40 ದಿನಗಳ ಬಳಿಕ ಭಾರತೀಯ ನಾವಿಕನನ್ನು ಬಿಡುಗಡೆ ಮಾಡಿದ ಕಡಲ್ಗಳ್ಳರು
ಸರಿಸುಮಾರು 40 ದಿನಗಳ ಬಳಿಕ ಒತ್ತೆಯಾಗಿರಿಸಿಕೊಂಡಿದ್ದ ಭಾರತೀಯ ನಾವಿಕನನ್ನು ಕಡಲ್ಗಳ್ಳರು ಬಿಡುಗಡೆ ಮಾಡಿದ್ದಾರೆ...

ನವದೆಹಲಿ: ಸರಿಸುಮಾರು 40 ದಿನಗಳ ಬಳಿಕ ಒತ್ತೆಯಾಗಿರಿಸಿಕೊಂಡಿದ್ದ ಭಾರತೀಯ ನಾವಿಕನನ್ನು ಕಡಲ್ಗಳ್ಳರು ಬಿಡುಗಡೆ ಮಾಡಿದ್ದಾರೆ.
ನಿರಂತರ ಪ್ರಯತ್ನದ ಫಲವಾಗಿ ಭಾರತೀಯ ನಾವಿಕನನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.
ಫೆಬ್ರವರಿ 11 ರಂದು ಐವರಿ ಕೋಸ್ಟ್ನಲ್ಲಿ ಕಡಲ್ಗಳ್ಳರು 11 ಭಾರತೀಯ ನಾವಿಕನನ್ನು ಅಪಹರಿಸಿದ್ದರು. ನಂತರ ಫೆಬ್ರವರಿ 19 ರಂದು ನೈಜೀರಿಯಾ ನೌಕಾಪಡೆ ನಡೆಸಿದ ರಕ್ಷಣಾ ಕಾರ್ಯಾಚರಣೆಯಲ್ಲಿ 10 ಭಾರತೀಯರನ್ನು ರಕ್ಷಿಸಲಾಗಿತ್ತು. ಆದರೆ ರೋಹನ್ ಅವರನ್ನು ಕಡಲ್ಗಳ್ಳರಿಂದ ಬಿಡುಗಡೆ ಮಾಡಿಸಲು ಸಾಧ್ಯವಾಗಿರಲಿಲ್ಲ.
ಭಾರತ ಸರ್ಕಾರ ಮತ್ತು ನೈಜೀರಿಯಾ ಸರ್ಕಾರ ನಡೆಸಿದ ನಿರಂತರ ಪ್ರಯತ್ನದ ಫಲವಾಗಿ ರೋಹನ್ ಅವರನ್ನು ಬಿಡುಗಡೆ ಮಾಡಿಸಲಾಗಿದೆ. ರೋಹನ್ ಭಾನುವಾರ ರಾತ್ರಿ ಸ್ವದೇಶಕ್ಕೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


