ವಿದೇಶ

ಈಜಿಪ್ಟ್‌ಏರ್ ಹೈಜಾಕ್ ಮಾಡಿದವನೊಂದಿಗೆ ಸೆಲ್ಫಿ ಕ್ಲಿಕ್ಕಿಸಿದ ಅಪಹೃತ

ಮಂಗಳವಾರ ಸೈಪ್ರಸ್ ನಲ್ಲಿ ಈಜಿಪ್ಟ್‌ಏರ್ ವಿಮಾನವನ್ನು ಅಪಹರಣ ಮಾಡಿದ ವ್ಯಕ್ತಿಯೊಂದಿಗೆ ಅಪಹೃತನೊಬ್ಬ ಕ್ಲಿಕ್ಕಿಸಿದ ಸೆಲ್ಫಿ ಸಾಮಾಜಿಕ ತಾಣದಲ್ಲಿ ವೈರಲ್...

ಈಜಿಪ್ಟ್‌ಏರ್ ಹೈಜಾಕ್ ಮಾಡಿದವನೊಂದಿಗೆ ಸೆಲ್ಫಿ ಕ್ಲಿಕ್ಕಿಸಿದ ಅಪಹೃತ
ಮುಸ್ತಾಫಾ ಜತೆ ಬೆಂಜಮಿನ್ ಇನ್ಸ್ (ಕೃಪೆ: ಟ್ವಿಟರ್)
Published On :
ಲಂಡನ್: ಮಂಗಳವಾರ ಸೈಪ್ರಸ್ ನಲ್ಲಿ ಈಜಿಪ್ಟ್‌ಏರ್ ವಿಮಾನವನ್ನು ಅಪಹರಣ ಮಾಡಿದ ವ್ಯಕ್ತಿಯೊಂದಿಗೆ ಅಪಹೃತನೊಬ್ಬ ಕ್ಲಿಕ್ಕಿಸಿದ ಸೆಲ್ಫಿ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.
ಸೈಫ್ ಈದಿನ್ ಮುಸ್ತಾಫಾ ಎಂಬಾತ ಮಂಗಳವಾರ 56 ಪ್ರಯಾಣಿಕರಿರುವ ಈಜಿಪ್ಟ್‌ಏರ್ ಎಂಎಸ್ 181 ವಿಮಾನವನ್ನು ಅಪಹರಣ ಮಾಡಿದ್ದನು.
ಈ ವೇಳೆ ಆ ವಿಮಾನದಲ್ಲಿದ್ದ ಅಪಹೃತ ಬ್ರಿಟಿಷ್ ಪ್ರಜೆ ಬೆಂಜಮಿನ್ ಇನ್ಸ್ ಎಂಬಾತ ಮುಸ್ತಾಫಾ ಜತೆ ಸೆಲ್ಫಿ ಕ್ಲಿಕ್ಕಿಸಿದ್ದಾನೆ.
ತಮ್ಮ ಮಾಜಿ ಪತ್ನಿಯನ್ನು ಭೇಟಿಯಾಗುವುದಕ್ಕಾಗಿ ಮುಸ್ತಾಫಾ ವಿಮಾನವನ್ನೇ ಅಪಹರಣ ಮಾಡಿದ್ದು, ಕೆಲವು ಗಂಟೆಗಳ ಕಾಲ  ಪ್ರಯಾಣಿಕರನ್ನು ಒತ್ತೆಯಾಳುಗಳನ್ನಾಗಿ ಮಾಡಿ ಡ್ರಾಮಾ ಸೃಷ್ಟಿಸಿದ್ದನು. ಈ ವೇಳೆ ಆತನೊಂದಿಗೆ ಸೆಲ್ಫಿ ಕ್ಲಿಕ್ಕಿಸಿದ ಬೆಂಜಮಿನ್, ಆ ಫೋಟೋವನ್ನು ತನ್ನ ಸ್ನೇಹಿತರಿಗೆ ಕಳಹಿಸಿಕೊಟ್ಟಿದ್ದಾರೆ. 
ಈ ಫೋಟೋ ಈಗ ಟ್ವಿಟರ್‌ನಲ್ಲಿ ಹರಿದಾಡಿದ್ದು ನೆಟಿಜನ್‌ಗಳು ಇದನ್ನು ಡೇರಿಂಗ್ ಸೆಲ್ಫಿ ಎಂದು ಕರೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.