ಭಾರತಕ್ಕೆ ಎನ್ ಎಸ್ ಜಿ ಸದಸ್ಯತ್ವ: ತನ್ನ ನಿಲುವಿಗೆ ಬದ್ಧ ಎಂದ ಚೀನಾ
: ಈ ವಾರ ವಿಯೆನ್ನಾದಲ್ಲಿ ಎನ್ ಎಸ್ ಜಿ ಸಂಬಂಧ ಸಭೆ ನಡೆಯಲಿದೆ. ಇದೇ ವೇಳೆ ಭಾರತಕ್ಕೆ ಎನ್ಎಸ್ ಜಿ ಸದಸ್ಯತ್ವ ನೀಡುವುದನ್ನು ವಿರೋಧಿಸುತ್ತಿರುವ ಚೀನಾ ...

ಬೀಜಿಂಗ್: ಈ ವಾರ ವಿಯೆನ್ನಾದಲ್ಲಿ ಎನ್ ಎಸ್ ಜಿ ಸಂಬಂಧ ಸಭೆ ನಡೆಯಲಿದೆ. ಇದೇ ವೇಳೆ ಭಾರತಕ್ಕೆ ಎನ್ಎಸ್ ಜಿ ಸದಸ್ಯತ್ವ ನೀಡುವುದನ್ನು ವಿರೋಧಿಸುತ್ತಿರುವ ಚೀನಾ ಈಗಲೂ ತನ್ನ ನಿಲುವಿಗೆ ಬದ್ಧವಾಗಿರುವುದಾಗಿ ತಿಳಿಸಿದೆ.
ನವೆಂಬರ್ 11-12 ರಂದು ವಿಯೆನ್ನಾದಲ್ಲಿ ಎನ್ ಎಸ್ ಜಿ ಅಧಿವೇಶನ ನಡೆಯಲಿದೆ. ಎನ್ ಎಸ್ ಜಿ ಸದಸ್ಯತ್ವಕ್ಕೆ ಭಾರತ ಮತ್ತು ಪಾಕಿಸ್ತಾನಗಳು ಅರ್ಜಿ ಸಲ್ಲಿಸಿವೆ. ಆದರೆ ಈ ಎರಡು ದೇಶಗಳು
ಪರಮಾಣು ಪ್ರಸರಣ-ಮಾಡದಿರುವ ಒಪ್ಪಂದಕ್ಕೆ ಸಹಿ ಹಾಕದಿರುವ ಕಾರಣ ಚೀನಾ ಭಾರತ ಮತ್ತು ಪಾಕಿಸ್ತಾನಕ್ಕೆ ಎನ್ ಎಸ್ ಜಿ ಸದಸ್ಯತ್ವ ನೀಡಲು ವಿರೋಧ ವ್ಯಕ್ತ ಪಡಿಸಿದೆ.
ವಿಯೆನ್ನಾ ಎನ್ ಎಸ್ ಜಿ ಸಭೆಯಲ್ಲಿ 48 ರಾಷ್ಟ್ರಗಳು ಭಾಗವಹಿಸಲಿವೆ. ಕಳೆದ ವಾರ ಹೈದರಾಬಾದ್ ನಲ್ಲಿ ಚೀನಾ ಮತ್ತು ಭಾರತ ಮತ್ತೊಂದು ಸುತ್ತಿನ ಮಾತುಕತೆ ನಡೆಸಿದ್ದು, ಈ ವೇಳೆ ಪರಮಾಣು ಪ್ರಸರಣ-ಮಾಡದಿರುವ ಒಪ್ಪಂದಕ್ಕೆ ಮೊದಲು ಸಹಿ ಹಾಕಬೇಕೆಂದು ಭಾರತಕ್ಕೆ ಚೀನಾ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


