ಬಾಂಬ್ ದಾಳಿ ಖಂಡಿಸಿದ ಟರ್ಕಿ ಪ್ರಧಾನಿ; ಇಸಿಸ್ ನಿಂದ ದುಷ್ಕೃತ್ಯ ಎಂದ ಬಿನಾಲಿ ಯಿಲ್ಡ್ರೀಮ್
ಟರ್ಕಿಯ ಅತಾತುರ್ಕ್ ವಿಮಾನ ನಿಲ್ದಾಣದಲ್ಲಿ ಮಂಗಳವಾರ ತಡರಾತ್ರಿ ಸಂಭವಿಸಿದ ಭೀಕರ ಬಾಂಬ್ ದಾಳಿಯ ಹಿಂದೆ ಇಸಿಸ್ ಕೈವಾಡವಿದೆ ಎಂದು ಟರ್ಕಿ ಪ್ರಧಾನಿ ಬಿನಾಲಿ ಯಿಲ್ಡ್ರೀಮ್ ಹೇಳಿದ್ದಾರೆ...

ಇಸ್ತಾನ್ ಬುಲ್: ಟರ್ಕಿಯ ಅತಾತುರ್ಕ್ ವಿಮಾನ ನಿಲ್ದಾಣದಲ್ಲಿ ಮಂಗಳವಾರ ತಡರಾತ್ರಿ ಸಂಭವಿಸಿದ ಭೀಕರ ಬಾಂಬ್ ದಾಳಿಯ ಹಿಂದೆ ಇಸಿಸ್ ಕೈವಾಡವಿದೆ ಎಂದು ಟರ್ಕಿ ಪ್ರಧಾನಿ ಬಿನಾಲಿ ಯಿಲ್ಡ್ರೀಮ್ ಹೇಳಿದ್ದಾರೆ.
ಇಸ್ತಾನ್ ಬುಲ್ ನ ಅತ್ಯಂತ ಜನನಿಭಿಡ ವಿಮಾನ ನಿಲ್ದಾಣದಲ್ಲಿ ಮಂಗಳವಾರ ತಡರಾತ್ರಿ ಸಂಭವಿಸಿದ ತ್ರಿವಳಿ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಕನಿಷ್ಟ 36 ಮಂದಿ ಸಾವನ್ನಪ್ಪಿ, 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಘಟನೆಯ ಬೆನ್ನಲ್ಲೇ ಮಂಗಳವಾರ ತಡರಾತ್ರಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಟರ್ಕಿ ಪ್ರಧಾನಿ ಬಿನಾಲಿ ಯಿಲ್ಡ್ರೀಮ್ ಘಟನೆಯನ್ನು ತೀವ್ರವಾಗಿ ಖಂಡಿಸಿದರು. ಅಲ್ಲದೆ ಬಾಂಬ್ ದಾಳಿಯ ಹಿಂದೆ ಐಎಸ್ ಐಎಲ್ ಅಥವಾ ಇಸಿಸ್ ಕೈವಾಡವಿದೆ ಎಂದು ಆರೋಪಿಸಿದರು.
"ಭೀಕರ ಬಾಂಬ್ ದಾಳಿಯ ಹಿಂದೆ ಮೇಲ್ನೋಟಕ್ಕೆ ಇಸ್ಲಾಮಿಕ್ ಉಗ್ರ ಸಂಘಟನೆ ಕೈವಾಡದ ಕುರಿತು ಶಂಕೆ ವ್ಯಕ್ತವಾಗುತ್ತಿದೆ. ವಿಮಾನ ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳನ್ನು ಭದ್ರತಾ ಸಿಬ್ಬಂದಿ ಪರಿಶೀಲಿಸುತ್ತಿದ್ದು, ತನಿಖೆ ನಡೆಸುತ್ತಿದ್ದಾರೆ. ಡಾಯಿಷ್ ಮೂಲದ ಉಗ್ರ ಸಂಘಟನೆ ಐಎಸ್ ಐಎಲ್ (Islamic State of Iraq of the Levant) ಅಥವಾ ಇಸಿಸ್ ಈ ದಾಳಿ ನಡೆಸಿರುವ ಶಂಕೆ ಇದೆ. ಭದ್ರತಾ ಸಿಬ್ಬಂದಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಬಿನಾಲಿ ಯಿಲ್ಡ್ರೀಮ್ ಹೇಳಿದರು.
ಇನ್ನು ಈ ಭೀಕರ ಬಾಂಬ್ ದಾಳಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವಿಶ್ವಾದ್ಯಂತ ಉಗ್ರರ ಕುಕೃತ್ಯಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


