ವಿದೇಶ

ಜನಾಂಗೀಯ ಭೇದದಿಂದಾಗಿ ಡೊನಾಲ್ಡ್ ಟ್ರಂಪ್ ಗೆಲವು ಸಾಧಿಸಿದ್ದಾರೆ: ಉಗ್ರ ಹಫೀಜ್ ಸಯೀದ್

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ನಡೆದ ಜನಾಂಗೀಯ ಭೇಧ ಹಾಗೂ ನಿರ್ಲಕ್ಷ್ಯತನದಿಂದಾಗಿ ಡೊನಾಲ್ಡ್ ಟ್ರಂಪ್ ಅವರು ಗೆಲವು ಸಾಧಿಸಿದ್ದಾರೆಂದು ಜಮಾತ್ ಉದ್ ದವಾ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್...

ಜನಾಂಗೀಯ ಭೇದದಿಂದಾಗಿ ಡೊನಾಲ್ಡ್ ಟ್ರಂಪ್ ಗೆಲವು ಸಾಧಿಸಿದ್ದಾರೆ: ಉಗ್ರ ಹಫೀಜ್ ಸಯೀದ್
ಜಮಾತ್ ಉದ್ ದವಾ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್
Published On :

ಇಸ್ಲಾಮಾಬಾದ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ನಡೆದ ಜನಾಂಗೀಯ ಭೇಧ ಹಾಗೂ ನಿರ್ಲಕ್ಷ್ಯತನದಿಂದಾಗಿ ಡೊನಾಲ್ಡ್ ಟ್ರಂಪ್ ಅವರು ಗೆಲವು ಸಾಧಿಸಿದ್ದಾರೆಂದು ಜಮಾತ್ ಉದ್ ದವಾ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಶನಿವಾರ ಹೇಳಿದ್ದಾರೆ

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅವರು ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಅಮೆರಿಕದಲ್ಲಿ ಇಂದು ಜ್ಞಾನ, ವಿವೇಕ, ತಿಳುವಳಿಕೆ ಮತ್ತು ಸಹಿಷ್ಣುತೆಗಳು ಸೋಲನ್ನು ಕಂಡಿದೆ. ಜನಾಂಗೀಯ ಭೇದ ಹಾಗೂ ನಿರ್ಲಕ್ಷ್ಯತನ ಗೆಲವು ಸಾಧಿಸಿದೆ. ದೇವರು ಟ್ರಂಪ್ ಅಧಿಕಾರದ ಮೂಲಕ ಅಮೆರಿಕ ರಾಷ್ಟ್ರವನ್ನು ಆಂತರಿಕ ಸಮಸ್ಯೆಗಳ ಒಳಗೆ ಸಿಕ್ಕಿಹಾಕಿಕೊಳ್ಳುವಂತೆ ಮಾಡಿದ್ದಾನೆಂದು ಹೇಳಿಕೊಂಡಿದ್ದಾರೆ.

ಟ್ರಂಪ್ ಅಧ್ಯಕ್ಷತೆಯ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ವಿಶ್ವಕ್ಕೆ ಅಮೆರಿಕ ರಾಷ್ಟ್ರ ಅನ್ಯಾಯವನ್ನು ಮಾಡಿದೆ. ಮುಸ್ಲಿಮರನ್ನು ಹತ್ಯೆ ಮಾಡಿ, ಅನಾಗರೀಕತೆ ಪಸರುವಂತೆ ಮಾಡಿದೆ. ಇದೀಗ ಅಮೆರಿಕನ್ನರಿಗೆ ಅಲ್ಲಾ ಶಿಕ್ಷೆ ನೀಡಲು ನಿರ್ಧರಿಸಿದ್ದಾನೆ. ಅಮೆರಿಕ ರಾಷ್ಟ್ರದ ನಿಜವಾದ ಮುಖ ಇದೀಗ ಬಯಲಾಗಲಿದೆ. ಈ ಸಮಯದಲ್ಲಿ ಮುಸ್ಲಿಂ ರಾಷ್ಟ್ರಗಳು ಒಗ್ಗೂಡಿ ತಮ್ಮ ಶಕ್ತಿಯನ್ನ ಹೆಚ್ಚಿಸಿಕೊಳ್ಳಬೇಕಿದೆ ಎಂದು ತಿಳಿಸಿದ್ದಾರೆ.

ಕಾಶ್ಮೀರ ಮತ್ತು ಪ್ಯಾಲೆಸ್ಟೈನ್ ಸಮಸ್ಯೆ ಪರಿಹಾರಕ್ಕಾಗಿ ನಾವು ನಮ್ಮ ಕಾಲಿನ ಮೇಲೆ ನಿಲ್ಲಬೇಕಿದೆ. ಅಮೆರಿಕ ತನ್ನ ಹಿಡಿತವನ್ನು ಕಳೆದುಕೊಳ್ಳಲಿದೆ. ಅಸಮಾಧಾನವನ್ನು ಹೊರಹಾಕುವ ಬದಲು ಆ ದೇವರ ಸಹಾಯಕ್ಕಾಗಿ ಮೊರೆ ಹೋಗಬೇಕಿದೆ.

ಅಮೆರಿಕ ದೇಶದಲ್ಲಿ ದೊಡ್ಡ ಬದಲಾವಣೆಗಳು ಕಂಡು ಬರಲಿದ್ದು, ಇಸ್ಲಾಂ ಹಾಗೂ ಮುಸ್ಲಿಮರಿಗೆ ಧನಾತ್ಮಕ ಸಂದೇಶ ರವಾನೆಯಾಗಲಿದೆ. ಅಮೆರಿಕ ಅತ್ಯಂತ ನಿರ್ಲಕ್ಷ್ಯ ರಾಷ್ಟ್ರವಾಗಿದೆ ಎಂಬುದು ಅಲ್ಲಿನ ಅಧ್ಯಕ್ಷೀಯ ಚುನಾವಣೆಯಿಂದ ಬಹಿರಂಗವಾಗಿದೆ ಎಂದು ಹೇಳಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.