ಇ-ಮೇಲ್ ಹಗರಣ: ಹಿಲರಿ ಕ್ಲಿಂಟನ್ ಗೆ ಕ್ಲೀನ್ ಚಿಟ್
ಅಮೆರಿಕ ಕಾರ್ಯದರ್ಶಿಯಾಗಿದ್ದಾಗ ಖಾಸಗಿ ಇ-ಮೇಲ್ ಸರ್ವರ್ ನ್ನು ಹಿಲರಿ ಕ್ಲಿಂಟನ್ ಬಳಸಿದ್ದರು ಎಂಬ ಆರೋಪಕ್ಕೆ...

Published On :
ವಾಷಿಂಗ್ಟನ್: ಅಮೆರಿಕ ಕಾರ್ಯದರ್ಶಿಯಾಗಿದ್ದಾಗ ಖಾಸಗಿ ಇ-ಮೇಲ್ ಸರ್ವರ್ ನ್ನು ಹಿಲರಿ ಕ್ಲಿಂಟನ್ ಬಳಸಿದ್ದರು ಎಂಬ ಆರೋಪಕ್ಕೆ ಸಂಬಂಧಪಟ್ಟಂತೆ ಅವರು ಯಾವುದೇ ಅಪರಾಧ ಆರೋಪಗಳನ್ನು ಎದುರಿಸುವ ಅಗತ್ಯವಿಲ್ಲ ಎಂದು ವಿದೇಶಿ ತನಿಖಾ ಸಂಸ್ಥೆ ನಿರ್ದೇಶಕ ಜೇಮ್ಸ್ ಕಾಮಿ ಕಾನೂನು ತಜ್ಞರಿಗೆ ತಿಳಿಸಿದ್ದಾರೆ.
ಹಿಲರಿ ಕ್ಲಿಂಟನ್ ಅವರ ಸಹಚರೆ ಹುಮಾ ಅಬೆದಿನ್ ಅವರ ಮಾಜಿ ಪತಿ ಅಂತೊನಿ ವೀನರ್ ಅವರ ಜೊತೆ ಸರ್ಕಾರದ ರಹಸ್ಯ ಮಾಹಿತಿಗಳನ್ನು ಖಾಸಗಿ ಇ-ಮೇಲ್ ಮೂಲಕ ವಿನಿಮಯ ಮಾಡಿಕೊಂಡಿದ್ದರು ಎಂದು ಎಫ್ ಬಿಐ ನಿರ್ದೇಶಕ ಜೇಮ್ಸ್ ಕಾಮಿ ಆರೋಪಿಸಿದ್ದರು.
ಅಮೆರಿಕದಲ್ಲಿ ನಾಳೆ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಈ ಸಂದರ್ಭದಲ್ಲಿ ಅವರಿಗೆ ತನಿಖಾ ಸಂಸ್ಥೆಯಿಂದ ಕ್ಲೀನ್ ಚಿಟ್ ಸಿಕ್ಕಿರುವುದು ವರದಾನವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


