ವಿದೇಶ

ನ್ಯಾಟೋ ಮಾದರಿಯಲ್ಲಿ ಇಸ್ಲಾಮ್ ರಾಷ್ಟ್ರಗಳ ಸೇನಾ ಒಕ್ಕೂಟಕ್ಕೆ ಸೌದಿ ಪ್ರಸ್ತಾವನೆ: ಪಾಕಿಸ್ತಾನಕ್ಕೆ ನಾಯಕತ್ವ

ಇಸ್ಲಾಮಿಕ್ ರಾಷ್ಟ್ರಗಳ ಸೇನಾ ಒಕ್ಕೂಟವನ್ನು ಅಸ್ತಿತ್ವಕ್ಕೆ ತರಲು ಸೌದಿ ಅರೇಬಿಯಾ ಯೋಜನೆ ರೂಪಿಸಿದೆ. ನ್ಯಾಟೋ ರೀತಿಯಲ್ಲಿ ಸೇನಾ ಒಕ್ಕೂಟಕ್ಕೆ ಪಾಕಿಸ್ತಾನ ನೇತೃತ್ವ ವಹಿಸಲಿದೆ.

ನ್ಯಾಟೋ ಮಾದರಿಯಲ್ಲಿ ಇಸ್ಲಾಮ್ ರಾಷ್ಟ್ರಗಳ ಸೇನಾ ಒಕ್ಕೂಟಕ್ಕೆ ಸೌದಿ ಪ್ರಸ್ತಾವನೆ: ಪಾಕಿಸ್ತಾನಕ್ಕೆ ನಾಯಕತ್ವ
ನ್ಯಾಟೋ ಮಾದರಿಯಲ್ಲಿ ಇಸ್ಲಾಮ್ ರಾಷ್ಟ್ರಗಳ ಸೇನಾ ಒಕ್ಕೂಟಕ್ಕೆ ಸೌದಿ ಪ್ರಸ್ತಾವನೆ: ಪಾಕಿಸ್ತಾನಕ್ಕೆ ನಾಯಕತ್ವ
Published On :

ರಿಯಾದ್: ಇಸ್ಲಾಮಿಕ್ ರಾಷ್ಟ್ರಗಳ ಸೇನಾ ಒಕ್ಕೂಟವನ್ನು ಅಸ್ತಿತ್ವಕ್ಕೆ ತರಲು ಸೌದಿ ಅರೇಬಿಯಾ ಯೋಜನೆ ರೂಪಿಸಿದೆ. ನ್ಯಾಟೋ (ನಾರ್ತ್‌ ಅಟ್ಲಾಂಟಿಕ್‌ ಟ್ರೀಟಿ ಆರ್ಗನೈಸೇಶನ್‌) ರೀತಿಯಲ್ಲಿ ಸೇನಾ ಒಕ್ಕೂಟಕ್ಕೆ ಪಾಕಿಸ್ತಾನ ನೇತೃತ್ವ ವಹಿಸಲಿದ್ದು, ಭಯೋತ್ಪಾದನೆ ವಿರುದ್ಧ ಹೋರಾಡುವುದು ಒಕ್ಕೂಟದ ಮುಖ್ಯ ಉದ್ದೇಶವಾಗಲಿದೆಯಂತೆ.

ಇಸ್ಲಾಮಿಕ್ ದೇಶಗಳಲ್ಲಿ ಹೆಚ್ಚುತ್ತಿರುವ ಭಯೋತ್ಪಾದನೆಯನ್ನು ನಿರ್ನಾಮ ಮಾಡುವ ಉದ್ದೇಶದಿಂದ ಸೇನಾ ಒಕ್ಕೂಟ ಜಾರಿಗೆ ತರುವ ಪ್ರಸ್ತಾವನೆ ಬಂದಿದೆ ಎಂದು ಪಾಕಿಸ್ತಾನದ ಮಾಧ್ಯಮ ವರದಿ ಮಾಡಿದೆ. ಸೌದಿ ಅರೇಬಿಯವು ಬೃಹತ್‌ ಸೇನಾ ಕವಾಯತನ್ನು ಆಯೋಜಿಸಿರುವ ಬೆನ್ನಲ್ಲೇ ಈ ಯೋಜನೆಯ ಬಗ್ಗೆ ಪ್ರಸ್ತಾವನೆ ಬಂದಿದೆ.

ಅಚ್ಚರಿಯೆಂದರೆ ಭಯೋತ್ಪಾದನೆ ವಿರುದ್ಧ ಹೋರಾಡಲು ಸೇನಾ ಒಕ್ಕೂಟ ಎಂದು ಸೌದಿ ಅರೇಬಿಯಾ ಹೇಳುತ್ತಿದೆಯಾದರೂ, ಶಿಯಾ ಬಹುಸಂಖ್ಯಾತರಿರುವ ಇರಾನ್ ನ್ನು ಈ ಒಕ್ಕೂಟದಿಂದ ಹೊರಗಿಡುವ ಸಾಧ್ಯತೆ ಇದೆ.  ಅಮೆರಿಕ- ಸೌದಿ ಅರೇಬಿಯಾ ಸಂಬಂಧ ಹದಗೆಡುತ್ತಿರುವ ಬೆನ್ನಲ್ಲೇ ಸೌದಿ ನ್ಯಾಟೋ ಮಾದರಿಯಲ್ಲಿ  ಸೇನಾ ಒಕ್ಕೂಟದ ಪ್ರಸ್ತಾವನೆ ಮುಂದಿಟ್ಟಿರುವುದು ಅಚ್ಚರಿಯ ಬೆಳವಣಿಗೆಯಾಗಿದೆ.  ಸೋವಿಯತ್‌ ಒಕ್ಕೂಟವನ್ನು ಎದುರಿಸಲು 1949ರಲ್ಲಿ ನ್ಯಾಟೋ ರಚನೆಯಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.