ವಿದೇಶ

ಅಮೆರಿಕ ಸಹಯೋಗದೊಂದಿಗೆ ಎಲ್​ಇಟಿ, ಜೆಇಎಂ ವಿರುದ್ಧ ಭಾರತ ಸಮರ

ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳಾದ ಲಷ್ಕರ್-ಇ-ತೊಯ್ಬಾ(ಎಲ್​ಇಟಿ) ಮತ್ತು ಜೈಷ್-ಇ-ಮೊಹಮ್ಮದ್(ಜೆಇಎಂ) ವಿರುದ್ಧ ಸಮರ ನಡೆಸುವ...

ಅಮೆರಿಕ ಸಹಯೋಗದೊಂದಿಗೆ ಎಲ್​ಇಟಿ, ಜೆಇಎಂ ವಿರುದ್ಧ ಭಾರತ ಸಮರ
ನರೇಂದ್ರ ಮೋದಿ
Published On :

ವಾಷಿಂಗ್ಟನ್: ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳಾದ ಲಷ್ಕರ್-ಇ-ತೊಯ್ಬಾ(ಎಲ್​ಇಟಿ) ಮತ್ತು ಜೈಷ್-ಇ-ಮೊಹಮ್ಮದ್(ಜೆಇಎಂ) ವಿರುದ್ಧ ಸಮರ ನಡೆಸುವ ದೃಷ್ಟಿಯಿಂದ ಪರಸ್ಪರ ಸಹಯೋಗವನ್ನು ಇನ್ನಷ್ಟು ಹೆಚ್ಚಿಸಲು ಭಾರತ ಮತ್ತು ಅಮೆರಿಕ ನಿರ್ಧರಿಸಿವೆ.

ಭಾರತ ಸೇರಿದಂತೆ ಇತರ ಕಡೆಗಳಲ್ಲಿ ಭಯೋತ್ಪಾದಕ ದಾಳಿಗಳನ್ನು ನಡೆಸುತ್ತಿರುವ ಈ ಎರಡು ಉಗ್ರ ಸಂಘಟನೆಗಳ ವಿರುದ್ಧ ದಮನಕ್ಕೆ ಉಭಯ ದೇಶಗಳು ಮುಂದಾಗಿವೆ.

ಅಮೆರಿಕ ಪ್ರವಾಸದಲ್ಲಿರುವ ಭಾರತದ ವಿದೇಶಾಂಗ ಕಾರ್ಯದರ್ಶಿ ಸುಬ್ರಹ್ಮಣ್ಯಂ ಜೈಶಂಕರ್ ಮತ್ತು ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರರಾದ ಸುಸಾನ್ ಇ ರೈಸ್ ಅವರು ಶ್ವೇತ ಭವನದಲ್ಲಿ ನಡೆದ ಸಭೆಯಲ್ಲಿ ಎಲ್​ಇಟಿ, ಜೆಇಎಂ ವಿರುದ್ಧದ ಸಮರದಲ್ಲಿ ಪರಸ್ಪರ ಸಹಯೋಗ ಹೆಚ್ಚಿಸಿಕೊಳ್ಳುವ ಒಪ್ಪಂದಕ್ಕೆ ಬಂದರು.

2008ರ ಮುಂಬೈ ದಾಳಿಗೆ ಎಲ್​ಇಟಿ ಕಾರಣವಾಗಿದ್ದರೆ, ಪಠಾಣ್ ಕೋಟ್​ನ ಭಾರತೀಯ ವಾಯುನೆಲೆ ಮೇಲಿನ ದಾಳಿಗೆ ಜೆಇಎಂ ಕಾರಣ ಎಂದು ಆಪಾದಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.