ಸಲಿಂಗಕಾಮಿ ಸಂಗಾತಿ ಜೊತೆ ಸೇರಿ ಹೆತ್ತ ಮಗುವಿನ ಹೃದಯ ಛಿದ್ರ ಮಾಡಿದ ಕ್ರೂರಿ ತಾಯಿ!
ಸಲಿಂಗಕಾಮಿ ಸಂಗಾತಿ ಜತೆ ಸೇರಿ ತಾಯಿಯೋರ್ವಳು ತನ್ನ ಎರಡು ವರ್ಷದ ಮಗುವಿನ ಹೃದಯವನ್ನು ಛಿದ್ರ ಮಾಡಿ ಕೊಲೆ ಮಾಡಿದ್ದ ಹೃದಯ ವಿದ್ರಾವಕ ಘಟನೆ..

ನ್ಯೂಯಾರ್ಕ್ : ಸಲಿಂಗಕಾಮಿ ಸಂಗಾತಿ ಜತೆ ಸೇರಿ ತಾಯಿಯೋರ್ವಳು ತನ್ನ ಎರಡು ವರ್ಷದ ಮಗುವಿನ ಹೃದಯವನ್ನು ಛಿದ್ರ ಮಾಡಿ ಕೊಲೆ ಮಾಡಿದ್ದ ಹೃದಯ ವಿದ್ರಾವಕ ಘಟನೆ ನ್ಯೂಯಾರ್ಕ್ ನಲ್ಲಿ ನಡೆದಿದೆ.
ನ್ಯೂಯಾರ್ಕ್‌ನ ಲಿವಿಂಗ್‌ಸ್ಟನ್‌ನಲ್ಲಿ ಎರಡು ವರ್ಷದ ಬಾಲಕ ಲಿಯಾನ್ ಫೀ ದೇಹ ತನ್ನ ಮನೆ ಹೊರಭಾಗದಲ್ಲಿ ಮೃತ ಸ್ಥಿತಿಯಲ್ಲಿ ಕಂಡು ಬಂದಿತ್ತು. ಮಗುವನ್ನು ಕೊಂದ ಆರೋಪದ ಮೇಲೆ ಆತನ ತಾಯಿ ರಾಚೆಲ್ ಫೀ (31) ಮತ್ತು ಆಕೆಯ ಸಲಿಂಗಕಾಮಿ ಸಂಗಾತಿ ನ್ಯೋಮಿ ಫೀ (29)ಯನ್ನು ಬಂಧಿಸಲಾಗಿತ್ತು.
ಆದರೆ ಅವರಿಬ್ಬರು ತಮ್ಮ ಮೇಲಿನ ಆರೋಪವನ್ನು ತಳ್ಳಿ ಹಾಕಿದ್ದರು. ಎರಡು ವರ್ಷಗಳ ಕಾಲ ದೀರ್ಘ ವಿಚಾರಣೆ ನಡೆಸಿದ ಕೋರ್ಟ್ ಮಗುವಿನ ಸಾವಿಗೆ ಆತನ ತಾಯಿ ಮತ್ತು ಆಕೆಯ ಸಂಗಾತಿಯೇ ಕಾರಣ ಎಂದು ತೀರ್ಪು ನೀಡಿದೆ. ಇದೀಗ ಅವರ ಅಪರಾಧ ಸಾಬೀತಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


