ಅಗಸ್ತಾವೆಸ್ಟ್‌ಲ್ಯಾಂಡ್ ಹಗರಣ: ಒಡಂಬಡಿಕೆಗೆ ನೆರವಾಗಿದ್ದ ಆ ಡ್ಯಾನಿಷ್ ಮಹಿಳೆ ಯಾರು?
ಕ್ರಿಸ್ಟೀನ್ ಬ್ರೆಡೋ ಸ್ಲ್ಪೀ ಡ್ ಎಂಬ 31ರ ಹರೆಯದ ಡ್ಯಾನಿಶ್ ಯುವತಿ, ಮಿಶೆಲ್‌ನೊಂದಿಗೆ ಹಲವಾರು ಬಾರಿ ಭಾರತಕ್ಕೆ ಬಂದಿದ್ದಾಳೆ. ಈಕೆಯೇ ಪ್ರಸ್ತುತ ...

Published On :
ನವದೆಹಲಿ: ರಾಷ್ಟ್ರ ರಾಜಕಾರಣದಲ್ಲಿ ಭಾರೀ ಸುದ್ದಿ ಮಾಡಿದ ಅಗಸ್ತಾವೆಸ್ಟ್‌ಲ್ಯಾಂಡ್ ಪ್ರಕರಣ ತನಿಖೆ ವಿದೇಶಕ್ಕೆ ವ್ಯಾಪಿಸಿದೆ. ಈ ಹಗರಣದಲ್ಲಿ ಮಧ್ಯವರ್ತಿಯಾಗಿ ಕಾರ್ಯ ನಿರ್ವಹಿಸಿದ್ದು ಕ್ರಿಸ್ಟಿಯಾನ್ ಮಿಶೆಲ್ ಮಹಿಳೆ ಎಂದು ಹೇಳಲಾಗುತ್ತಿದೆ.
ಅದೇ ವೇಳೆ ಕ್ರಿಸ್ಟೀನ್ ಬ್ರೆಡೋ ಸ್ಲ್ಪೀ ಡ್ ಎಂಬ 31ರ ಹರೆಯದ ಡ್ಯಾನಿಶ್ ಯುವತಿ, ಮಿಶೆಲ್‌ನೊಂದಿಗೆ ಹಲವಾರು ಬಾರಿ ಭಾರತಕ್ಕೆ ಬಂದಿದ್ದಾಳೆ. ಈಕೆಯೇ ಪ್ರಸ್ತುತ ಹಗರಣದಲ್ಲಿ ಪ್ರಧಾನ ಆರೋಪಿಗಳಾಗಿರುವ ವ್ಯಕ್ತಿಗಳಿಗೆ ಇಟಲಿಯ ಕಂಪನಿಗಳೊಂದಿಗೆ ಒಡಂಬಂಡಿಕೆ ಮಾಡಲು ಸಹಾಯ ಮಾಡಿದ್ದು ಎಂದು ದೇಶೀಯ ಮಾಧ್ಯಮಗಳು ವರದಿ ಮಾಡಿವೆ.
ಬ್ರಿಟನ್ ಮೂಲದ ಬೀಟೆಲ್ ನಟ್ ಹೋಂ ಲಿಮಿಟೆಡ್ ಎಂಬ ಕಂಪನಿಯಲ್ಲಿ ಕ್ರಿಸ್ಟೀನ್ ಮತ್ತು ಮಿಶೆಲ್ ಪಾಲುದಾರರಾಗಿದ್ದರು. ಮಿಶೆಲ್‌ನ ದುಬೈ ಮೂಲದ ಗ್ಲೋಬಲ್ ಸರ್ವೀಸೆಸ್ ಎಫ್‌ಜೆಡ್‌ಇ ಕಂಪನಿ ಕೂಡಾ ಪ್ರಸ್ತುತ ಕಂಪನಿಯಲ್ಲಿ ಪಾಲುದಾರಿಕೆ ಹೊಂದಿತ್ತು.
ಕ್ರಿಸ್ಟೀನ್ 2010 ಮತ್ತು 2012ರ ಮಧ್ಯೆ ಭಾರತಕ್ಕೆ ಬಂದಿದ್ದು, ಈ ವೇಳೆಯೇ ಅಗಸ್ತಾವೆಸ್ಟ್ ಲ್ಯಾಂಡ್ ಒಪ್ಪಂದ ನಡೆದಿತ್ತು.
20ರ ಹರೆಯದಲ್ಲಿ ಕ್ರಿಸ್ಟೀನ್ ಮಿಶೆಲ್ ಜತೆ ಭಾರತಕ್ಕೆ ಆಗಮಿಸಿ ಇಲ್ಲಿನ ರಾಜಕಾರಣಿಗಳನ್ನು ಮತ್ತು ಸರ್ಕಾರಿ ಅಧಿಕಾರಿಗಳನ್ನು ಭೇಟಿಯಾಗಿದ್ದಳು. ಅಗಸ್ಟಾ ಒಪ್ಪಂದಕ್ಕೆ ಸಂಬಂಧಿಸಿದ ಕಾರ್ಯಗಳಿಗಾಗಿ ಈಕೆ ದುಬೈ ಮತ್ತು ಜ್ಯೂರಿಚ್‌ಗೆ ಪ್ರಯಾಣ ಮಾಡಿದ್ದಳು. ಈ ಬಗ್ಗೆ ನಾವು ಆಕೆಯ ದಾಖಲೆ ಪತ್ರಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ಸಿಬಿಐ ಅಧಿಕಾರಿಗಳು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


