ವಿದೇಶ

ಭಾರತೀಯ ಯೋಧರ ಹತ್ಯೆ: ಆರೋಪ ತಳ್ಳಿ ಹಾಕಿದ ಪಾಕಿಸ್ತಾನ

ಪದೇ ಪದೇ ತನ್ನ ನೀಚ ಬುದ್ಧಿಯನ್ನು ಪ್ರದರ್ಶಿಸುತ್ತಿರುವ ಪಾಕಿಸ್ತಾನ ಮತ್ತದೇ ತನ್ನ ವಿತಂಡ ವಾದವನ್ನು ಮುಂದುವರೆಸಿದ್ದು, ಭಾರತೀಯ ಯೋಧರ ಹತ್ಯೆ ಆರೋಪವನ್ನು ನಿರಾಕರಿಸಿದೆ...

ಭಾರತೀಯ ಯೋಧರ ಹತ್ಯೆ: ಆರೋಪ ತಳ್ಳಿ ಹಾಕಿದ ಪಾಕಿಸ್ತಾನ
ಸಂಗ್ರಹ ಚಿತ್ರ
Published On :

ಇಸ್ಲಾಮಾಬಾದ್: ಪದೇ ಪದೇ ತನ್ನ ನೀಚ ಬುದ್ಧಿಯನ್ನು ಪ್ರದರ್ಶಿಸುತ್ತಿರುವ ಪಾಕಿಸ್ತಾನ ಮತ್ತದೇ ತನ್ನ ವಿತಂಡ ವಾದವನ್ನು ಮುಂದುವರೆಸಿದ್ದು, ಭಾರತೀಯ ಯೋಧರ ಹತ್ಯೆ ಆರೋಪವನ್ನು ನಿರಾಕರಿಸಿದೆ.

ಆರೋಪ ಕುರಿತಂತೆ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಕಚೇರಿಯ ವಕ್ತಾರ ನಫೀಸ್ ಜಕಾರಿಯಾ ಅವರು, ಪಾಕಿಸ್ತಾನದ ವಿರುದ್ಧ ಭಾರತ ಅಪಪ್ರಚಾರ ಮಾಡುತ್ತಿದೆ. ಪಾಕಿಸ್ತಾನ ಸೇನೆ ಭಾರತೀಯ ಯೋಧನ ಶಿರಚ್ಛೇದ ಮಾಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡುತ್ತಿದೆ. ಆದರೆ, ಈ ಆರೋಪವನ್ನು ಪಾಕಿಸ್ತಾನ ನಿರಾಕರಿಸುತ್ತದೆ ಎಂದು ಹೇಳಿದ್ದಾರೆ.

ಪಾಕಿಸ್ತಾನ ಎಂದಿಗೂ ಈ ರೀತಿಯ ಅನೈತಿಕ ಹಾಗೂ ವೃತ್ತಿಪರವಲ್ಲದ ಕೆಲಸಗಳನ್ನು ಮಾಡುವುದಿಲ್ಲ. ಈ ರೀತಿಯ ಕುಕೃತ್ಯಗಳಿಗೆ ಪಾಕಿಸ್ದಾನ ಎಂದಿಗೂ ಬೆಂಬಲವನ್ನು ನೀಡುವುದಿಲ್ಲ. ಪಾಕಿಸ್ತಾನ ವಿರುದ್ಧ ಭಾರತ ಅಪಪ್ರಚಾರವನ್ನು ಮಾಡುತ್ತಿದೆ. ಯೋಧರ ಹತ್ಯೆ ಕುರಿತಂತೆ ಭಾರತ ಮಾಡುತ್ತಿರುವ ಆರೋಪವನ್ನು ಪಾಕಿಸ್ತಾನ ತಳ್ಳಿಹಾಕುತ್ತಿದೆ. ಗಡಿ ನಿಯಂತ್ರಣ ರೇಖೆ ಬಳಿ ಹಾಗೂ ಅಂತರಾಷ್ಟ್ರೀಯ ಗಡಿಯಲ್ಲಿ ಯಾವುದೇ ರೀತಿಯ ದಾಳಿ ನಡೆದರೂ, ದಾಳಿಗೆ ದಿಟ್ಟ ಉತ್ತರ ನೀಡಲು ಪಾಕಿಸ್ತಾನ ಸದಾಕಾಲ ಸನ್ನದ್ಧವಾಗಿರುತ್ತದೆ ಎಂದು ಹೇಳಿಕೊಂಡಿದ್ದಾರೆ.

ಗಡಿಯಲ್ಲಿ ಎಡೆಬಿಡದೆ ತನ್ನ ಪುಂಡಾಟವನ್ನು ಮುಂದುವರೆಸುತ್ತಲೇ ಇರುವ ಪಾಕಿಸ್ತಾನ ನಿನ್ನೆಯಷ್ಟೇ ಮೂವರು ಭಾರತೀಯರನ್ನು ಹತ್ಯೆ ಮಾಡಿತ್ತು. ಮೂವರಲ್ಲಿ ಓರ್ವ ಯೋಧನ ಶಿರಚ್ಥೇದವನ್ನು ಮಾಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.