ಬ್ರೆಕ್ಸಿಟ್: ಬ್ರಿಟನ್ ವಿಪಕ್ಷ ನಾಯಕನ ರಾಜೀನಾಮೆ ಇಲ್ಲ
ಬ್ರಿಟನ್ ಪ್ರಧಾನಿ ಡೇವಿಡ್ ಕೆಮರಾನ್ ರಾಜೀನಾಮೆ ನೀಡಿದ್ದರೆ, ಬ್ರಿಟನ್ ನ ಪ್ರತಿಪಕ್ಷ ನಾಯಕ ಜೆರೆಮಿ ಕಾರ್ಬಿನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ.

ಲಂಡನ್: ಬ್ರಿಟನ್ ಯುರೋಪ್ ಒಕ್ಕೂಟದಿಂದ ಹೊರನಡೆದೆದ ಪರಿಣಾಮ ಈಗಾಗಲೇ ಬ್ರಿಟನ್ ಪ್ರಧಾನಿ ಡೇವಿಡ್ ಕೆಮರಾನ್ ರಾಜೀನಾಮೆ ನೀಡಿದ್ದರೆ, ಬ್ರಿಟನ್ ನ ಪ್ರತಿಪಕ್ಷ ನಾಯಕ ಜೆರೆಮಿ ಕಾರ್ಬಿನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಅವರ ಆಪ್ತರು ಮಾಹಿತಿ ನೀಡಿರುವ ಬಗ್ಗೆ ಬಿಬಿಸಿ ವರದಿ ಮಾಡಿದೆ.
ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬಂದಿದ್ದು, ಲೇಬರ್ ಪಕ್ಷದ ಮುಂದಿನ ಕಾರ್ಯತಂತ್ರದ ಬಗ್ಗೆ ಬ್ರಿಟನ್ ನ ವಿರೋಧ ಪಕ್ಷದ ನಾಯಕ ಜೆರೆಮಿ ಕಾರ್ಬಿನ್ ಲಂಡನ್ ನಲ್ಲಿ ಮಾತನಾಡಲಿದ್ದಾರೆ ಎಂದು ಜೆರೆಮಿ ಕಾರ್ಬಿನ್ ಅವರ ಆಪ್ತರು ತಿಳಿಸಿದ್ದಾರೆ.
ಲೇಬರ್ ಪಕ್ಷದ ಇಬ್ಬರು ಸಂಸದರು ಜೆರೆಮಿ ಕಾರ್ಬಿನ್ ಅವರ ವಿರುದ್ಧ ಲೇಬರ್ ಪಕ್ಷದ ಅಧ್ಯಕ್ಷರ ಬಳಿ ಅವಿಶ್ವಾಸ ನಿರ್ಣಯ ಮಂಡಿಸಿದ್ದು, ಯುರೋಪ್ ಒಕ್ಕೂಟ ತೊರೆಯುವ ಬಗ್ಗೆ ಜೆರೆಮಿ ಕಾರ್ಬಿನ್ ಸ್ಪಷ್ಟ ನಿಲುವನ್ನು ಪ್ರಕಟಿಸಿಲ್ಲ ಎಂದು ಆರೋಪಿಸಿದ್ದಾರೆ. ಇಬ್ಬರು ಸಂಸದರು ಮಂಡಿಸಿರುವ ಅವಿಶ್ವಾಸ ನಿರ್ಣಯಕ್ಕೆ ಸಾಂವಿಧಾನಿಕವಾಗಿ ಯಾವುದೇ ಮಹತ್ವ ಇಲ್ಲವಾದರೂ, ಪಕ್ಷದಲ್ಲಿ ಆಂತರಿಕ ಚರ್ಚೆಗೆ ಅವಕಾಶ ಮಾಡಿಕೊಡಲಿದೆ. ಒಂದು ವೇಳೆ ವಿಪಕ್ಷ ನಾಯಕನ ವಿರುದ್ಧ ಹೆಚ್ಚಿನ ಸಂಸದರು ಅಸಮಾಧಾನ ವ್ಯಕ್ತಪಡಿಸಿದರೆ, ಗೌಪ್ಯ ಮತದಾನ ನಡೆಸಲಾಗುತ್ತದೆ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


