ಜಿಹಾದಿ ನೇಮಕಾತಿಗೆ ಇಸಿಸ್ ನಿಂದ ಡೇಟಿಂಗ್ ವೆಬ್ ಸೈಟ್ ಬಳಕೆ!
ಸಿರಿಯಾ ಮತ್ತು ಇರಾಕ್ ನಲ್ಲಿ ತನ್ನ ಕದಂಬಬಾಹು ಚಾಚಿರುವ ವಿಶ್ವದ ಶ್ರೀಮಂತ ಉಗ್ರಗಾಮಿ ಸಂಘಟನೆ ಇಸಿಸ್, ಇದೀಗ ತನ್ನ ಜಿಹಾದಿ ನೇಮಕಾತಿಗಾಗಿ ಡೇಟಿಂಗ್ ವೆಬ್ ಸೈಟ್ ಗಳನ್ನು ಬಳಕೆ ಮಾಡುತ್ತಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ನ್ಯೂಯಾರ್ಕ್: ಸಿರಿಯಾ ಮತ್ತು ಇರಾಕ್ ನಲ್ಲಿ ತನ್ನ ಕದಂಬಬಾಹು ಚಾಚಿರುವ ವಿಶ್ವದ ಶ್ರೀಮಂತ ಉಗ್ರಗಾಮಿ ಸಂಘಟನೆ ಇಸಿಸ್, ಇದೀಗ ತನ್ನ ಜಿಹಾದಿ ನೇಮಕಾತಿಗಾಗಿ ಡೇಟಿಂಗ್ ವೆಬ್ ಸೈಟ್ ಗಳನ್ನು ಬಳಕೆ ಮಾಡುತ್ತಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ಮೂಲಗಳ ಪ್ರಕಾರ ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಸಂಘಟನೆಯ ನೇಮಕಾತಿ ವಿಭಾಗದ ಉಗ್ರರು ಸಂಘಟನೆಯತ್ತ ಯುವತಿಯರನ್ನು ಸೆಳೆಯಲು ಈ ವಾಮಮಾರ್ಗವನ್ನು ಅನುಸರಿಸುತ್ತಿದ್ದು, ಡೇಟಿಂಗ್ ಸೈಟನಲ್ಲಿ ತನ್ನ ಉಗ್ರರನ್ನು ಮದುವೆಯಾಗುವಂತೆ ಯುವತಿಯರಿಗೆ ಒತ್ತಾಯಿಸುತ್ತಿದೆಯಂತೆ. ಇತ್ತೀಚೆಗೆ ಡೇಟಿಂಗ್ ಸೈಟ್ ನಲ್ಲಿ ಯುವತಿಯೊಬ್ಬಳು ಸರ್ಚಿಂಗ್ ನಲ್ಲಿದ್ದಾಗ ಆಕೆಯೊಂದಿಗೆ ಇಸಿಸ್ ಉಗ್ರಗಾಮಿ ಸಂಘಟನೆಯ ನೇಮಕಾತಿ ವಿಭಾಗದ ಉಗ್ರನೊಬ್ಬ ಚಾಟಿಂಗ್ ಮಾಡಿದ್ದು, ಉಗ್ರ ಸಂಘಟನೆಯ ಕಪಿಮುಷ್ಠಿಯಲ್ಲಿರುವ ಸಿರಿಯಾದ ರಖ್ಖಾದಲ್ಲಿ ನೆಲೆಸಿರುವ ಉಗ್ರನನ್ನು ಮದುವೆಯಾಗುವಂತೆ ಆಹ್ವಾನ ನೀಡಿದ್ದಾನೆ. ಅಲ್ಲದೆ ಇದಕ್ಕೆ ಯುವತಿ ಕುಟುಂಬ ಪ್ರತಿಕ್ರಿಯೆ ನೀಡದಿದ್ದರಿಂದ ಆಕೆಯ ಕುಟುಂಬಸ್ಥರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಸಿರಿಯಾದ ರಕ್ಷಣಾ ಇಲಾಖೆ ತಿಳಿಸಿದೆ.
‘ನೀವು ದೊಡ್ಡ ಬಂಗಲೆಗಳಲ್ಲಿ ಉಳಿದುಕೊಳ್ಳಬಹುದು, ನಿಮ್ಮ ಸೇವೆ ಮಾಡಲು ನೂರಾರು ಮಂದಿ ಸೇವಕರಿರುತ್ತಾರೆ. ನೀವು ಮದುವೆಯಾಗಲಿರುವ ಹುಡುಗ ಅತ್ಯುತ್ತಮ ಯೋಧನಾಗಿದ್ದು, ಬೆಲೆಬಾಳುವ ಆಭರಣಗಳು ನಿಮ್ಮದಾಗಲಿವೆ’ ಎಂದು ಇಸಿಸ್ ನೇಮಕಾತಿ ಘಟಕ ಆಮಿಷ ಒಡ್ಡಿದೆ ಎಂದು ಹೇಳಲಾಗುತ್ತಿದೆ. ಅಂತೆಯೇ ಕೆಲ ಹೆಚ್ಚು ಬೆಲೆ ಬಾಳುವ ಆಭರಣಗಳ ಫೋಟೋವನ್ನು ಯುವತಿಗೆ ಕಳುಹಿಸಿ ನೀನು ಆತನನ್ನು ವರಿಸಿದರೆ ಇದೆಲ್ಲಾ ನಿನ್ನದಾಗುತ್ತದೆ ಎಂದು ಆಮಿಷ ಒಡ್ಡಲಾಗಿದೆ ಎಂದು ಯುವತಿ ಕುಟುಂಬಸ್ಥರು ತಳಿಸಿದ್ದಾರೆ.
ಒಟ್ಟಾರೆ ತನ್ನ ಉಗ್ರ ಸೇನೆಯ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಉಗ್ರಗಾಮಿ ಸಂಘಟನೆ ಡೇಟಿಂಗ್ ವೆಬ್ ಸೈಟ್ ಗಳ ಮೂಲಕ ಆಮಿಷ ಒಡ್ಡುವ ವಾಮಮಾರ್ಗವನ್ನು ಅನುಸರಿಸುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


