರುವ ಹೈ-ಸ್ಪೀಡ್ ರೈಲುಗಳನ್ನು ತಯಾರಿಸುತ್ತಿದೆ. ಆದರೆ ಬುಲೆಟ್ ರೈಲಿನ ಬಗ್ಗೆ ಕೇಳಿದ್ದಕ್ಕೆ ಚೀನಾದವರು ನಮ್ಮನ್ನು ನೋಡಿ ನಕ್ಕರು, ಸಿಪಿಇಸಿ ಯೋಜನೆಯಡಿಯಲ್ಲಿ ನಿರ್ಮಾಣವಾಗುತ್ತಿರುವ 160 ಕಿಮಿ ವೇಗದ ಹೈ-ಸ್ಪೀಡ್ ರೈಲುಗಳನ್ನೇ ಬುಲೆಟ್ ರೈಲುಗಳೆಂದು ಪರಿಗಣಿಸಬೇಕು ಎಂದು ಚೀನಾ ಹೇಳಿದೆ ಆದರೆ ಅದಕ್ಕೆ ಮಾರುಕಟ್ಟೆಯಲ್ಲಿ ಬೆಲೆ ಇಲ್ಲ ಎಂದು ರೈಲ್ವೆ ಸಚಿವ ರಫೀಕ್ ಹೇಳಿದ್ದಾರೆ. 
ಚುನಾವಣೆಯಲ್ಲಿ ನೀಡಿದ್ದ ಭರವಸೆಗಳಿಗೆ ವಿರುದ್ಧವಾಗಿ ಹೈ-ಸ್ಪೀಡ್ ರೈಲು ಯೋಜನೆಯನ್ನು ಜಾರಿಗೊಳಿಸುತ್ತಿರುವುದಕ್ಕೆ ಪಕ್ಷದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ ಆದರೆ ಬುಲೆಟ್ ರೈಲು ನಿರ್ಮಿಸುವುದಕ್ಕೆ ಪಾಕಿಸ್ತಾನದ ಬಳಿ ಹಣವಿಲ್ಲ, ಒಂದು ವೇಳೆ ಬುಲೆಟ್ ರೈಲು ನಿರ್ಮಿಸಿದರೂ ಸಹ ಅದಕ್ಕೆ ತಕ್ಕಂತೆ ಟಿಕೆಟ್ ಗಳನ್ನು ಖರೀದಿಸುವ ಸಾಮರ್ಥ್ಯ ಪಾಕಿಸ್ತಾನದಲ್ಲಿ ಹೆಚ್ಚಿನವರಿಗೆ ಇಲ್ಲ ಎಂದು ರಫೀಕ್ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.