ವಿದೇಶ

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಒಂಭತ್ತು ಜನ ಭಯೋತ್ಪಾದಕರ ಹತ್ಯೆ

ಪಾಕಿಸ್ತಾನ ಪಂಜಾಬ್ ಪ್ರಾಂತ್ಯದಲ್ಲಿ ಉಗ್ರಗಾಮಿ ವಿರೋಧಿ ದಳ ಒಂಭತ್ತು ಶಂಕಿತ ಉಗ್ರರನ್ನು ಹತ್ಯೆ ಮಾಡಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಒಂಭತ್ತು ಜನ ಭಯೋತ್ಪಾದಕರ ಹತ್ಯೆ
ಸಾಂದರ್ಭಿಕ ಚಿತ್ರ
Published On :
ಇಸ್ಲಮಾಬಾದ್: ಪಾಕಿಸ್ತಾನ ಪಂಜಾಬ್ ಪ್ರಾಂತ್ಯದಲ್ಲಿ ಉಗ್ರಗಾಮಿ ವಿರೋಧಿ ದಳ ಒಂಭತ್ತು ಶಂಕಿತ ಉಗ್ರರನ್ನು ಹತ್ಯೆ ಮಾಡಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ. 
ಪ್ರಾಂತ್ಯದ ಶಿಖುಪುರದಲ್ಲಿ 'ಆಲ್ ಖೈದಾ' ಉಗ್ರಗಾಮಿಗಳು ಅಡಗಿದ್ದಾರೆ ಮತ್ತು ಅವರು ಲಾಹೋರ್ ಸುತ್ತಮುತ್ತ ಪೋಲೀಸರ ಮೇಲೆ ದಾಳಿ ನಡೆಸಲಿದ್ದಾರೆ ಎಂಬ ನಿಖರ ಮಾಹಿತಿ  ಉಗ್ರಗಾಮಿ ವಿರೋಧಿ ದಳಕ್ಕೆ (ಸಿ ಟಿ ಡಿ) ಸಿಕ್ಕಿದ ಹಿನ್ನಲೆಯಲ್ಲಿ ಈ ಪ್ರತಿ ದಾಳಿ ನಡೆಸಿದ್ದೇವೆ ಎಂದು ಹೇಳಿಕೆ ತಿಳಿಸಿದೆ. 
ಶಂಕಿತರನ್ನು ಬಂಧಿಸಲು ಖೇರೋಕಿ ಮಲಿಯಾನ್ ನ ಅವರ ಅಡಗುತಾಣದ ಮೇಲೆ ಬುಧವಾರ ಮುಂಜಾನೆಯಲ್ಲಿ ಸಿಟಿಡಿ ದಾಳಿ ನಡೆಸಿತು "ಇದಕ್ಕೆ ಪ್ರತಿಯಾಗಿ ಉಗ್ರರು ಸಿಟಿಡಿ ಅಧಿಕಾರಿಗಳ ಮೇಲೆ ಗುಂಡು ಹಾರಿಸಿದರು. ಇದಕ್ಕೆ ಸಿಟಿಡಿ ಪ್ರತಿಕ್ರಿಯೆ ನೀಡಿದ್ದರಿಂದ 9 ಉಗ್ರರು ಹತ್ಯೆಯಾಗಿದ್ದು, ಕತ್ತಲಿನಲ್ಲಿ ನಾಲ್ಕೈದು ಉಗ್ರರು ತಪ್ಪಸಿಕೊಂಡರು" ಎಂದು ಸಿಟಿಡಿ ಹೇಳಿಕೆಯಲ್ಲಿ ತಿಳಿಸಿದೆ. 
ಆರು ಕೆಜಿ ಸ್ಫೋಟಕ ವಸ್ತು, ನಾಲ್ಕು ಬಂಧೂಕುಗಳು, ಐದು ಪಿಸ್ತೂಲುಗಳು, ಐದು ದ್ವಿಚಕ್ರ ವಾಹನಗಳು ಮತ್ತು ಬುಲೆಟ್ ಗಳನ್ನು ಸ್ಥಳದಿಂದ ಸಿಟಿಡಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.