ಅಕ್ಕನ ಕಣ್ಣು ಕಿತ್ತು ಕಾಲು ಕತ್ತರಿಸಿದ ಸ್ವಂತ ಸಹೋದರರು
ಸ್ವಂತ ತಮ್ಮಂದಿರೇ ತಮ್ಮ ಒಡಹುಟ್ಟಿದ ಸಹೋದರಿಯ ಕಣ್ಣುಗುಡ್ಡೆ ಕಿತ್ತು ಹಾಕಿ ಬಳಿಕ ಆಕೆಯ ಕಾಲುಗಳನ್ನು ಕತ್ತರಿಸಿದ ಹೃದಯವಿದ್ರಾವಕ ಘಟನೆ...

ಲಾಹೋರ್: ಸ್ವಂತ ತಮ್ಮಂದಿರೇ ತಮ್ಮ ಒಡಹುಟ್ಟಿದ ಸಹೋದರಿಯ ಕಣ್ಣುಗುಡ್ಡೆ ಕಿತ್ತು ಹಾಕಿ ಬಳಿಕ ಆಕೆಯ ಕಾಲುಗಳನ್ನು ಕತ್ತರಿಸಿದ ಹೃದಯವಿದ್ರಾವಕ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.
ಲಾಹೋರಿನಿಂದ 400 ಕಿ.ಮೀ ದೂರದಲ್ಲಿರುವ ಮುಜಾಫರ್‍ಘರ್ ಎಂಬಲ್ಲಿ ಬುಧವಾರ ಈ ಘಟನೆ ನಡೆದಿದೆ. ಮಹಿಳೆ ತನ್ನ ಮಗಳನ್ನು ಅಪಹರಿಸಿರುವುದಾಗಿ ಆರೋಪಿಸಿ ಆಕೆಯ ಸಹೋದರ ಈ ಮೊದಲೇ ಮಹಿಳೆ ವಿರುದ್ಧ ಎಫ್‍ಐಆರ್ ದಾಖಲಿಸಿದ್ದನು ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.
ತನ್ನ ಮಾವ ಹಾಗೂ ಆತನ ಸಹೋದರ ಸೇರಿಕೊಂಡು ಈ ಘೋರ ಕೃತ್ಯವೆಸಗಿದ್ದಾರೆ. ಮಗಳು ಕಾಣೆಯಾಗಿರುವುದಕ್ಕೆ ಸೇಡು ತೀರಿಸಿಕೊಳ್ಳಲು ಈ ರೀತಿ ಮಾಡಿದ್ದಾರೆ ಎಂದು ಅಸ್ವಸ್ಥ ಮಹಿಳೆಯ ಮಗಳು ಅಲ್ಲಿನ ಸ್ಥಳೀಯ ಪತ್ರಿಕೆಗೆ ತಿಳಿಸಿದ್ದಾಳೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


