ಐವರಿ ಕೋಸ್ಟ್ ನಲ್ಲಿ ಉಗ್ರರ ದಾಳಿ: 16 ಜನರ ದುರ್ಮರಣ, 125 ಗಾಯ
ಆಫ್ರಿಕಾ ರಾಷ್ಟ್ರದ ಐವರಿ ಕೋಸ್ಟ್ ನ ಗ್ರ್ಯಾಂಡ್ ಬಾಸ್ಸಮ್ ಕಡಲ ಕಿನಾರೆಯಲ್ಲಿರುವ ಹೋಟೆಲ್ ಗಳನ್ನು ಗುರಿಯಾಗಿಸಿಕೊಂಡಿರುವ ಉಗ್ರರು ಗುಂಡಿನ ದಾಳಿಯನ್ನು ನಡೆಸಿದ್ದು...

ಐವರಿ ಕೋಸ್ಟ್: ಆಫ್ರಿಕಾ ರಾಷ್ಟ್ರದ ಐವರಿ ಕೋಸ್ಟ್ ನ ಗ್ರ್ಯಾಂಡ್ ಬಾಸ್ಸಮ್ ಕಡಲ ಕಿನಾರೆಯಲ್ಲಿರುವ ಹೋಟೆಲ್ ಗಳನ್ನು ಗುರಿಯಾಗಿಸಿಕೊಂಡಿರುವ ಉಗ್ರರು ಗುಂಡಿನ ದಾಳಿಯನ್ನು ನಡೆಸಿದ್ದು, ಪರಿಣಾಮ 16 ಮಂದಿ ದುರ್ಮರಣವನ್ನಪ್ಪಿ, 125ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಭಾನುವಾರ ನಡೆದಿದೆ.
ಐವರಿ ಕೋಸ್ಟ್ ಮೇಲೆ ತಮ್ಮ ಹಿಡಿತ ಸಾಧಿಸಲು ಯತ್ನ ನಡೆಸುತ್ತಿರುವ ಉಗ್ರರು ಈ ದಾಳಿಯನ್ನು ಮಾಡಿದ್ದಾರೆಂದು ಹೇಳಲಾಗುತ್ತಿತ್ತು. ಆದರೆ, ದಾಳಿ ನಂತರ ಅಲ್ ಖೈದಾ ಉಗ್ರ ಸಂಘಟನೆ ತಾನೇ ಹೊಣೆಹೊತ್ತುಕೊಂಡಿದೆ. ದಾಳಿಯಲ್ಲಿ ವಿದೇಶಿಯರೂ ಸೇರಿ 16 ಮಂದಿ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.
ಬಂದೂಕು ಹಿಡಿದುಕೊಂಡು 6 ಮಂದಿ ಬೀಚ್ ಬಳಿ ಬಂದಿದ್ದರು. ನೋಡನೋಡುತ್ತಿದ್ದಂತೆ ಎಲ್ಲರೂ ಘೋಷಣೆಗಳನ್ನು ಕೂಗುತ್ತಾ ಗುಂಡು ಹಾರಿಸಲು ಆರಂಭಿಸಿದ್ದರು. ಈ ವೇಳೆ ಹೆದರಿದ ಜನ ಓಡಲು ಆರಂಭಿಸಿದ್ದರು. ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


