ವಿದೇಶ

ಗ್ವಾದರ್ ಬಂದರು ಬಳಸಲು ರಷ್ಯಾಗೆ ಪಾಕ್ ಅನುಮತಿ!

ಚೀನಾ-ಪಾಕಿಸ್ತಾನ ಎಕನಾಮಿಕ್ ಕಾರಿಡಾರ್ ಯೋಜನೆಯಲ್ಲಿ ಭಾಗಿಯಾಗಲು ಉತ್ಸಾಹ ತೋರಿರುವ ರಷ್ಯಾಗೆ ದ್ವದಾರ್ ಪೋರ್ಟ್ ನ್ನು ಬಳಕೆ ಮಾಡಿಕೊಳ್ಳಲು ಅನುಮತಿ ನೀಡಲು ಪಾಕಿಸ್ತಾನ ನಿರ್ಧರಿಸಿದೆ.

ಗ್ವಾದರ್ ಬಂದರು ಬಳಸಲು ರಷ್ಯಾಗೆ ಪಾಕ್ ಅನುಮತಿ!
ಗ್ವಾದರ್ ಬಂದರು ಬಳಸಲು ರಷ್ಯಾಗೆ ಪಾಕ್ ಅನುಮತಿ!
Published On :
ಇಸ್ಲಾಮಾಬಾದ್: ಚೀನಾ-ಪಾಕಿಸ್ತಾನ ಎಕನಾಮಿಕ್ ಕಾರಿಡಾರ್ ಯೋಜನೆಯಲ್ಲಿ ಭಾಗಿಯಾಗಲು ಉತ್ಸಾಹ ತೋರಿರುವ ರಷ್ಯಾಗೆ ದ್ವದಾರ್ ಪೋರ್ಟ್ ನ್ನು ಬಳಕೆ ಮಾಡಿಕೊಳ್ಳಲು ಅನುಮತಿ ನೀಡಲು ಪಾಕಿಸ್ತಾನ ನಿರ್ಧರಿಸಿದೆ. 
ರಷ್ಯಾ ತನ್ನ ರಫ್ತು ವಹಿವಾಟುಗಳಿಗೆ ಗ್ವಾದರ್ ಬಂದರನ್ನು ಬಳಸಿಕೊಳ್ಳಲು ಅವಕಾಶ ನೀಡುವ ಬಗ್ಗೆ ಮನವಿ ಮಾಡಿತ್ತು. ರಷ್ಯಾದ ಮನವಿಯನ್ನು ಪುರಸ್ಕರಿಸಿರುವ ಪಾಕಿಸ್ತಾನ ರಷ್ಯಾಗೆ ಗ್ವಾದರ್ ಬಂದರನ್ನು ಬಳಸಿಕೊಳ್ಳಲು ಅನುಮತಿ ನೀಡಬೇಕೆಂಬ ನಿರ್ಧಾರ ಕೈಗೊಂಡಿದೆ. ಸಿಪಿಇಸಿ ಯೋಜನೆಯನ್ನು ತನ್ನನ್ನು ಭಾಗೀದಾರನನ್ನಾಗಿ ಸ್ವೀಕರಿಸಿದ್ದೇ ಆದಲ್ಲಿ ಪಾಕಿಸ್ತಾನದೊಂದಿಗೆ ರಷ್ಯಾ ರಕ್ಷಣಾ ಸಂಬಂಧವನ್ನು ವೃದ್ಧಿಗೊಳಿಸುವ ಭರವಸೆ ನೀಡಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ರಷ್ಯಾಗೆ ಗ್ವಾದರ್ ಬಂದರನ್ನು ಬಳಕೆ ಮಾಡಿಕೊಳ್ಳಲು ಅನುಮತಿ ನೀಡಲು ಮುಂದಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.