ಚೀನಾ ನಿರ್ಮಿತ ಕರಾಚಿ ಪರಮಾಣು ಘಟಕ ಕಾಮಗಾರಿ ಶೀಘ್ರದಲ್ಲೇ ಕಾರ್ಯಾರಂಭ
ಚೀನಾದ ನೆರವನೊಂದಿಗೆ ಪಾಕಿಸ್ತಾನದಲ್ಲಿ ನಿರ್ಮಾಣವಾಗುತ್ತಿರುವ ಪರಮಾಣು ಸ್ಥಾವರದ ಕಾಮಗಾರಿ ಶೀಘ್ರದಲ್ಲಿಯೇ ಕರಾಚಿಯಲ್ಲಿ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ.

ನವದೆಹಲಿ: ಚೀನಾದ ನೆರವನೊಂದಿಗೆ ಪಾಕಿಸ್ತಾನದಲ್ಲಿ ನಿರ್ಮಾಣವಾಗುತ್ತಿರುವ ಪರಮಾಣು ಸ್ಥಾವರದ ಕಾಮಗಾರಿ ಶೀಘ್ರದಲ್ಲಿಯೇ ಕರಾಚಿಯಲ್ಲಿ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ ಪಾಕಿಸ್ತಾನದಲ್ಲಿ ಚೀನಾ ದೇಶ ನಿರ್ಮಾಣ ಮಾಡುತ್ತಿರುವ ಪರಮಾಣು ಘಟಕಗಳ ಪೈಕಿ ಕರಾಚಿಯಲ್ಲಿರುವ 3ನೇ ಘಟಕ ಇನ್ನೊಂದು ವಾರದಲ್ಲಿ ತನ್ನ ಕಾಮಗಾರಿ ಆರಂಭಿಸಲಿದೆ ಎಂದು ತಿಳಿದುಬಂದಿದೆ. ಪಾಕಿಸ್ತಾನದ ಸುದ್ಧಿ ಸಂಸ್ಥೆ ಡಾನ್ ವರದಿ ಮಾಡಿರುವಂತೆ 3ನೇ ತಲೆಮಾರಿನ ನ್ಯೂಕ್ಲಿಯರ್ ರಿಯಾಕ್ಟರ್ ವಿನ್ಯಾಸ ಮಾದರಿ ಪರಮಾಣು ಘಟಕ ಕೆ3 ಶೀಘ್ರದಲ್ಲಿ ತನ್ನ ಕಾಮಗಾರಿ ಆರಂಭಿಸಲಿದೆ ಎಂದು ವರದಿ ಮಾಡಿದೆ.
ಚೀನಾದ ರಾಷ್ಟ್ರೀಯ ಪರಮಾಣು ಕಾರ್ಪೊರೇಷನ್ (ಸಿಎನ್ಎನ್ ಸಿ) ವಕ್ತಾರ ಪ್ಯಾನ್ ಜಿಯಾನ್ ಮಿಂಗ್ ಅವರು ಹೇಳಿರುವಂತೆ ಹಾಲಾಂಗ್ ಒನ್ ತಂತ್ರಜ್ಞಾನದಡಿಯಲ್ಲಿ ಪಾಕಿಸ್ತಾನದಲ್ಲಿ ಪರಮಾಣು ಘಟಕಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಈ ಪೈಕಿ ಕೆ2 ಘಟಕ 3ನೇ ತಲೆಮಾರಿನ ನ್ಯೂಕ್ಲಿಯರ್ ಘಟಕ ವಿನ್ಯಾಸ ಹೊಂದಿರಲಿದೆ ಎಂದು ಹೇಳಿದ್ದಾರೆ. ಈಗಾಗಲೇ ಈ ಘಟಕದ ಕಾಮಗಾರಿ ಆರಂಭವಾಗಿದ್ದು, ಕಳೆದ ಆಗಸ್ಟ್ ನಿಂದ ಈ ಘಚಕದ ಕಾಮಗಾರಿ ಆರಂಭವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


