5ನೇ ಪರಮಾಣು ಪರೀಕ್ಷೆಗೆ ಮುಂದಾದ ಉತ್ತರ ಕೊರಿಯಾ
ಸತತ 4 ಬಾರಿ ಅಣ್ವಸ್ತ್ರ ಪರೀಕ್ಷೆ ಮಾಡಿ ವಿಶ್ವ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದ್ದ ಉತ್ತರ ಕೋರಿಯಾ ಇದೀಗ ಐದನೇ ಬಾರಿಗೆ ಪರಮಾಣ ಪರೀಕ್ಷೆಗೆ ಮುಂದಾಗಿದೆ ಎಂದು ಅಮೆರಿಕ ಚಿಂತಕರ ಛಾವಡಿಯ ತಜ್ಞರು ತಿಳಿಸಿದ್ದಾರೆ..

ಪ್ಯೊಂಗ್ಯಾಂಗ್: ಸತತ 4 ಬಾರಿ ಅಣ್ವಸ್ತ್ರ ಪರೀಕ್ಷೆ ಮಾಡಿ ವಿಶ್ವ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದ್ದ ಉತ್ತರ ಕೋರಿಯಾ ಇದೀಗ ಐದನೇ ಬಾರಿಗೆ ಪರಮಾಣ ಪರೀಕ್ಷೆಗೆ ಮುಂದಾಗಿದೆ ಎಂದು ಅಮೆರಿಕ ಚಿಂತಕರ ಛಾವಡಿಯ ತಜ್ಞರು ತಿಳಿಸಿದ್ದಾರೆ.
ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ನ ಪರಮಾಣು ದಾಹ ಮಿತಿ ಮೀರಿದ್ದು, ಪರಿಮಿತಿ ದಾಟಿರುವ ಉತ್ತರ ಕೊರಿಯಾ ಮತ್ತೆ ಅಣುಬಾಂಬ್ ಪರೀಕ್ಷೆಗೆ ಮುಂದಾಗಿದೆ. ಇದು ಉತ್ತರ ಕೊರಿಯಾ ನಡೆಸುತ್ತಿರುವ 5ನೇ ಪರಮಾಣು ಪರೀಕ್ಷೆಯಾಗಿದ್ದು, ಸರ್ವಾಧಿಕಾರಿಯ ಈ ಕೃತ್ಯ ಅಮೆರಿಕ, ದಕ್ಷಿಣ ಕೊರಿಯಾ ಮುಂತಾದ ರಾಷ್ಟ್ರಗಳ ನಿದ್ದೆಗೆಡಿಸಿದೆ. ಉತ್ತರ ಕೊರಿಯಾ ರಾಜಧಾನಿ ಪ್ಯೊಂಗ್ಯಾಂಗ್ ನಲ್ಲಿ ತನ್ನ ಪಟ್ಟಾಭಿಷೇಕ ಕಾರ್ಯಕ್ರಮದಲ್ಲಿ ಮುಳಿಗಿರುವ ಕಿಮ್ ಜಾಂಗ್ ಉನ್, ತಾನೊಬ್ಬಸರ್ವಾಧಿಕಾರಿ ಎಂದು ಘೋಷಣೆ ಮಾಡಿಕೊಳ್ಳಲ್ಲಿದ್ದಾನೆ. ಈ ವೇಳೆ ಇಡೀ ವಿಶ್ವಕ್ಕೆ ಉತ್ತರ ಕೊರಿಯಾ ಅಣ್ವಸ್ತ್ರ ರಾಷ್ಟ್ರವೆಂದು ಬಿಂಬಿಸವ ವಿಶ್ವಸಂಸ್ಥೆ ಸೇರಿದಂತೆ ವಿಶ್ವ ಸಮುದಾಯದ ವಿರೋಧದ ಹೊರತಾಗಿಯೂ 5ನೇ ಬಾರಿಗೆ ಅಣ್ವಸ್ತ್ರ ಪರೀಕ್ಷೆಗೆ ಮುಂದಾಗಿದ್ದಾನೆ ಎಂದು ಹೇಳಲಾಗುತ್ತಿದೆ.

ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಅಮೆರಿಕ-ಕೊರಿಯಾ ಸಂಸ್ಥೆಯು ಇದನ್ನು ಖಚಿತಪಡಿಸಿದ್ದು, ಸ್ಯಾಟಲೈಟ್ ಚಿತ್ರಗಳ ಮೂಲಕ ಪರಮಾಣು ಪರಿಕ್ಷಾ ಘಟಕದಲ್ಲಿ ವಾಹನಗಳ ಸಂಚಾರವನ್ನು ಗಮನಿಸಲಾಗಿ ಈ ನಿರ್ಧಾರಕ್ಕೆ ಬರಲಾಗಿದೆ. ಭವಿಷ್ಯದಲ್ಲಿ ಮತ್ತೊಂದು ಪರಮಾಣು ಪರೀಕ್ಷೆ ನಡೆಸುವ ಉದ್ದೇಶದಿಂದಲೇ ಉತ್ತರ ಕೊರಿಯಾದ ಪರಮಾಣ ಪರೀಕ್ಷಾ ಕೇಂದ್ರದಲ್ಲಿ ಚಟುವಟಿಕೆಗಳು ಗರಿಗೆದರಿವೆ ಎಂದು ಹೇಳಲಾಗುತ್ತಿದೆ.
ಪ್ಯೊಂಗ್ಯಾಂಗ್ನಲ್ಲಿ 5ನೇ ಪರಮಾಣು ಪರೀಕ್ಷೆಗೆ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸಹಿ ಮಾಡಿದ್ದು, ಜನವರಿ 6ಕ್ಕೆ ಭರ್ಜರಿಯಾದ ಮತ್ತು ಥ್ರಿಲ್ಲಿಂಗ್ ಪರಮಾಣು ಪರೀಕ್ಷೆ ನಡೆಯಲಿದೆ. ಈ ಮೂಲಕ ಪ್ಯೊಂಗ್ಯಾಂಗ್ ಶಕ್ತಿಶಾಲಿ ಹೈಡ್ರೊಜನ್ ಬಾಂಬ್ ಹೊಂದಲಿದೆ ಎಂದು ಈ ಹಿಂದೆ ಕಿಮ್ ಜಾಂಗ್ ಉನ್ ಚುನಾವಣಾ ಪ್ರಚಾರದ ವೇಳೆ ಘೊಷಿಸಿದ್ದ. ಅದರಂತೆ ಈಗ ಉತ್ತರ ಕೊರಿಯಾದಲ್ಲಿ ಪರಮಾಣ ಪರೀಕ್ಷೆಯ ಚಟುವಟಿಕಿಗಳು ಗರಿಗೆದರಿದ್ದು, ಯಾವುದೇ ಕ್ಷಣದಲ್ಲಿ ಉತ್ತರ ಕೊರಿಯಾ ಪರಮಾಣ ಪರೀಕ್ಷೆ ನಡೆಸಬಹುದು ಎಂದು ಶಂಕಿಸಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


