60 ಉಗ್ರರನ್ನು ಹೊಡೆದುರುಳಿಸಿದ ಈಜಿಪ್ಟ್ ಸೇನೆ
ಈಜಿಪ್ಟ್ ನ ಸೇನಾ ಪಡೆ ಉತ್ತರ ಸಿನಾಯ್ ನ ಎರಡು ನಗರಗಳಲ್ಲಿ 60 ಉಗ್ರರನ್ನು ಹತ್ಯೆ ಮಾಡಿದೆ.

ಕೈರೋ: ಈಜಿಪ್ಟ್ ನ ಸೇನಾ ಪಡೆ ಉತ್ತರ ಸಿನಾಯ್ ನ ಎರಡು ನಗರಗಳಲ್ಲಿ 60 ಉಗ್ರರನ್ನು ಹತ್ಯೆ ಮಾಡಿದೆ.
ಉತ್ತರ ಸಿನಾಯ್ ಪ್ರದೇಶದಲ್ಲಿ ಉಗ್ರರ ಉಪಟಳ ಹೆಚ್ಚುತ್ತಿರುವ ಕಾರಣ ಕಾರ್ಯಾಚರಣೆ ನಡೆಸಿದ ಭಯೋತ್ಪಾದನಾ ನಿಗ್ರಹ ದಳ, ಉಗ್ರರ ಅಡಗುತಾಣಗಳ ಮೇಲೆ ದಾಳಿ ನಡೆಸಿ 60 ಉಗ್ರರನ್ನು ಹತ್ಯೆ ಮಾಡಿದೆ. ಘಟನೆಯಲ್ಲಿ 40 ಜನರಿಗೆ ಗಾಯಗಳುಂತಾಗಿದೆ ಎಂದು ಈಜಿಪ್ಟ್ ನ ಸೇನಾ ವಕ್ತಾರರು ತಿಳಿಸಿದ್ದಾರೆ.
ಕಳೆದ ವಾರ ಉಗ್ರರು ನಡೆಸಿದ್ದ ಮಾರ್ಟರ್ ದಾಳಿಗೆ 15 ಪೊಲೀಸರು ಬಲಿಯಾಗಿದ್ದರು. ಇದಾದ ಒಂದೇ ವಾರದಲ್ಲಿ ಸೇನಾ ಪಡೆ 60 ಉಗ್ರರನ್ನು ಹತ್ಯೆ ಮಾಡಿದೆ. ಕಳೆದ ವಾರ ನಡೆದಿದ್ದ ಉಗ್ರ ದಾಳಿಗೆ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಸಹ ಸಂಘಟನೆ ಅನ್ಸರ್ ಬಯ್ತ್- ಅಲ್- ಮಕ್ದೀಸ್(ಎಬಿಎಂ) ಉಗ್ರ ಸಂಘಟನೆ ಹೊಣೆ ಹೊತ್ತಿತ್ತು.
ಸಿನಾಯ್ ದ್ವೀಪದಲ್ಲಿ ಈಜಿಪ್ಟ್ ಸರ್ಕಾರದ ವಿರುದ್ಧವಾಗಿ ಉಗ್ರರು ದಾಳಿಗಳನ್ನು ನಡೆಸುತ್ತಿದ್ದು 2013 ರಿಂದ ಈ ವರೆಗೆ ನೂರಾರು ಪೊಲೀಸರು, ಸೇನಾ ಪಡೆ ಸಿಬ್ಬಂದಿಗಳು ಸಾವನ್ನಪ್ಪಿದ್ದಾರೆ. ಬಹುತೇಕ ದಾಳಿಗಳ ಹೊಣೆಯನ್ನು ಎಬಿಎಂ ಉಗ್ರ ಸಂಘಟನೆ ಹೊತ್ತುಕೊಂಡಿದೆ. ಈ ಹಿನ್ನೆಲೆಯಲ್ಲಿ ಉಗ್ರ ಸಂಘಟನೆ ವಿರುದ್ಧ ಈಜಿಪ್ಟ್ ಸೇನಾ ಪಡೆ ಕಾರ್ಯಾಚರಣೆ ನಡೆಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


