ಮದರ್ ತೆರೆಸಾಗೆ ವ್ಯಾಟಿಕನ್ ನಿಂದ ಸಂತ ಪದವಿ ಪ್ರದಾನ
ಮದರ್ ತೆರೆಸಾ ಅವರನ್ನು ಸಂತರೆಂದು ಪರಿಗಣಿಸಲಾಗುವುದು ಎಂದು ವ್ಯಾಟಿಕನ್ ನ ಆಯೋಗವೊಂದು...

ವ್ಯಾಟಿಕನ್: ಮದರ್ ತೆರೆಸಾ ಅವರನ್ನು ಸಂತರೆಂದು ಪರಿಗಣಿಸಲಾಗುವುದು ಎಂದು ವ್ಯಾಟಿಕನ್ ನ ಆಯೋಗವೊಂದು ಮಂಗಳವಾರ ತಿಳಿಸಿದೆ. ಅವರು ಭಾರತದ ಕೋಲ್ಕತ್ತಾದಲ್ಲಿ ಬಡವರ ಪರವಾಗಿ ಕೆಲಸ ಮಾಡಿದ್ದಕ್ಕೆ ಈ ಗೌರವ ಸಿಗಲಿದೆ.
ಮದರ್ ತೆರೆಸಾ ಅವರು ನಿಧನಹೊಂದಿ ಸುಮಾರು ಎರಡು ದಶಕಗಳ ನಂತರ ಹಿರಿಯ ಪಾದ್ರಿಗಳ ಸಮಿತಿ ಅವರಿಗೆ ಅತ್ಯುನ್ನತ ಗೌರವ ನೀಡಿದೆ.
ಪೋಪ್ ಫ್ರಾನ್ಸಿಸ್ ಅವರು ತೀರ್ಪಿಗೆ ಅನುಮೋದನೆ ನೀಡಿ ಸಹಿ ಹಾಕಲಿದ್ದು, ಇದರ ಅಧಿಕೃತ ಘೋಷಣೆ ಸದ್ಯದಲ್ಲಿಯೇ ಬೃಹತ್ ಸಮಾರಂಭವೊಂದರಲ್ಲಿ ನಡೆಯಲಿದೆ.
ಸಾಧು ಸಂತರ ಪದವಿಗೆ ಐದು ಮಂದಿಯ ಹೆಸರನ್ನು ಸೂಚಿಸಲಾಗಿತ್ತು. ಅವರಲ್ಲಿ ಅಲ್ಬೇನಿಯನ್ ಸನ್ಯಾಸಿಗಳು ಮತ್ತು ಮಿಷನರಿಯೂ ಒಬ್ಬರಾಗಿದ್ದರು.
ಸಂತ ಪದವಿ ಘೋಷಣೆ ಈ ವರ್ಷ ಸೆಪ್ಟೆಂಬರ್ 4ರಂದು ಮದರ್ ತೆರೆಸಾ ನಿಧನ ಹೊಂದಿದ ವರ್ಷಾವಧಿ ಕಾರ್ಯಕ್ರಮದಲ್ಲಿ ಘೋಷಣೆ ಮಾಡಲಾಗುತ್ತದೆ. ಅವರ ನೆನಪಿನಲ್ಲಿ ಚರ್ಚಿನ ಬೆಳ್ಳಿಹಬ್ಬ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮ ಭಾರತದಲ್ಲಿ ನಡೆಸುವ ಯೋಜನೆ ಇತ್ತಾದರೂ ಕೊನೆ ಕ್ಷಣದ ಬದಲಾವಣೆ ನಂತರ ರೋಮ್ ನಲ್ಲಿ ನಡೆಯುವ ಸಾಧ್ಯತೆಯಿದೆ.
ವಿಶ್ವಾದ್ಯಂತ ತಮ್ಮ ಸಮಾಜ ಸೇವೆಯಿಂದ ಹೆಸರು ಗಳಿಸಿದ್ದ ಮದರ್ ತೆರೆಸಾ ಕೋಲ್ಕತ್ತಾದಲ್ಲಿ ಬಡವರು, ನಿರ್ಗತಿಕರು, ವೃದ್ಧರು, ರೋಗಪೀಡಿತರ ಆರೈಕೆ ಮಾಡಿದ್ದಕ್ಕಾಗಿ ಅವರಿಗೆ ನೊಬೆಲ್ ಪ್ರಶಸ್ತಿ ಲಭಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


