ಭಾರತದ ಗಡಿಯಲ್ಲಿ ಸಮರಾಭ್ಯಾಸ: ಪರೋಕ್ಷವಾಗಿ ಪ್ರಚೋದನೆ ನೀಡುತ್ತಿರುವ ಪಾಕ್ ಸೇನೆ
ಭಾರತೀಯ ಸೇನೆಯನ್ನು ಕೆರಳಿಸುವ ಕೆಲಸಗಳನ್ನು ಮಾಡಿ, ನಂತರ ಏನೂ ತಿಳಿಯದಂತೆ ನಟಿಸುವ ಪಾಕಿಸ್ತಾನ ಸೇನೆಯ ಮತ್ತೊಂದು ಮುಖವಾಡ ಬಯಲಾಗಿದ್ದು, ಭಾರತದ ಗಡಿಯಲ್ಲಿ ಸಮಾರಾಭ್ಯಾಸವನ್ನು ನಡೆಸಿ ಪರೋಕ್ಷವಾಗಿ ಭಾರತೀಯ ಸೇನೆಗೆ...

ನವದೆಹಲಿ: ಭಾರತೀಯ ಸೇನೆಯನ್ನು ಕೆರಳಿಸುವ ಕೆಲಸಗಳನ್ನು ಮಾಡಿ, ನಂತರ ಏನೂ ತಿಳಿಯದಂತೆ ನಟಿಸುವ ಪಾಕಿಸ್ತಾನ ಸೇನೆಯ ಮತ್ತೊಂದು ಮುಖವಾಡ ಬಯಲಾಗಿದ್ದು, ಭಾರತದ ಗಡಿಯಲ್ಲಿ ಸಮಾರಾಭ್ಯಾಸವನ್ನು ನಡೆಸಿ ಪರೋಕ್ಷವಾಗಿ ಭಾರತೀಯ ಸೇನೆಗೆ ಪ್ರಚೋದನೆ ನೀಡುವ ಕೆಲಸಗಳನ್ನ ಮಾಡುತ್ತಿದೆ.
ಪಂಜಾಬ್ ಪ್ರಾಂತ್ಯದ ಭಾರತೀಯ ಗಡಿ ಭವಲ್ಪುರ್ ನ ಖೈರ್ಪುರ್ ತಮೇವಾಲಿ ಪ್ರದೇಶದಲ್ಲಿ ಪಾಕಿಸ್ತಾನ ಸೇನೆ ತನ್ನ ಸಮರಾಭ್ಯಾಸ ಚಟುವಟಿಕೆಗಳನ್ನು ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಪಾಕಿಸ್ತಾನ ಪ್ರಧಾನಮಂತ್ರಿ ನವಾಜ್ ಷರೀಫ್ ಹಾಗೂ ಪಾಕಿಸ್ತಾನ ಸೇನಾ ಮುಖ್ಯಸ್ಥ ರಹೀಲ್ ಷರೀಫ್ ಅವರು ಸೇನಾ ಪಡೆ ಮತ್ತು ವಾಯುಪಡೆಗಳ ಈ ಸಮರಾಭ್ಯಾಸವನ್ನು ವೀಕ್ಷಿಸಿದ್ದಾರೆಂದು ವರದಿಗಳು ತಿಳಿಸಿವೆ.
ಗಡಿಯಲ್ಲಿ ಪಾಕಿಸ್ತಾನದ ಸೇನಾ ಪಡೆ ಹಾಗೂ ವಾಯುಪಡೆಗಳು ಯುದ್ಧ ಹೆಲಿಕಾಪ್ಟರ್ ಗಳೊಂದಿಗೆ ಸಮಾರಾಭ್ಯಾಸವನ್ನು ನಡೆಸುತ್ತಿವೆ ಎಂದು ತಿಳಿದುಬಂದಿದೆ.
ಗಡಿಯಲ್ಲಿ ಅಪ್ರಚೋದಿತ ಗುಂಡಿನ ದಾಳಿ ಹಾಗೂ ಪದೇ ಪದೇ ಕದನ ವಿರಾಮ ಉಲ್ಲಂಘಿಸುತ್ತಿದ್ದ ಪಾಕಿಸ್ತಾನ ಸೇನೆಗೆ ಇತ್ತೀಚೆಗಷ್ಟೇ ದಿಟ್ಟ ಉತ್ತರವನ್ನು ನೀಡಿತ್ತು. ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದ್ದ 7 ಪಾಕಿಸ್ತಾನ ಸೈನಿಕರನ್ನು ಭಾರತೀಯ ಸೇನೆ ಹತ್ಯೆ ಮಾಡಿತ್ತು. ಇದರ ಬೆನ್ನಲ್ಲೇ ಇದೀಗ ಪಾಕಿಸ್ತಾನ ಸೇನೆ ಭಾರತದ ಗಡಿಯಲ್ಲಿ ಸಮರಾಭ್ಯಾಸ ನಡೆಸುತ್ತಿರುವುದು ಮಹತ್ವವನ್ನು ಪಡೆದುಕೊಂಡಿದೆ.
ಪಾಕಿಸ್ತಾನ ಸೈನಿಕರ ಹತ್ಯೆ ಕುರಿತಂತೆ ಈ ಹಿಂದೆ ಹೇಳಿಕೆ ನೀಡಿದ್ದ ಪಾಕಿಸ್ತಾನ ಪ್ರಧಾನಮಂತ್ರಿ ನವಾಜ್ ಷರೀಪ್ ಅವರು, ಭಾರತದ ತಂತ್ರಗಳಿಗೆ ಪಾಕಿಸ್ತಾನ ಎಂದಿಗೂ ಬಗ್ಗುವುದಿಲ್ಲ. ನಮ್ಮ ತಾಳ್ಮೆಯನ್ನು ದೌರ್ಬಲವ್ಯವೆಂದು ಪರಿಗಣಿಸಬಾರದು. ಯಾವುದೇ ರೀತಿಯ ಆಕ್ರಮಣಗಳು ನಡೆದರೂ ಅದನ್ನು ಎದುರಿಸಲು ಪಾಕಿಸ್ತಾನ ಸದಾ ಸಿದ್ಧವಿದೆ ಎಂದು ಹೇಳಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


