ಅಮೆರಿಕ ಅಧ್ಯಕ್ಷನಾದರೆ ಸಿರಿಯಾ ನಿರಾಶ್ರಿತರ ವಲಸೆಯನ್ನು ಅಂತ್ಯಗೊಳಿಸುತ್ತೇನೆ: ಡೊನಾಲ್ಡ್ ಟ್ರಂಪ್
ಅಂತಿಮ ಹಂತದ ಚುನಾವಣಾ ಪ್ರಚಾರ ಭಾಷಣದಲ್ಲೂ ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ವಲಸೆ ವಿರೋಧಿ ನಿಲುವಿಗೆ ಬದ್ಧರಾಗಿರುವ ಸೂಚನೆ ನೀಡಿದ್ದಾರೆ.

Published On :
ವಾಷಿಂಗ್ ಟನ್: ಅಂತಿಮ ಹಂತದ ಚುನಾವಣಾ ಪ್ರಚಾರ ಭಾಷಣದಲ್ಲೂ ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ವಲಸೆ ವಿರೋಧಿ ನಿಲುವಿಗೆ ಬದ್ಧರಾಗಿರುವ ಸೂಚನೆ ನೀಡಿದ್ದಾರೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದು, ಅಧ್ಯಕ್ಷರಾದರೆ, ದೇಶದೊಳಗೆ ಉಗ್ರವಾದಿಗಳು ನುಸುಳುವುದನ್ನು ತಡೆಗಟ್ಟಲು ಸಿರಿಯಾದ ನಿರಾಶ್ರಿತರ ವಲಸೆಯನ್ನು ಸ್ಥಗಿತಗೊಳಿಸುವುದಾಗಿ ಹೇಳಿದ್ದಾರೆ. ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ಸಿರಿಯಾ ನಿರಾಶ್ರಿತರಿಗೆ ನಮ್ಮ ದೇಶದಲ್ಲಿ ಆಶ್ರಯ ಕಲ್ಪಿಸುವುದರಲ್ಲಿ ಶೇ.550 ರಷ್ಟು ಏರಿಕೆಯಾಗಬೇಕೆಂಬ ಅಭಿಪ್ರಾಯಪಟ್ಟಿದ್ದಾರೆ. ಅವರ ಈ ಆಲೋಚನೆ ನಮ್ಮ ಶಾಲೆಗಳಿಗೆ ನಮ್ಮ ದೇಶಕ್ಕೆ ತಲೆಮಾರುಗಳವರೆಗೆ ಭಯೋತ್ಪಾದನೆಯನ್ನು ತರಲಿದೆ. ಒಂದು ವೇಳೆ ನಾನು ಅಧ್ಯಕ್ಷನಾದರೆ ಸಿರಿಯಾ ನಿರಾಶ್ರಿತರ ಯೋಜನೆಯನ್ನೇ ಸಂಪೂರ್ಣವಾಗಿ ರದ್ದುಗೊಳಿಸುತ್ತೇನೆ ಎಂದು ಡೊನಾಲ್ಡ್ ಟ್ರಂಪ್ ಭರವಸೆ ನೀಡಿದ್ದಾರೆ.
ಪೆನ್ಸಿಲ್ವೇನಿಯಾದಲ್ಲಿ ಮಾತನಾಡಿರುವ ಡೋನಾಲ್ಡ್ ಟ್ರಂಪ್, ಅಮೆರಿಕದ ಅಧ್ಯಕ್ಷೀಯ ಚುನಾವಣೆ ಅಮೆರಿಕ ಈಗಿರುವ ಮಾದರಿಯನ್ನೇ ಆಯ್ಕೆ ಮಾಡುತ್ತದೆಯೋ ಅಥವಾ ನಮ್ಮನ್ನು ನಾವೇ ಆಳುವ ಮಾದರಿಯನ್ನು ಆಯ್ಕೆ ಮಾಡಲಿದೆಯೋ ಎಂಬುದನ್ನು ನಿರ್ಧರಿಸಲಿದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
USಅಮೆರಿಕಅಧ್ಯಕ್ಷೀಯ ಚುನಾವಣೆpresidential electionHillary Clintonಹಿಲರಿ ಕ್ಲಿಂಟನ್Donald Trumpಡೊನಾಲ್ಡ್ ಟ್ರಂಪ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


