ಅಮೆರಿಕನ್ನರು ಸುದ್ದಿಗೆ ಫೇಸ್ ಬುಕ್ ಮೊರೆ ಹೋಗುವುದು ಹೆಚ್ಚು: ಸಮೀಕ್ಷೆ
ಸುಮಾರು ಶೇಕಡಾ 62ರಷ್ಟು ಮಂದಿ ಅಮೆರಿಕನ್ನರು ಸಾಮಾಜಿಕ ತಾಣಗಳಾದ ರೆಡ್ಡಿಟ್, ಫೇಸ್ ಬುಕ್ ಮತ್ತು ಟ್ವಿಟ್ಟರ್ ಮೂಲಕ ಸುದ್ದಿಗಳನ್ನು ...

ನ್ಯೂಯಾರ್ಕ್: ಸುಮಾರು ಶೇಕಡಾ 62ರಷ್ಟು ಮಂದಿ ಅಮೆರಿಕನ್ನರು ಸಾಮಾಜಿಕ ತಾಣಗಳಾದ ರೆಡ್ಡಿಟ್, ಫೇಸ್ ಬುಕ್ ಮತ್ತು ಟ್ವಿಟ್ಟರ್ ಮೂಲಕ ಸುದ್ದಿಗಳನ್ನು ತಿಳಿದುಕೊಳ್ಳುತ್ತಾರೆ. ಇದರಲ್ಲಿ ಫೇಸ್ ಬುಕ್ ಮುಂಚೂಣಿಯಲ್ಲಿದೆ ಎಂದು ಹೊಸ ಸಮೀಕ್ಷೆಯೊಂದು ತಿಳಿಸಿದೆ.
ಫೇಸ್ ಬುಕ್ ಬಹುದೊಡ್ಡ ಸಾಮಾಜಿಕ ಜಾಲತಾಣವಾಗಿದ್ದು, ಅಮೆರಿಕದಲ್ಲಿ ಶೇಕಡಾ 67ರಷ್ಟು ವಯಸ್ಕರನ್ನು ತಲುಪಿದೆ. ಫೇಸ್ ಬುಕ್ ಬಳಕೆದಾರರ ಮೂರನೇ ಎರಡು ಭಾಗದಷ್ಟು ಜನರು ಅದರ ಮೂಲಕವೇ ಸುದ್ದಿಗಳನ್ನು ಪಡೆದುಕೊಳ್ಳುತ್ತಿದ್ದು, ಒಟ್ಟಾರೆ ಜನಸಂಖ್ಯೆಯ ಶೇಕಡಾ 44ರಷ್ಟು ಜನತೆಗೆ ತಲುಪುತ್ತಿದೆ ಎಂದು ಪ್ಯೂ ಸಂಶೋಧನಾ ಸಂಸ್ಥೆ, ಜಾನ್ ಎಸ್ ಮತ್ತು ಜೇಮ್ಸ್ ಎಲ್. ನೈಟ್ ಫೌಂಡೇಶನ್ ಜೊತೆ ಸೇರಿ ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ.
ನಂತರದ ಸ್ಥಾನದಲ್ಲಿ ಯೂ ಟ್ಯೂಬ್ ಇದೆ.
ಯೂಟ್ಯೂಬ್, ಫೇಸ್ ಬುಕ್, ಇನ್ಸ್ಟಾಗ್ರಾಮ್ ಬಳಕೆದಾರರು ಆನ್ ಲೈನ್ ನಲ್ಲಿ ಬೇರೆ ಏನೋ ಕೆಲಸ ಮಾಡುತ್ತಿರುವಾಗ ಸುದ್ದಿ ಬರುತ್ತದೆ. ಇನ್ನೊಂದೆಡೆ ಟ್ವಿಟ್ಟರ್, ರೆಡ್ಡಿಟ್, ಲಿಂಕೆಡ್ ಇನ್ ನಲ್ಲಿ ಬಳಕೆದಾರರು ಸುದ್ದಿಯನ್ನೇ ಆನ್ ಲೈನ್ ಮೂಲಕ ಹುಡುಕುತ್ತಾರೆ ಎಂಬುದು ಸಮೀಕ್ಷೆಯಿಂದ ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


