ಖ್ಯಾತ ನಾಟಕಕಾರ ಷೇಕ್ಸ್‌ಪಿಯರ್ ತಲೆ ಬುರುಡೆ ಕಳವು?
ಖ್ಯಾತ ಇಂಗ್ಲಿಷ್ ನಾಟಕಕಾರ ವಿಲಿಯಂ ಷೇಕ್ಸ್‌ಪಿಯರ್ ತಲೆ ಬುರುಡೆ ಸಮಾಧಿಯಿಂದ ಕಳವಾಗಿದೆ.

ಲಂಡನ್: ಖ್ಯಾತ ಇಂಗ್ಲಿಷ್ ನಾಟಕಕಾರ ವಿಲಿಯಂ ಷೇಕ್ಸ್‌ಪಿಯರ್ ತಲೆ ಬುರುಡೆ ಸಮಾಧಿಯಿಂದ ಕಳವಾಗಿದೆ.
ಸ್ಟಾನ್ ಫೋರ್ಡ್ ಶೈರ್ ವಿವಿಯ ಪುರಾತತ್ವ ವಿಭಾಗದ ಕೆವಿನ್ ಕೋಲ್ಸ್ ನೇತೃತ್ವದ ತಂಡದಿಂದ ಈ ಕುತೂಹಲಕಾರಿ ಅಂಶ ಇದೀಗ ಬೆಳಕಿಗೆ ಬಂದಿದೆ.
ಸಮಾಧಿ ಇರುವ ಸ್ಥಳದಲ್ಲಿ ದುರಸ್ತಿಗಾಗಿ ರೇಡಾರ್ ಮೂಲಕ ತಂಡ ಅಗೆಯುತ್ತಿದ್ದಾಗ ತಲೆ ಭಾಗದಲ್ಲಿ ಅಡಚಣೆ ಕಂಡುಬಂದಿತು. ಅಗೆದು ನೋಡಿದಾಗ ಬುರುಡೆ ಕಂಡುಬರಲಿಲ್ಲ. ಅದು 18ನೇ ಶತಮಾನದಲ್ಲಿಯೇ ಕಳವಾಗಿರಬಹುದೆಂದು ಕೋಲ್ಸ್ ತರ್ಕಿಸಿದ್ದಾರೆ.
ಸಮಾಧಿಯಲ್ಲಿ ಅವರ ತಲೆಬುರುಡೆ ಇಲ್ಲ ಬಗ್ಗೆ ಕೆವಿನ್ ಖಚಿತಪಡಿಸಿದ್ದಾರೆ. ಆದರೆ ಈ ವಾದದಷ್ಟು ಹೋಲಿ ಟ್ರಿನಿಟಿ ಚರ್ಚ್ ನ ಪ್ಯಾಟ್ರಿಕ್ ಟೇಲರ್ ಒಪ್ಪಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


