ವಿದೇಶ

ಕಾಶ್ಮೀರ ಹಿಂಸಾಚಾರದ ಬಗ್ಗೆ ತಣ್ಣನೆ ಪ್ರತಿಕ್ರಿಯೆ, ಪಾಕ್ ಗೆ ಹಫೀಜ್ ಸಯೀದ್ ತರಾಟೆ

ಕಾಶ್ಮೀರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಶಾಂತ ಪ್ರತಿಕ್ರಿಯೆ ನೀಡುತ್ತಿರುವ ಪ್ರಧಾನಿ ನವಾಜ್ ಷರೀಫ್ ಸರ್ಕಾರವನ್ನು ತರಾಟೆಗೆ...

ಕಾಶ್ಮೀರ ಹಿಂಸಾಚಾರದ ಬಗ್ಗೆ ತಣ್ಣನೆ ಪ್ರತಿಕ್ರಿಯೆ, ಪಾಕ್ ಗೆ ಹಫೀಜ್ ಸಯೀದ್ ತರಾಟೆ
ಹಫೀಜ್ ಸಯೀದ್
Published On :
ಲಾಹೋರ: ಕಾಶ್ಮೀರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಶಾಂತ ಪ್ರತಿಕ್ರಿಯೆ ನೀಡುತ್ತಿರುವ ಪ್ರಧಾನಿ ನವಾಜ್ ಷರೀಫ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಮುಂಬೈ ದಾಳಿಯ ರೂವಾರಿ, ಜಾಮಾತ್ ಉದ್ ದಾವಾ(ಜೆಯುಡಿ) ಮುಖ್ಯಸ್ಥ ಹಫೀಜ್ ಸಯೀದ್, ಕಣಿವೆ ರಾಜ್ಯದ ಜನತೆಗೆ ಪಾಕಿಸ್ತಾನದ ಸಂಪೂರ್ಣ ಪ್ರಾಯೋಗಿಕ ಬೆಂಬಲದ ಅಗತ್ಯ ಇದೆ ಎಂದಿದ್ದಾನೆ.
ಜೆಯುಡಿಯ ಮುಖ್ಯ ಕಚೇರಿಯಲ್ಲಿ ಶುಕ್ರವಾರದ ಧರ್ಮೋಪದೇಶದ ವೇಳೆ ಹಫೀಜ್ ಸಯೀದ್, ಕಾಶ್ಮೀರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಸರ್ಕಾರ ಶಾಂತಿಯುತವಾಗಿ ಪ್ರತಿಕ್ರಿಯೆ ತೋರುತ್ತಿದ್ದು, ಕಾಶ್ಮೀರ ಸಂತ್ರಸ್ಥರ ನೋವನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿ ನವಾಜ್ ಷರೀಫ್ ಮತ್ತು ಅವರ ಸರ್ಕಾರ ಇತರೆ ಸಚಿವರು ಕಾಶ್ಮೀರ ಪರವಾಗಿ ಕೇವಲ ಒಂದೇರಡು ಹೇಳಿಕೆ ನೀಡಿದರೆ ಅದಕ್ಕೆ ಯಾವುದೇ ಬೆಲೆ ಇರಲ್ಲ. ಅವರಿಗೆ ಸಂಪೂರ್ಣ ಬೆಂಬಲದ ಅಗತ್ಯ ಇದೆ ಎಂದು ಹೇಳಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.