ಹಾಂಗ್ ಕಾಂಗ್ ಸ್ವಾತಂತ್ರ್ಯವನ್ನು ನಿರ್ಬಂಧಿಸುವ ಮಸೂದೆ ಅಂಗೀಕರಿಸಿದ ಚೀನಾ!
ಹಾಂಕ್ ಕಾಂಗ್ ನ ಸ್ವಾತಂತ್ರ್ಯವನ್ನು ನಿರ್ಬಂಧಿಸುವ ಮಸೂದೆಯನ್ನು ಚೀನಾದ ಶಾಸಕಾಂಗ ನ.7 ರಂದು ಅಂಗೀಕರಿಸಿದೆ.

Published On :
ಬೀಜಿಂಗ್: ಹಾಂಕ್ ಕಾಂಗ್ ನ ಸ್ವಾತಂತ್ರ್ಯವನ್ನು ನಿರ್ಬಂಧಿಸುವ ಮಸೂದೆಯನ್ನು ಚೀನಾದ ಶಾಸಕಾಂಗ ನ.7 ರಂದು ಅಂಗೀಕರಿಸಿದೆ.
ಇತ್ತೀಚೆಗಷ್ಟೇ ಹಾಂಕ್ ಕಾಂಗ್ ನ ಶಾಸಕ/ ಸಂಸದರಾಗಿ ಆಯ್ಕೆಯಾಗಿದ್ದ ಯು ವಾಯ್ ಚಿಂಗ್ ಹಾಗೂ ಬ್ಯಾಗಿಯೊ ಲೆಯುಂಗ್ ಹಾಂಕ್ ಕಾಂಗ್ ಶಾಸನಸಭೆಯಲ್ಲಿ ಅಧಿಕಾರ ಸ್ವೀಕರಿಸುವುದಕ್ಕೆ ನಿರ್ಬಂಧ ವಿಧಿಸಲು ಚೀನಾ ಈ ಮಸೂದೆಯನ್ನು ಅಂಗೀಕರಿಸಿದ್ದು, ಇದನ್ನು ಹಾಂಕ್ ಕಾಂಗ್ ಸ್ವಾತಂತ್ರ್ಯವನ್ನು ಹರಣ ಮಾಡುವ ಮಸೂದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಚೀನಾ ಅಂಗೀಕರಿಸಿರುವ ಮಸೂದೆ ಬಗ್ಗೆ ಮಕಾವ್ ವಿದ್ಯಮಾನಗಳ ಕಚೇರಿ ಹಾಗೂ ಹಾಂಗ್ ಕಾಂಗ್ ವಕ್ತಾರರು ಪ್ರತಿಕ್ರಿಯೆ ನೀಡಿದ್ದು, ಹಾಂಗ ಕಾಂಗ್ ವಿಶೇಷ ಆಡಳಿತ ಪ್ರದೇಶದ ಮೂಲ ಕಾನೂನನ್ನು(ಎಸ್ಎಆರ್) ಅಂಗೀಕರಿಸಿರುವುದನ್ನು ಸ್ವಾಗತಿಸಿದ್ದು, ಬಹಳ ಅಗತ್ಯವಿದ್ದ ಮಸೂದೆಯನ್ನು ಸೂಕ್ತ ಸಮಯದಲ್ಲಿ ಅಂಗೀಕರಿಸಲಾಗಿದೆ ಎಂದು ಹೇಳಿದ್ದಾರೆ.
ಚೀನಾ ಅಂಗೀಕರಿಸಿರುವ ಮಸೂದೆಯಲ್ಲಿ ಆರ್ಟಿಕಲ್ 104 ಕ್ಕೆ ಸ್ಪಷ್ಟ ವ್ಯಾಖ್ಯಾನ ನೀಡಲಾಗಿದ್ದು, ಅದರ ಪ್ರಕಾರ ಹಾಂಗ್ ಕಾಂಗ್ ಸ್ವಾತಂತ್ರ್ಯವನ್ನು ಚೀನಾದ ಕೇಂದ್ರ ಸರ್ಕಾರ ಸ್ಪಷ್ಟವಾಗಿ ನಿರಾಕರಿಸುತ್ತದೆ ಎಂದು ವಕ್ತಾರರು ತಿಳಿಸಿದ್ದಾರೆ. ಚೀನಾ ನೀಡಿರುವ ವ್ಯಾಖ್ಯಾನ ಹಾಂಗ್ ಕಾಂಗ್ ವಿಶೇಷ ಆಡಳಿತ ಪ್ರದೇಶದ ಮೂಲಕಾನೂನನ್ನು ರಕ್ಷಿಸುತ್ತದೆ ಹಾಗೂ ಹಾಂಗ್ ಕಾಂಗ್ ಸೇರಿದಂತೆ ಸಮಸ್ತ ಚೀನಾ ಜನರ ಸಾಮಾನ್ಯ ಆಕಾಂಕ್ಷೆಗಳಿಗೆ ಬದ್ಧವಾಗಿರಲಿದೆ ಎಂದು ವಕ್ತಾರರು ಮಾಹಿತಿ ನೀಡಿದ್ದಾರೆ.
ಹಾಂಗ್ ಕಾಂಗ್ ಜನತೆ ಮಸೂದೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದು, ಪ್ರತಿಭಟನಾ ನಿರತರ ವಿರುದ್ಧ ಹಾಂಗ್ ಕಾಂಗ್ ಪೊಲೀಸರು ಪೆಪ್ಪರ್ ಸ್ಪ್ರೇ ಪ್ರಯೋಗಿಸಿದ್ದಾರೆ. ಹಾಂಗ್ ಕಾಂಗ್ ನ ಸ್ವಾತಂತ್ರ್ಯ ಚಳುವಳಿಯನ್ನು ಹತ್ತಿಕ್ಕಲು ಚೀನಾ ಯತ್ನಿಸುತ್ತಿದೆ ಎಂದು ಆರೋಪಿಸಿ ಚೀನ ಪ್ರತಿನಿಧಿಯ ಕಚೇರಿ ಬಳಿ ಹಾಂಗ್ ಕಾಂಗ್ ನ ಜನತೆ ಪ್ರತಿಭಟನೆ ನಡೆಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


