ವಿದೇಶ

ನೇಪಾಳ ಬಜೆಟ್ ಪ್ರಮುಖಾಂಶಗಳೇ ಸೋರಿಕೆ; ಪ್ರತಿಪಕ್ಷ ನೇಪಾಳ ಕಾಂಗ್ರೆಸ್ ಪ್ರತಿಭಟನೆ

ನೇಪಾಳದ 2016 -17 ನೇ ಸಾಲಿನ ಬಜೆಟ್ ನ ಪ್ರಮುಖಾಂಶಗಳು ಬಜೆಟ್ ಮಂಡನೆಯಾಗುವುದಕ್ಕೆ ಮುನ್ನವೇ ಸೋರಿಕೆಯಾಗಿದೆ ಎಂದು ಆರೋಪಿಸಿ ಪ್ರತಿಪಕ್ಷ ನೇಪಾಳ ಕಾಂಗ್ರೆಸ್ ಸಂಸತ್ ನಲ್ಲಿ ಪ್ರತಿಭಟನೆ ನಡೆಸಿದೆ.

ನೇಪಾಳ ಬಜೆಟ್ ಪ್ರಮುಖಾಂಶಗಳೇ ಸೋರಿಕೆ; ಪ್ರತಿಪಕ್ಷ ನೇಪಾಳ ಕಾಂಗ್ರೆಸ್ ಪ್ರತಿಭಟನೆ
ನೇಪಾಳ ಸಂಸತ್( ಸಂಗ್ರಹ)
Published On :

ಕಠ್ಮಂಡು: ನೇಪಾಳದ 2016 -17 ನೇ ಸಾಲಿನ ಬಜೆಟ್ ನ ಪ್ರಮುಖಾಂಶಗಳು ಬಜೆಟ್ ಮಂಡನೆಯಾಗುವುದಕ್ಕೆ ಮುನ್ನವೇ ಸೋರಿಕೆಯಾಗಿದೆ ಎಂದು ಆರೋಪಿಸಿ ಪ್ರತಿಪಕ್ಷ ನೇಪಾಳ ಕಾಂಗ್ರೆಸ್ ಸಂಸತ್ ನಲ್ಲಿ ಪ್ರತಿಭಟನೆ ನಡೆಸಿದೆ.
ಕಾಂಗ್ರೆಸ್ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ನೇಪಾಳ ಸ್ಪೀಕರ್ ಸಂಸತ್ ಅಧಿವೇಶನವನ್ನು ಮುಂದೂಡಿದ್ದಾರೆ. ಕಾಂಗ್ರೆಸ್ ಸದಸ್ಯರ ಪ್ರತಿಭಟನೆಗೆ ಮದೇಶಿ ಸಮುದಾಯವನ್ನು ಪ್ರತಿನಿಧಿಸುವ ಸದಸ್ಯರೂ ಸಹ ಬೆಂಬಲ ಸೂಚಿಸಿ ಪ್ರತಿಭಟನೆ ನಡೆಸಿದ್ದಾರೆ. ನೇಪಾಳ ಹಣಕಾಸು ಸಚಿವ ಬಿಷ್ಣು ಪೌದೆಲ್ ಮೇ.28 ರಂದು 2016 -17 ನೇ ಸಾಲಿನ ಬಜೆಟ್ ಮಂಡಿಸಿದ್ದು, ಬಜೆಟ್ ಗೂ ಮುನ್ನವೇ ಪ್ರಮುಖಾಂಶಗಳು ಸೋರಿಕೆಯಾಗಿದ್ದು ಬಜೆಟ್ ಗಾತ್ರ ಸೇರಿದಂತೆ ಹಲವು ಅಂಶಗಳು ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಈ ಹಿನ್ನೆಲೆಯಲ್ಲಿ ನೇಪಾಳ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ. 
ಬಜೆಟ್ ಸೋರಿಕೆಯಾಗಿರುವ ಪ್ರಕರಣದ ಬಗ್ಗೆ ತನಿಖೆ ನಡೆಯಬೇಕು ಹಾಗೂ ನೈತಿಕ ಹೊಣೆ ಹೊತ್ತು ಹಣಕಾಸು ಸಚಿವರು ರಾಜೀನಾಮೆ ನೀಡಬೇಕು ಎಂದು ನೇಪಾಳ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಹಣಕಾಸು ಸಚಿವ ರಾಮ್ ಶರಣ್ ಮಹಾತ್ ಆಗ್ರಹಿಸಿದ್ದು ತನಿಖೆಗೆ ಆದೇಶಿಸುವ ವರೆಗೆ  ಸಂಸತ್ ಕಾರ್ಯನಿರ್ವಹಿಸಲು ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.