ಅಳು ನಿಲ್ಲಿಸಲಿಲ್ಲ ಎಂದು ಹೆತ್ತ ಮಗುವನ್ನೇ ಕೊಂದ "ಮಹಾತಾಯಿ"
ಸತತವಾಗಿ ಅಳುತ್ತಿದ್ದ ಮಗುವಿನಿಂದ ಕೋಪಗೊಂಡ ತಾಯಿಯೊಬ್ಬಳು ತಾನು ಹೆತ್ತ ಮಗುವನ್ನೇ ಕೊಂದು ಹಾಕಿದೆ ಘಟನೆ ಉತ್ತರ ಕೆರೊಲಿನಾದಲ್ಲಿ ನಡೆದಿದೆ...

ರೇಲಿ: ಸತತವಾಗಿ ಅಳುತ್ತಿದ್ದ ಮಗುವಿನಿಂದ ಕೋಪಗೊಂಡ ತಾಯಿಯೊಬ್ಬಳು ತಾನು ಹೆತ್ತ ಮಗುವನ್ನೇ ಕೊಂದು ಹಾಕಿದೆ ಘಟನೆ ಉತ್ತರ ಕೆರೊಲಿನಾದಲ್ಲಿ ನಡೆದಿದೆ.
ಉತ್ತರ ಕೆರೋಲಿನಾದ ವಿಟನ್ ಬರ್ಗ್ ನ ನಿವಾಸಿ ಐಶಿಯಾ ಮೇರಿ ಪಚಿಕೋ ಎಂಬ 22 ವರ್ಷದ ತಾಯಿಯೇ ತನ್ನ ನವಜಾತ ಶಿಶುವನ್ನು ಕೊಂದು ಹಾಕಿದ್ದಾಳೆ. ಮೂಲಗಳ ಪ್ರಕಾರ ಮೇ 20ರಂದು ಜನಿಸಿದ್ದ ಗಂಡು ಮಗು ಟೇಲರ್ ಸತತವಾಗಿ ಅಳುತ್ತಿದ್ದ. ತಾಯಿ ಮೇರೆ ಎಷ್ಟೇ ಸಮಾಧಾನ ಪಡಿಸಿದರೂ ಆತ ಅಳು ನಿಲ್ಲಿಸಲಿಲ್ಲ. ಇದರಿಂದ ತೀವ್ರ ಕೋಪಗೊಂಡ ಆಕೆ ಮಗುವಿನ ಎದೆಯನ್ನು ಬಲವಾಗಿ ಒತ್ತಿ ಹಿಡಿದಿದ್ದಾಳೆ. ಇದರಿಂದ ಉಸಿರಾಟ ಸಾಧ್ಯವಾಗದೇ ಮಗು ಸ್ಥಳದಲ್ಲಿಯೇ ಸಾವನ್ನಪ್ಪಿದೆ.
ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಉತ್ತರ ಕೆರೋಲಿನಾ ಪೊಲೀಸರು ಕೊಲೆಗಾತಿ ತಾಯಿ ಮೇರಿಯನ್ನು ವಶಕ್ಕೆ ಪಡೆದಿದ್ದು, ಮಗುವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲಿ ಮಗು ಹೃದಯದ ಉಸಿರಾಟ ಸ್ಥಗಿತದಿಂದ ಸಾವನ್ನಪ್ಪಿದೆ ಎಂದು ವೈದ್ಯರು ತಮ್ಮ ವರದಿಯಲ್ಲಿ ತಿಳಿಸಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿರುವ ಮಗುವಿನ ತಾಯಿ ಮೇರಿ, ನಿಜಕ್ಕೂ ನಾನು ಮಗುವನ್ನು ಕೊಲ್ಲುವ ಪ್ರಯತ್ನ ಮಾಡಲಿಲ್ಲ. ಆತ ಸತತವಾಗಿ ಅಳುತ್ತಿದ್ದರಿಂದ ಅಳು ನಿಲ್ಲಿಸಲಿ ಎಂದು ಸಮಾಧಾನ ಪಡಿಸುವ ಸಲುವಾಗಿ ಆತನ ಎದೆಯನ್ನು ಒತ್ತಿದೆ. ಆದರೆ ದುರಾದೃಷ್ಟವಶಾತ್ ಆತ ಸಾವನ್ನಪ್ಪಿದ್ದಾನೆ. ಆತ ನಿಜಕ್ಕೂ ನಮ್ಮ ಪಾಲಿಗೆ ದೇವರು ಕರುಣಿಸಿದ್ದ ವರವಾಗಿದ್ದ. ಆತ ತುಂಬಾ ಚುರುಕಾಗಿದ್ದ ಎಂದು ಕಣ್ಣೀರಿಡುತ್ತಲೇ ಹೇಳಿಕೆ ನೀಡಿದ್ದಾಳೆ.
ಪ್ರಸ್ತುತ ಆಕೆಯನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ನಡೆಸುತ್ತಿದ್ದು, ನಾಳೆ ಆಕೆಯನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸುವ ಸಾಧ್ಯತೆ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


