ನೋಟು ರದ್ದು ಪ್ರಧಾನಿ ಮೋದಿರ ದಿಟ್ಟ ನಿರ್ಧಾರ: ಚೀನಾ ಪ್ರಶಂಸೆ
500-1000 ಮುಖಬೆಲೆಯ ನೋಟುಗಳ ರದ್ದು ಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ವಿಪಕ್ಷಗಳು ತೀವ್ರ ವಾಗ್ದಾಳಿ ನಡೆಸುತ್ತಿದ್ದರೇ ಅತ್ತ ಚೀನಾದ...

Published On :
ಬೀಜಿಂಗ್: 500-1000 ಮುಖಬೆಲೆಯ ನೋಟುಗಳ ರದ್ದು ಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ವಿಪಕ್ಷಗಳು ತೀವ್ರ ವಾಗ್ದಾಳಿ ನಡೆಸುತ್ತಿದ್ದರೇ ಅತ್ತ ಚೀನಾದ ಸರ್ಕಾರಿ ಮಾಧ್ಯಮವೊಂದು ಮೋದಿ ಅವರನ್ನು ಹಾಡಿ ಹೋಗಳಿದೆ.
ನೋಟು ರದ್ದು ನಿರ್ಧಾರ ನಿಜಕ್ಕೂ ಪ್ರಧಾನಿ ಮೋದಿ ಅವರ ದಿಟ್ಟ ನಡೆ. ಇದು ಯಶಸ್ವಿಯಾಗುತ್ತೋ, ವಿಫಲವಾಗುತ್ತೋ ಪೂರ್ವನಿದರ್ಶನವನ್ನಂತೂ ಸೃಷ್ಟಿ ಮಾಡಲಿದೆ. ಅದರಿಂದ ಭ್ರಷ್ಟಾಚಾರದ ಮೇಲಾಗುವ ಪರಿಣಾಮಗಳ ಕುರಿತಂತೆ ಚೀನಾ ಕೂಡ ಪಾಠ ಕಲಿಯಬೇಕು ಎಂದು ಗ್ಲೋಬಲ್ ಟೈಮ್ಸ್ ಸಂಪಾದಕೀಯ ಹೇಳುತ್ತದೆ.
ಭಾರತದಲ್ಲಿ ಆದಂತೆ ಚೀನಾದಲ್ಲಿ ಕೂಡ 50-100 ಯುವಾನ್ ಮೌಲ್ಯದ ನೋಟುಗಳನ್ನು ನಿಷೇಧಿಸಿದರೆ ಏನಾಗಬಹುದು ಎಂಬುದನ್ನು ಊಹಿಸುವುದು ಕಷ್ಟ ಎಂದು ಪತ್ರಿಕೆ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


