ಸಾರ್ವಜನಿಕ ಕಟ್ಟಡದಲ್ಲಿ ನಿಕಾಬ್ ತೆಗೆಯಲು ನಿರಾಕರಿಸಿದ ಮಹಿಳೆಗೆ ದಂಡ!
ಸಾರ್ವಜನಿಕ ಕಟ್ಟಡದಲ್ಲಿ ಹಿಜಾಬ್ (ನಿಕಾಬ್ ಅಥವಾ ಅಲ್‌ಅಮೀರ) ನ್ನು ತೆಗೆಯಲು ನಿರಾಕರಿಸಿದ ಅಲ್ಬೇನಿಯನ್ ಮುಸ್ಲಿಂ ಮಹಿಳೆಯೊಬ್ಬರಿಗೆ ರೋಮ್ ನಲ್ಲ್ 30,000 ಯುರೋಗಳಷ್ಟು ದಂಡ ವಿಧಿಸಲಾಗಿದೆ.

Published On :
ರೋಮ್: ಸಾರ್ವಜನಿಕ ಕಟ್ಟಡದಲ್ಲಿ ಹಿಜಾಬ್ (ನಿಕಾಬ್ ಅಥವಾ ಅಲ್‌ಅಮೀರ) ನ್ನು ತೆಗೆಯಲು ನಿರಾಕರಿಸಿದ ಅಲ್ಬೇನಿಯನ್ ಮುಸ್ಲಿಂ ಮಹಿಳೆಯೊಬ್ಬರಿಗೆ ರೋಮ್ ನಲ್ಲ್ 30,000 ಯುರೋಗಳಷ್ಟು ದಂಡ ವಿಧಿಸಲಾಗಿದೆ.
ಇಟಾಲಿಯ ಸ್ಯಾನ್ ವಿಟೋ ಅಲ್ ಟ್ಯಾಗ್ಲಿಯಾಮೆಂಟೋ ಕಟ್ಟಡದಲ್ಲಿ ಹಿಜಾಬ್ ನ್ನು ತೆಗೆದು ಕಟ್ಟಡದೊಳಗೆ ಪ್ರವೇಶಿಸಬೇಕೆಂಬ ನಿಯಮವಿದೆ. ಆದರೆ ಕಟ್ಟಡದೊಳಗೆ ಪ್ರವೇಶಿಸುವ ಮುನ್ನ ಮುಸ್ಲಿಂ ಮಹಿಳೇ ಹಿಜಾಬ್ ನ್ನು ತೆಗೆಯಲು ನಿರಾಕರಿಸಿದ ಕಾರಣ ಆಕೆಗೆ ಅಲ್ಲಿನ ನ್ಯಾಯಾಧೀಶರು 30,000 ಯುರೋ ದಂಡ ಹಾಕಿದ್ದಾರೆ.
ಕಳೆದ ತಿಂಗಳು ಸ್ಯಾನ್ ವಿಟೋ ಕಟ್ಟಡದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಮಹಿಳೆ ಅಲ್ಲಿನ ಅಧಿಕಾರಿಗಳ ಸೂಚನೆಯನ್ನು ಧಿಕ್ಕರಿಸಿದ್ದರು. ನಂತರ ಪೊಲೀಸರನ್ನು ಕರೆಸಿ ಆಕೆಯನ್ನು ಕೌನ್ಸಿಲ್ ಸಭೆಯಿಂದ ಹೊರಕಳಿಸಲಾಗಿತ್ತು. ಸ್ಯಾನ್ ವಿಟೋ ಕಟ್ಟದಲ್ಲಿ 2000 ರಿಂದ ಇದ್ದ ಮುಸ್ಲಿಂ ಮಹಿಳೆ ಇತ್ತೀಚೆಗಷ್ಟೇ ಇಟಾಲಿ ಪೌರತ್ವ ಪಡೆದಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


