ಅಮೆರಿಕದ ಆತಂಕಕ್ಕೆ ಕಾರಣವಾದ ಚೀನಾದ ಕ್ಷಿಪಣಿ!
ಚೀನಾ ವಿಜ್ಞಾನಿಗಳು ಅಭಿವೃದ್ಧಿ ಪಡಿಸಿರುವ ನೂತನ ಕ್ಷಿಪಣಿಯೊಂದು ಇದೀಗ ವಿಶ್ವದ ಬಲಿಷ್ಠ ರಾಷ್ಟ್ರ ದೊಡ್ಡಣ್ಣ ಅಮೆರಿಕದ ನಿದ್ದೆ ಕದ್ದಿದೆ.

ವಾಷಿಂಗ್ಟನ್: ಚೀನಾ ವಿಜ್ಞಾನಿಗಳು ಅಭಿವೃದ್ಧಿ ಪಡಿಸಿರುವ ನೂತನ ಕ್ಷಿಪಣಿಯೊಂದು ಇದೀಗ ವಿಶ್ವದ ಬಲಿಷ್ಠ ರಾಷ್ಟ್ರ ದೊಡ್ಡಣ್ಣ ಅಮೆರಿಕದ ನಿದ್ದೆ ಕದ್ದಿದೆ.
ಚೀನಾ ನೂತನವಾಗಿ ಅಭೀವೃದ್ಧಿ ಪಡಿಸಿರುವ 5,500 ಕಿ.ಮೀ. ದೂರ ತಲುಪುವ ಸಾಮರ್ಥ್ಯವಿರುವ ಗ್ವಾಮ್ ಕಿಲ್ಲರ್ ಎಂಬ ಕ್ಷಿಪಣಿ ಯಿ೦ದ ಅಮೆರಿಕಕ್ಕೆ ಭದ್ರತಾ ಆತ೦ಕ ಎದುರಾಗಿದೆ ಎ೦ದು ಅಲ್ಲಿನ ಸಮಿತಿ ವರದಿ ಮಾಡಿದೆ. ಗ್ವಾಮ್ ಎ೦ಬುದು ಅಮೆರಿಕ ವ್ಯಾಪ್ತಿಗೆ ಒಳಪಟ್ಟಿರುವ ದ್ವೀಪವಾಗಿದ್ದು, ಅಮೆರಿಕದ ಪ್ರಮುಖ ಸೇನಾನೆಲೆಗಳಾದ ಆ್ಯ೦ಡಸ೯ನ್ ವಾಯುನೆಲೆ, ನೌಕಾನೆಲೆ ಇದೇ ದ್ವೀಪದಲ್ಲಿದೆ. ಚೀನಾ, ಉತ್ತರ ಕೊರಿಯಾ ದೇಶಗಳಿಂದ ಸಂಭವಿಸಬಹುದಾದ ಸ೦ಭಾವ್ಯ ದಾಳಿಯಿ೦ದ ರಕ್ಷಣಾ ನೆಲೆಗಳನ್ನು ದೂರವಿರಿಸುವ ಉದ್ದೇಶದಿ೦ದ ಅಮೆರಿಕ ದೂರದ ಗ್ವಾಮ್ ದ್ವೀಪದಲ್ಲಿ ತನ್ನ ಸೇನಾನೆಲೆ ಸ್ಥಾಪಿಸಿತ್ತು.
ಈ ಗ್ವಾಮ್ ದ್ವೀಪ ಚೀನಾದಿ೦ದ ಸುಮಾರು 4 ಸಾವಿರ ಕಿ.ಮೀ. ದೂರದಲ್ಲಿದ್ದು, ಇದೇ ಕಾರಣಕ್ಕೆ ಅಮೆರಿಕ ಗ್ವಾಮ್ ದ್ವೀಪದಲ್ಲಿ ತನ್ನ ಸೇನಾ ನೆಲೆ ಸ್ಥಾಪಿಸಿತ್ತು. ಇದೀಗ ಈ ಚೀನಾ ಅಭಿವೃದ್ಧಿ ಪಡಿಸಿರುವ ಡಿಎಫ್ -26 ಮಧ್ಯಂತರ ಶ್ರೇಣಿಯ ಖಂಡಾಂತರ ಕ್ಷಿಪಣಿ ಮಾದರಿಯ "ಗ್ವಾಮ್ ಕಿಲ್ಲರ್" ಎಂಬ ಕ್ಷಿಪಣಿ ಈ ಭದ್ರ ನೆಲೆಯನ್ನೂ ತಲುಪುವ ಸಾಮರ್ಥ್ಯ ಹೊಂದಿದ್ದು, ಇದೇ ವಿಚಾರ ಇದೀಗ ಅಮೆರಿಕದ ತಲೆನೋವಿಗೆ ಕಾರಣವಾಗಿದೆ.
ಆದರೆ ಇದರಿಂದ ಕೈ ಕಟ್ಟಿ ಕೂರದ ಅಮೆರಿಕ ಚೀನಾದ ಗ್ವಾಮ್ ಕಿಲ್ಲರ್ ಕ್ಷಿಪಣಿಯನ್ನು ಆಕಾಶ ಮಾರ್ಗದಲ್ಲಿಯೇ ಛಿದ್ರಗೊಳಿಸಬಲ್ಲ ಕ್ಷಿಪಣಿ ನಿರೋಧಕ ಮಿಸೈಲ್ ಗಳನ್ನು ಇದೀಗ ಗ್ವಾಮ್ ದ್ವೀಪಕ್ಕೆ ರವಾನೆ ಮಾಡಿದೆ ಎಂದು ಹೇಳಲಾಗುತ್ತಿದೆ. ಒಟ್ಟಾರೆ ರಕ್ಷಣಾ ವಿಚಾರದಲ್ಲಿ ಚೀನಾ ಮತ್ತು ಅಮೆರಿಕ ದೇಶಗಳ ಪೈಪೋಟಿಗಿಳಿದಿದ್ದು, ಚೀನಾಗೆ ಪ್ರತ್ಯುತ್ತರ ನೀಡಿಲು ಇದೀಗ ಅಮೆರಿಕ ಸಜ್ಜಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


